ಒಮಿಕ್ರಾನ್​​ಗೆ ನಿರ್ದಿಷ್ಟ ಲಸಿಕೆ ತಂತ್ರದ ಅಗತ್ಯವಿದೆ ಎಂದ ಐಸಿಎಂಆರ್; ಯಾಕೆ ಎಂಬುದಕ್ಕೆ ಇಲ್ಲಿದೆ ತಜ್ಞರ ವಿವರಣೆ

ಒಮಿಕ್ರಾನ್​​ಗೆ  ನಿರ್ದಿಷ್ಟ ಲಸಿಕೆ ತಂತ್ರದ ಅಗತ್ಯವಿದೆ ಎಂದ ಐಸಿಎಂಆರ್; ಯಾಕೆ ಎಂಬುದಕ್ಕೆ ಇಲ್ಲಿದೆ  ತಜ್ಞರ ವಿವರಣೆ
ಕೊರೊನಾ ಲಸಿಕೆ ಸಾಂಕೇತಿಕ ಚಿತ್ರ

ಕೊವಿಡ್-19 ಲಸಿಕೆಯನ್ನು ಎರಡು ಡೋಸ್ ಪಡೆದ ಜನರಲ್ಲಿ ಪ್ರತಿಕಾಯಗಳ ಪ್ರತಿಕ್ರಿಯೆಯನ್ನು ಸಂಶೋಧಕರು ಅಧ್ಯಯನ ಮಾಡಿದರು ಮತ್ತು ಫಲಿತಾಂಶಗಳನ್ನು ಲಸಿಕೆ ಹಾಕದವರೊಂದಿಗೆ ಹೋಲಿಸಿದ್ದಾರೆ. ಎಲ್ಲಾ ವ್ಯಕ್ತಿಗಳು ಒಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ.

TV9kannada Web Team

| Edited By: Rashmi Kallakatta

Jan 26, 2022 | 5:05 PM

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನ ಇತ್ತೀಚಿನ ಅಧ್ಯಯನವು ಕೊರೊನಾವೈರಸ್ ನ ಒಮಿಕ್ರಾನ್ (Omicron) ರೂಪಾಂತರಿಯಿಂದ ಉತ್ಪತ್ತಿಯಾಗುವ ಪ್ರತಿಕಾಯಗಳು ಹೆಚ್ಚು ಪ್ರಚಲಿತದಲ್ಲಿರುವ ಡೆಲ್ಟಾ ರೂಪಾಂತರವನ್ನು ಒಳಗೊಂಡಂತೆ ಇತರ ತಳಿಗಳನ್ನು ತಟಸ್ಥಗೊಳಿಸಬಹುದು ಎಂದು ಹೇಳಿದೆ. ಅದಕ್ಕಾಗಿಯೇ ಒಮಿಕ್ರಾನ್ ಗೆ ನಿರ್ದಿಷ್ಟ ಲಸಿಕೆ ತಂತ್ರದ ಅವಶ್ಯಕತೆಯಿದೆ ಎಂದು ಅಧ್ಯಯನವು ಹೇಳಿದೆ. ಒಮಿಕ್ರಾನ್ ಸೋಂಕಿಗೆ ಒಳಗಾದ ವ್ಯಕ್ತಿಗಳು ಗಮನಾರ್ಹವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೊಂದಿದ್ದಾರೆ. ಇದು ಒಮಿಕ್ರಾನ್ ಮಾತ್ರವಲ್ಲದೆ ಹೆಚ್ಚು ಪ್ರಚಲಿತದಲ್ಲಿರುವ ಡೆಲ್ಟಾ ರೂಪಾಂತರ ಸೇರಿದಂತೆ ಇತರ ಕಳವಳಕಾರಿ ರೂಪಾಂತರಗಳನ್ನು ತಟಸ್ಥಗೊಳಿಸುತ್ತದೆ ಎಂದು ಐಸಿಎಂಆರ್ ಅಧ್ಯಯನವು ಬಹಿರಂಗಪಡಿಸಿದೆ. “ಒಮಿಕ್ರಾನ್‌ನಿಂದ ಪ್ರೇರಿತವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯು ಡೆಲ್ಟಾ ರೂಪಾಂತರವನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ ಎಂದು ಸೂಚಿಸುತ್ತದೆ ಅಂದರೆ ಇದು ಡೆಲ್ಟಾವನ್ನೂ ಮೀರಿಸುತ್ತದೆ. ಹಾಗಾಗಿ ಒಮಿಕ್ರಾನ್​​ಗೆ ನಿರ್ದಿಷ್ಟ ಲಸಿಕೆ ತಂತ್ರದ ಅಗತ್ಯವನ್ನು ಒತ್ತಿಹೇಳುತ್ತದೆ ಎಂದು ಅದು ಹೇಳಿದೆ. ಐಸಿಎಂಆರ್ ವಿದೇಶಿ ದೇಶಗಳ ವಯಸ್ಕರು ಮತ್ತು ಭಾರತದ ಹದಿಹರೆಯದವರನ್ನು ಅಧ್ಯಯನ ಮಾಡಿದೆ. ಸಂಶೋಧನೆಯನ್ನು ಇನ್ನೂ ಸೂಕ್ಷ್ಮವಾಗಿ ಪರಿಶೀಲಿಸಲಾಗಿಲ್ಲ.

ಕೊವಿಡ್-19 ಲಸಿಕೆಯನ್ನು ಎರಡು ಡೋಸ್ ಪಡೆದ ಜನರಲ್ಲಿ ಪ್ರತಿಕಾಯಗಳ ಪ್ರತಿಕ್ರಿಯೆಯನ್ನು ಸಂಶೋಧಕರು ಅಧ್ಯಯನ ಮಾಡಿದರು ಮತ್ತು ಫಲಿತಾಂಶಗಳನ್ನು ಲಸಿಕೆ ಹಾಕದವರೊಂದಿಗೆ ಹೋಲಿಸಿದ್ದಾರೆ. ಎಲ್ಲಾ ವ್ಯಕ್ತಿಗಳು ಒಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದ ಮಾದರಿಗಳಲ್ಲಿ ಹೊಸ ತಳಿಯನ್ನು ಕಂಡುಹಿಡಿಯಲಾಯಿತು ಒಮಿಕ್ರಾನ್‌ನಲ್ಲಿ ಇತರ ಯಾವುದೇ ತಳಿಗಳಿಗಿಂತ ಹೆಚ್ಚು ಅಂದರೆ 30 ಕ್ಕೂ ಹೆಚ್ಚು ರೂಪಾಂತರಗಳನ್ನು ಕಂಡು ವಿಜ್ಞಾನಿಗಳು ಆಶ್ಚರ್ಯಚಕಿತರಾದರು. ಇದು ಒಮಿಕ್ರಾನ್ ಅಸ್ತಿತ್ವದಲ್ಲಿರುವ ಲಸಿಕೆಗಳಿಗೆ ನಿರೋಧಕವಾಗಿದೆ ಎಂದು ಅವರು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದಾಗಿನಿಂದ ಒಮಿಕ್ರಾನ್ ಪ್ರಪಂಚದಾದ್ಯಂತ ಹರಡಿತು. ಇದು ಕೊವಿಡ್ -19 ಸೋಂಕುಗಳಿಗೆ ಕಾರಣವಾಗುತ್ತದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ನಲ್ಲಿ ಪರಿಸ್ಥಿತಿ ಕೆಟ್ಟದಾಗಿದ್ದು, ಅಲ್ಲಿ ಕೆಲವೇ ವಾರಗಳಲ್ಲಿ ಲಕ್ಷಾಂತರ ಜನರು ರೋಗಕ್ಕೆ ತುತ್ತಾದರು.

ವಿಶ್ವ ಆರೋಗ್ಯ ಸಂಸ್ಥೆ (WHO) ಒಮಿಕ್ರಾನ್ ‘ಕಳವಳಿಕೆಯ ರೂಪಾಂತರ’ ಎಂದು ಘೋಷಿಸಿದೆ ಮತ್ತು ರೂಪಾಂತರವನ್ನು ಅಧ್ಯಯನ ಮಾಡಲು ಮತ್ತು ಅದಕ್ಕೆ ಲಸಿಕೆಗಳನ್ನು ಕಂಡುಹಿಡಿಯಲು ಹೆಚ್ಚಿನ ಸಂಪನ್ಮೂಲಗಳನ್ನು ಹೂಡಿಕೆ ಮಾಡಲು ಕರೆ ನೀಡಿದೆ.

ಇದನ್ನೂ  ಓದಿ:ಮುಂಬೈನಲ್ಲಿ ದಾಖಲಾಗುತ್ತಿರುವ ಹೊಸ ಕೊವಿಡ್​ 19 ಕೇಸ್​ಗಳಲ್ಲಿ ಶೇ.89ರಷ್ಟು ಒಮಿಕ್ರಾನ್​ ಪ್ರಕರಣಗಳು; ಸಮೀಕ್ಷೆ ವರದಿ

Follow us on

Related Stories

Most Read Stories

Click on your DTH Provider to Add TV9 Kannada