ಮಹತ್ವದ ನಿರ್ಧಾರ ತೆಗೆದುಕೊಂಡ ಕೇಂದ್ರ: ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಮುಕ್ತ ಸಂಚಾರ ಇಲ್ಲ
ಭಾರತ-ಮ್ಯಾನ್ಮಾರ್ ಗಡಿಯ ಎರಡೂ ಬದಿಯಲ್ಲಿ ಮುಕ್ತ ಓಡಾಟವನ್ನು ಭಾರತ ಸರ್ಕಾರ ನಿರ್ಬಂಧಿಸುವ ಕ್ರಮವನ್ನು ತೆಗೆದುಕೊಂಡಿದೆ. ಎರಡೂ ಬದಿಯಲ್ಲಿ ವಾಸಿಸುವ ಜನರು ವೀಸಾ ಇಲ್ಲದೆ ಗಡಿದಾಟುವಂತಿಲ್ಲ ಎಂದು ಹೇಳಿದೆ. ಈ ಹಿಂದೆ 16 ಕಿ.ಮೀನ ಒಳಗೆ ಫ್ರೀ ಮೂವ್‌ಮೆಂಟ್ ರಿಜಿಮ್ (ಎಫ್‌ಎಂಆರ್) ಮೂಲಕ ಹೋಗಬಹುದಿತ್ತು.
ಭಾರತ-ಮ್ಯಾನ್ಮಾರ್ ಗಡಿಯ (India-Myanmar border) ಎರಡೂ ಬದಿಯಲ್ಲಿ ಮುಕ್ತ ಓಡಾಟವನ್ನು ಭಾರತ ಸರ್ಕಾರ ನಿರ್ಬಂಧಿಸುವ ಕ್ರಮವನ್ನು ತೆಗೆದುಕೊಂಡಿದೆ. ಎರಡೂ ಬದಿಯಲ್ಲಿ ವಾಸಿಸುವ ಜನರು ವೀಸಾ ಇಲ್ಲದೆ ಗಡಿದಾಟುವಂತಿಲ್ಲ ಎಂದು ಹೇಳಿದೆ. ಈ ಹಿಂದೆ 16 ಕಿ.ಮೀನ ಒಳಗೆ ಫ್ರೀ ಮೂವ್‌ಮೆಂಟ್ ರಿಜಿಮ್ (ಎಫ್‌ಎಂಆರ್) ಮೂಲಕ ಹೋಗಬಹುದಿತ್ತು. ಆದರೆ ಇದೀಗ ಈ ಮೂವ್ಮೆಂಟ್ಗೆ ತಡೆ ನೀಡಲಾಗಿದೆ. ಕೇಂದ್ರ ಸರ್ಕಾರವು ಇಡೀ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಸುಧಾರಿತ ಸ್ಮಾರ್ಟ್ ಫೆನ್ಸಿಂಗ್ ವ್ಯವಸ್ಥೆಗಾಗಿ ಟೆಂಡರ್ ಪ್ರಾರಂಭಿಸಲು ನಿರ್ಧರಿಸಿದೆ. ಶೀಘ್ರದಲ್ಲೇ ನಾವು ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ FMR (Free Movement Regime)ನ್ನು ಕೊನೆಗೊಳಿಸಲಿದ್ದೇವೆ. ಸಂಪೂರ್ಣ ಗಡಿಯಲ್ಲಿ ಬೇಲಿ ಹಾಕಲಾಗುವುದು ಹಾಗೂ ಮುಂದಿನ ನಾಲ್ಕೂವರೆ ವರ್ಷಗಳಲ್ಲಿ ಬೇಲಿ ಹಾಕುವ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಮೂಲಕ ಮೀಸಾ ಇಲ್ಲದೆ ದೇಶದ ಒಳಗೆ ಬರುವಂತಿಲ್ಲ ಎಂದು ಭಾರತ ಸರ್ಕಾರ ಹೇಳಿದೆ.
ಭಾರತದ ಮೇಲೆ ದಾಳಿ ಹಾಗೂ ಬಂಡಾಯ ಗುಂಪುಗಳು ಪಲಾಯನ ಮಾಡಲು ಈ ಗಡಿ ಭಾಗವನ್ನು ಬಳಸಲಾಗುತ್ತಿತ್ತು. ಇದನ್ನು ತಡೆಯಲು ಮಾತ್ರವಲ್ಲದೆ, ಅಕ್ರಮ ವಲಸಿಗರ ಒಳಹರಿವು, ಡ್ರಗ್ಸ್ ಮತ್ತು ಚಿನ್ನದ ಕಳ್ಳಸಾಗಣೆಗೆ ಕಡಿವಾಣ ಹಾಕಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. 2023ರ ಸೆಪ್ಟೆಂಬರ್ನಲ್ಲಿ, ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಅಕ್ರಮ ವಲಸೆಯನ್ನು ನಿಗ್ರಹಿಸಲು ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಎಫ್ಎಂಆರ್ನ್ನು ಶಾಶ್ವತವಾಗಿ ಮುಚ್ಚುವಂತೆ ಕೇಂದ್ರವನ್ನು ಒತ್ತಾಯಿಸಿದ್ದರು.
ರಾಜ್ಯವು ರಾಷ್ಟ್ರೀಯ ನಾಗರಿಕರ ನೋಂದಣಿ ಮತ್ತು ಮ್ಯಾನ್ಮಾರ್ ಗಡಿಯ ಬೇಲಿ ಹಾಕುವ ಬಗ್ಗೆ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಈಗಾಗಲೇ ಮಣಿಪುರವು ಮ್ಯಾನ್ಮಾರ್‌ನೊಂದಿಗೆ ಸುಮಾರು 390 ಕಿಮೀ ಸರಂಧ್ರ ಗಡಿಯನ್ನು ಹಂಚಿಕೊಂಡಿದೆ. ಅದರಲ್ಲಿ ಸುಮಾರು 10 ಕಿಮೀ ಮಾತ್ರ ಬೇಲಿಯಿಂದ ಸುತ್ತುವರಿದಿದೆ.
ಇದನ್ನೂ ಓದಿ: ಇಂಡೋ-ಮ್ಯಾನ್ಮಾರ್ ಗಡಿ ಬಳಿ ನಾಗಾ ಬಂಡುಕೋರರ ಶಿಬಿರ ನಾಶ ಮಾಡಿದ ಅರುಣಾಚಲ ಪೊಲೀಸ್
ಭಾರತ ಮತ್ತು ಮ್ಯಾನ್ಮಾರ್ ನಡುವಿನ ಗಡಿಯು ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶಗಳ ನಾಲ್ಕು ರಾಜ್ಯಗಳಲ್ಲಿ 1,643 ಕಿ.ಮೀ. FMR ಎರಡು ದೇಶಗಳ ನಡುವಿನ ಪರಸ್ಪರ ಒಪ್ಪಿಗೆಯ ವ್ಯವಸ್ಥೆಯಾಗಿದ್ದು, ಗಡಿಯಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ವೀಸಾ ಇಲ್ಲದೆ ಇತರ ದೇಶದೊಳಗೆ 16 ಕಿ.ಮೀ ವರೆಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಎಫ್‌ಎಂಆರ್ ಅಡಿಯಲ್ಲಿ, ಭಾರತದ ಪ್ರಜೆ ಅಥವಾ ಮ್ಯಾನ್ಮಾರ್‌ನ ಪ್ರಜೆಯಾಗಿರುವ ಮತ್ತು ಗಡಿಯ ಎರಡೂ ಬದಿಯಲ್ಲಿರುವ 16 ಕಿಮೀ ವ್ಯಾಪ್ತಿಯಲ್ಲಿರುವ ಯಾವುದೇ ಪ್ರದೇಶದ ನಿವಾಸಿಯಾಗಿರುವ ಗುಡ್ಡಗಾಡು ಬುಡಕಟ್ಟು ಜನಾಂಗದ ಪ್ರತಿಯೊಬ್ಬ ವ್ಯಕ್ತಿಯೂ ಗಡಿ ಪಾಸ್‌ನಿಂದ ಒಬ್ಬರೊಂದಿಗೆ ಗಡಿ ದಾಟಬಹುದು. ಆದರೆ ಇದೀಗ ಈ ಕ್ರಮವನ್ನು ತೆಗೆದು ಹಾಕಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Wed, 3 January 24