ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು; ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ 36 ಮಂದಿಗೆ ಗಾಯ
ಸೋಮವಾರ ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಗೂಳಿ ಪಳಗಿಸುವ ಕ್ರೀಡೆಯಾದ ಜಲ್ಲಿಕಟ್ಟು ವೇಳೆ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಕನಿಷ್ಠ 36 ಜನರು ಗಾಯಗೊಂಡಿದ್ದಾರೆ. 36 ಮಂದಿಯಲ್ಲಿ ಆರು ಮಂದಿಯನ್ನು ಚಿಕಿತ್ಸೆಗಾಗಿ ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.
ಚೆನ್ನೈ ಜನವರಿ 15: ತಮಿಳುನಾಡು (Tamil Nadu) ಸುಗ್ಗಿಯ ಹಬ್ಬವಾದ ಪೊಂಗಲ್ (Pongal) ಅನ್ನು ಆಚರಿಸುತ್ತಿರುವಾಗ, ಸೋಮವಾರ ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಗೂಳಿ ಪಳಗಿಸುವ ಕ್ರೀಡೆಯಾದ ಜಲ್ಲಿಕಟ್ಟು (Jallikattu) ವೇಳೆ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಕನಿಷ್ಠ 36 ಜನರು ಗಾಯಗೊಂಡಿದ್ದಾರೆ. 36 ಮಂದಿಯಲ್ಲಿ ಆರು ಮಂದಿಯನ್ನು ಚಿಕಿತ್ಸೆಗಾಗಿ ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದಕ್ಕೂ ಮುನ್ನ ತಮಿಳುನಾಡಿನ ಪುದುಕೊಟ್ಟೈನಲ್ಲಿ 29 ಮಂದಿ ಗಾಯಗೊಂಡಿದ್ದರು.
ಕಾರ್ಯಕ್ರಮಕ್ಕೆ 1,000 ಹೋರಿಗಳು ಮತ್ತು 600 ಪಳಗಿಸುವವರನ್ನು ನೋಂದಾಯಿಸಲಾಗಿದೆ. ಇದು ಸೋಮವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು ಮತ್ತು ಮುಂದಿನ ಮೂರು ದಿನಗಳವರೆಗೆ ನಡೆಯಲಿದೆ. ರಾಜ್ಯದಾದ್ಯಂತ ಜನರು ಮಂಗಳಕರ ತಮಿಳು ತಿಂಗಳ ‘ಥಾಯ್’ ಅನ್ನು ಪ್ರಾರಂಭಿಸಿದರು, ಸಮೃದ್ಧಿಯ ಸಂಕೇತವಾಗಿ ಅಕ್ಕಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ಖಾದ್ಯ ‘ಪೊಂಗಲ್’ ಅನ್ನು ತಯಾರಿಸುತ್ತಾರೆ.
#WATCH | Tamil Nadu: 45 people, including two police personnel, were injured in the Avaniapuram Jallikattu event and 9 people were referred to Government Rajaji Hospital in Madurai for further treatment. pic.twitter.com/Nx0SLNXI5E
— ANI (@ANI) January 15, 2024
ಜಲ್ಲಿಕಟ್ಟು ಆಟ ಹೇಗಿರುತ್ತದೆ?
ಸೂರ್ಯ ಪೊಂಗಲ್ ಆಚರಿಸುವ ಮಂಗಳಕರ ತಿಂಗಳ ಮೊದಲ ದಿನದಂದು, ಜಲ್ಲಿಕಟ್ಟು ಆಯೋಜಿಸಲಾಗುತ್ತದೆ. ಗೂಳಿಯನ್ನು ಹಿಡಿಯುವ ಈ ಕ್ರೀಡೆಯ ಎಂಟು ಸುತ್ತುಗಳಿದ್ದು, ಅವನಿಯಪುರಂನಲ್ಲಿ ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಆಟ ನಡೆಯುತ್ತದೆ. ಪ್ರತಿ ಸುತ್ತಿಗೆ, ಕನಿಷ್ಠ 70 ಗೂಳಿಗಳನ್ನು ವಡಿವಾಸಲ್ (ಬುಲ್ ಟನಲ್) ನಿಂದ ಬಿಡಲಾಗುತ್ತದೆ. ಹೋರಿಗಳು ಎಲ್ಲೆಂದರಲ್ಲಿ ಓಟ ಆರಂಭಿಸಿದಾಗ ಅಂಥಾ ಹೋರಿಗಳನ್ನು ಗರಿಷ್ಠ ಸಂಖ್ಯೆಯನ್ನು ನಿಯಂತ್ರಿಸಬಲ್ಲ ಪಳಗಿಸುವವರನ್ನು ಮುಂದಿನ ಸುತ್ತುಗಳಿಗೆ ಕಳುಹಿಸಲಾಗುತ್ತದೆ. .
ಕ್ರೀಡೆಯ ನಿಯಮಗಳು
- ಪಳಗಿಸುವವರು ಗೂಳಿಯ ಕೊಂಬುಗಳನ್ನು ಹಿಡಿಯುವುದು ಮತ್ತು ಅದರ ಕಾಲುಗಳನ್ನು ಲಾಕ್ ಮಾಡುವಂತೆ ಮಾಡುವುದಕ್ಕೆ ಅನುಮತಿ ಇಲ್ಲ
- 100 ಮೀಟರ್‌ಗಳನ್ನು ದಾಟುವವರೆಗೆ ಅಥವಾ ಅದು ಮೂರು ಸ್ಪಿನ್‌ಗಳನ್ನು ಪೂರ್ಣಗೊಳಿಸುವವರೆಗೆ ಹೋರಿಯನ್ನು ಅನ್ನು ಹಿಡಿದಿಟ್ಟುಕೊಂಡರೆ ಪಳಗಿಸುವವರನ್ನು ವಿಜೇತ ಎಂದು ಪರಿಗಣಿಸಲಾಗುತ್ತದೆ.
- ಗೂಳಿ ಸುರಂಗದಿಂದ ಹೊರಬಂದ ನಂತರ ಒಬ್ಬ ಪಳಗಿಸುವವನಿಗೆ ಮಾತ್ರ ಅದನ್ನು ಹಿಡಿಯಲು ಅವಕಾಶವಿರುತ್ತದೆ.
ಇದನ್ನೂ ಓದಿ: Makar Sankranti Pongal: ಸಂಕ್ರಾಂತಿ ಹಬ್ಬಕ್ಕೆ ವೈವಿಧ್ಯಮಯ ಪೊಂಗಲ್ ಮಾಡಿ ಸವಿಯಿರಿ
ಸುರಕ್ಷತಾ ಮುನ್ನೆಚ್ಚರಿಕೆಗಳು
- ಗೂಳಿಗಳನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಸಂಪೂರ್ಣ ವೈದ್ಯಕೀಯ ತಪಾಸಣೆಯ ನಂತರವೇ ಬಿಡಲಾಗುವುದು.
- ಅದೇ ರೀತಿ, ಗೂಳಿ ಪಳಗಿಸುವವರು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ.
- ತುರ್ತು ಸಂದರ್ಭಗಳಲ್ಲಿ ಏನಾದರೂ ಅನಾಹುತ ಆದರೆ ಅವರನ್ನುಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲು ಬಹು ಆಂಬ್ಯುಲೆನ್ಸ್‌ಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗುತ್ತದೆ. ಅವನಿಯಪುರಂನಲ್ಲಿ ಸುಮಾರು 800 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ತಕ್ಷಣದ ವೈದ್ಯಕೀಯ ನೆರವು ಒದಗಿಸಲು ಕನಿಷ್ಠ 20 ವೈದ್ಯಕೀಯ ತಂಡಗಳು ಸ್ಥಳದಲ್ಲಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ