ಕಾಂಗ್ರೆಸ್​​ನಿಂದ ಭಾರತದ ವರ್ಚಸ್ಸು ನಾಶಮಾಡುವ ಪ್ರಯತ್ನ; ಪ್ರಧಾನಿ ಮೋದಿ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಇಂದು ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಇತ್ತೀಚಿನ ಶರ್ಟ್‌ಲೆಸ್ ಪ್ರತಿಭಟನೆ ಕಾಂಗ್ರೆಸ್​​ನ ಸೈದ್ಧಾಂತಿಕ ದಿವಾಳಿತನವನ್ನು ಬಹಿರಂಗಪಡಿಸಿದೆ. ಕಾಂಗ್ರೆಸ್ ನಾಯಕರು ಭಾರತದ ವರ್ಚಸ್ಸಿಗೆ ಹಾನಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಎಐ ಶೃಂಗಸಭೆಯ ಸಮಯದಲ್ಲಿ ನಡೆದ ಪ್ರತಿಭಟನೆಯು ವಿದೇಶಿ ಪ್ರತಿನಿಧಿಗಳ ಮುಂದೆ ದೇಶವನ್ನು ಕೆಣಕುವ ಪ್ರಯತ್ನವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಕಾಂಗ್ರೆಸ್​​ನಿಂದ ಭಾರತದ ವರ್ಚಸ್ಸು ನಾಶಮಾಡುವ ಪ್ರಯತ್ನ; ಪ್ರಧಾನಿ ಮೋದಿ ವಾಗ್ದಾಳಿ
Pm Modi

Updated on: Feb 27, 2026 | 10:36 PM

ನವದೆಹಲಿ, ಫೆಬ್ರವರಿ 27: ಫೆಬ್ರವರಿ 21ರಂದು ಮುಕ್ತಾಯಗೊಂಡ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾರತದ ಇಮೇಜ್ ಅನ್ನು ನಾಶಮಾಡಲು ಪ್ರಯತ್ನಿಸಿದ ಕಾಂಗ್ರೆಸ್ ಪ್ರಯತ್ನಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನ್ಯೂಸ್ 18 ರೈಸಿಂಗ್ ಭಾರತ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪಿಎಂ ಮೋದಿ, ಯುವ ಕಾಂಗ್ರೆಸ್ ಶರ್ಟ್ ಬಿಚ್ಚಿ ನಡೆಸಿದ ಪ್ರತಿಭಟನೆಯನ್ನು ಕೊಳಕು ತಂತ್ರ ಎಂದು ಟೀಕಿಸಿದರು.

“AI ಶೃಂಗಸಭೆಯು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಆಚರಣೆಯನ್ನು ಒಂದು ಪ್ರದರ್ಶನವನ್ನಾಗಿ ಮಾಡಲು ಪ್ರಯತ್ನಿಸಿತು. ವಿದೇಶಿ ಅತಿಥಿಗಳ ಮುಂದೆ ಕಾಂಗ್ರೆಸ್ ತನ್ನ ನಿಜವಾದ ಮುಖವನ್ನು ತಾನು ಬಹಿರಂಗಪಡಿಸಿಕೊಂಡಿತು. ಅಷ್ಟೇ ಅಲ್ಲದೆ ತನ್ನ ಸೈದ್ಧಾಂತಿಕ ದಿವಾಳಿತನವನ್ನೂ ಬಹಿರಂಗಪಡಿಸಿತು” ಎಂದು ಮೋದಿ ಟೀಕಿಸಿದರು.

ಇದನ್ನೂ ಓದಿ: ಮಾನವೀಯತೆ ಎಂದಿಗೂ ಸಂಘರ್ಷಕ್ಕೆ ಬಲಿಯಾಗಬಾರದು; ಇಸ್ರೇಲ್​ನಲ್ಲಿ ಪ್ರಧಾನಿ ಮೋದಿ

“ಕಾಂಗ್ರೆಸ್ ಜಿತ್ನಾ ಶರ್ಟ್ ಫಾರ್ತೇ ರಹೇ, ಹಮ್ ಅಪ್ನಾ ಕಾಮ್ ಕರ್ತೇ ರಹೇ (ಕಾಂಗ್ರೆಸ್ ಎಷ್ಟೇ ಶರ್ಟ್ ಇಲ್ಲದೆ ಪ್ರತಿಭಟನೆ ನಡೆಸಿದರೂ, ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ)” ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:35 pm, Fri, 27 February 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us