AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀನು ಮದುವೆಯಾಗುತ್ತಿರುವ ಗಂಡು ನನ್ನಪ್ಪ; ವಧುವಿಗೆ ಕರೆಮಾಡಿ ಶಾಕ್ ಕೊಟ್ಟ ಯುವತಿ

ಉತ್ತರ ಪ್ರದೇಶದ ಮೊರಾದಾಬಾದ್‌ನ ಠಾಕೂರ್ ದ್ವಾರ ಪ್ರದೇಶದಲ್ಲಿ ಈಗಾಗಲೇ ವಿವಾಹವಾದ ವ್ಯಕ್ತಿಯೊಬ್ಬ ರಹಸ್ಯವಾಗಿ ಎರಡನೇ ಮದುವೆಗೆ ಮಾಡಿದ ಪ್ರಯತ್ನವನ್ನು ಸಮಾರಂಭದ ಕೆಲವೇ ಗಂಟೆಗಳ ಮೊದಲು ಮಗಳೇ ಹಾಳು ಮಾಡಿದ್ದಾಳೆ. ವರನ ಚಿಕ್ಕ ಮಗಳು ವಧುವಿನ ಕುಟುಂಬಕ್ಕೆ ಕರೆ ಮಾಡಿ ಅವನ ವಂಚನೆಯನ್ನು ಬಹಿರಂಗಪಡಿಸಿದ್ದಾಳೆ. ಆಕೆಯ ಕುಟುಂಬಕ್ಕೆ ತನ್ನ ತಂದೆಯ ಮೊದಲ ಮದುವೆಯನ್ನು ಸಾಬೀತುಪಡಿಸುವ ಕಾನೂನು ದಾಖಲೆಗಳನ್ನು ಒದಗಿಸಿದ್ದಾಳೆ.

ನೀನು ಮದುವೆಯಾಗುತ್ತಿರುವ ಗಂಡು ನನ್ನಪ್ಪ; ವಧುವಿಗೆ ಕರೆಮಾಡಿ ಶಾಕ್ ಕೊಟ್ಟ ಯುವತಿ
WeddingImage Credit source: TV9
ಸುಷ್ಮಾ ಚಕ್ರೆ
|

Updated on: May 19, 2026 | 5:23 PM

Share

ಮೊರಾದಾಬಾದ್, ಮೇ 19: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು ಮದುವೆಯಾಗಿ, ಇಬ್ಬರು ಮಕ್ಕಳಾದ ಮೇಲೆ ಇನ್ನೊಂದು ಮದುವೆಯಾಗಲು (Wedding) ಪ್ಲಾನ್ ಮಾಡಿದ್ದರು. ಈ ಯೋಜನೆಯನ್ನು ಆತನ 2ನೇ ಮಗಳೇ ವಿಫಲಗೊಳಿಸಿದ್ದಾಳೆ. ಮೊರಾದಾಬಾದ್‌ನಲ್ಲಿ ಇಬ್ಬರು ಮಕ್ಕಳ ತಂದೆಯೊಬ್ಬರು ತಮ್ಮ ಮೊದಲ ಮದುವೆಯನ್ನು ಮುಚ್ಚಿಟ್ಟು ಮತ್ತೆ ಮದುವೆಯಾಗಲು ಮುಂದಾಗಿದ್ದರು. ಆದರೆ, ಮದುವೆ ಮೆರವಣಿಗೆಗೂ ಮುನ್ನ ಮಗಳು ವಧುವಿನ ಕುಟುಂಬಕ್ಕೆ ಕರೆ ಮಾಡಿ ಆತನ ಮದುವೆಯ ಪುರಾವೆಯನ್ನು ಕಳುಹಿಸಿದ್ದಳು. ಈ ವಿಷಯ ಪೊಲೀಸರಿಗೆ ಗೊತ್ತಾದ ಬಳಿಕ ಆರೋಪಿ ವರನಿಗೆ 5.20 ಲಕ್ಷ ರೂ. ದಂಡ ವಿಧಿಸಲಾಯಿತು.

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಈ ಸಿನಿಮೀಯ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಮಕ್ಕಳ ತಂದೆಯೊಬ್ಬರು ತಮ್ಮ ಮೊದಲ ಪತ್ನಿಯನ್ನು ವಂಚಿಸಿ ಎರಡನೇ ಮದುವೆಯಾಗಲು ಪ್ರಯತ್ನಿಸಿದರು. ಆದರೆ, ಮದುವೆ ಮೆರವಣಿಗೆ ಹೊರಡುವ ಸ್ವಲ್ಪ ಸಮಯದ ಮೊದಲು ವರನ ಮುಗ್ಧ ಮಗಳು ಚಾಣಾಕ್ಷತನದಿಂದ ವಧುವಿನ ಕುಟುಂಬಕ್ಕೆ ಕರೆ ಮಾಡಿದಳು. ನಂತರ ಕಣ್ಣೀರಿಡುತ್ತಾ ಅವಳು ತನ್ನ ತಂದೆಯ ನಿಜವಾದ ಗುರುತನ್ನು ಬಹಿರಂಗಪಡಿಸಿದಳು.

ಇದನ್ನೂ ಓದಿ: Video: ಮಾನಸಿಕ ಒತ್ತಡವೇ ಕೆಲಸ ಬಿಡಲು ಕಾರಣ; 20 ಲಕ್ಷ ರೂ ಸಂಬಳದ ಉದ್ಯೋಗ ತೊರೆದ ಯುವಕ

‘ನೀವು ಮದುವೆಯಾಗುತ್ತಿರುವುದು ನನ್ನ ಅಪ್ಪನನ್ನು. ಆತ 2 ಮಕ್ಕಳ ತಂದೆ’ ಎಂದು ಆಕೆ ಹೇಳಿದಾಗ ವಧುವಿನ ಮನೆಯವರು ನಂಬಲಿಲ್ಲ. ಕೊನೆಗೆ ಆ ಹುಡುಗಿ ತನ್ನ ತಂದೆಯ ಮೊದಲ ಮದುವೆಯ ದಾಖಲೆಗಳನ್ನು ನೀಡಿದ ಬಳಿಕ ವಧುವಿನ ಮನೆಯವರಿಗೆ ಶಾಕ್ ಆಗಿತ್ತು. ತಕ್ಷಣ ವಧುವಿನ ಕುಟುಂಬಸ್ಥರು ಮದುವೆಯ ಆಚರಣೆಗಳನ್ನು ನಿಲ್ಲಿಸಿ ಪೊಲೀಸರಿಗೆ ವಿಷಯ ತಿಳಿಸಿದರು. ನಂತರ ಗಣ್ಯರ ಸಮ್ಮುಖದಲ್ಲಿ ತುರ್ತು ಪಂಚಾಯತ್ ಕರೆಯಲಾಯಿತು.

ಇದನ್ನೂ ಓದಿ: ಅಸ್ವಸ್ಥ ಪ್ರಯಾಣಿಕನಿಗೆ ಸೀಟು ನೀಡದೆ ಬೇಜವಾಬ್ದಾರಿತನ; ಕೆಎಸ್ಸಾರ್ಟಿಸಿಗೆ 30,000 ರೂ ದಂಡ

ಆರೋಪಿ ತಂದೆಯ ಈ ಅನೈತಿಕ ಕೃತ್ಯದ ವಿರುದ್ಧ ಪಂಚಾಯತ್ ಬಲವಾದ ನಿಲುವನ್ನು ತೆಗೆದುಕೊಂಡಿತು. ಮದುವೆಯಾದರೂ ಮತ್ತೊಂದು ಮದುವೆಗೆ ರೆಡಿಯಾಗಿ ವಧುವಿನ ಕುಟುಂಬವನ್ನು ಅವಮಾನಿಸಿದ್ದಕ್ಕಾಗಿ ಮತ್ತು ಮದುವೆಯ ಸಿದ್ಧತೆಗಳ ಸಮಯದಲ್ಲಿ ಉಂಟಾದ ಆರ್ಥಿಕ ನಷ್ಟವನ್ನು ಸರಿದೂಗಿಸಲು ಪಂಚಾಯತ್ ವರನಿಗೆ 5.20 ಲಕ್ಷ ರೂ. ದಂಡ ವಿಧಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!