ವಿಶ್ವದ ಅತ್ಯಂತ ದುಬಾರಿಯಾದ ಈ ಪೈನಾಪಲ್ ಹಣ್ಣಿನ ಬೆಲೆ 1 ಲಕ್ಷ ರೂ.!
ವಿಶ್ವದ ಅತ್ಯಂತ ದುಬಾರಿ ಪೈನಾಪಲ್ ಹಣ್ಣೊಂದಕ್ಕೆ 1 ಲಕ್ಷ ರೂ. ಬೆಲೆ ಇದೆ. ಹಾಗಾದರೆ, ಈ ಹಣ್ಣಿನಲ್ಲಿರುವ ವಿಶೇಷತೆಯಾದರೂ ಏನು? ಎಂಬ ಕುತೂಹಲ ಮೂಡುವುದು ಸಹಜ.
ಪೈನಾಪಲ್ (pineapple) ಅಥವಾ ಅನಾನಸ್ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲ? ಸಾಮಾನ್ಯವಾಗಿ ಎಲ್ಲ ಹವಾಮಾನಕ್ಕೂ ಒಗ್ಗುವ ಈ ಹಣ್ಣು ಆರೋಗ್ಯಕ್ಕೂ ಬಹಳ ಉಪಯುಕ್ತವಾದುದು. ವಿಟಮಿನ್ ಸಿ, ಉತ್ಕರ್ಷಣ ನಿರೋಧಕ, ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳನ್ನು ಒಳಗೊಂಡಿರುವ ಪೈನಾಪಲ್ ವಿಟಮಿನ್ ಭರಿತವಾದ ಹಣ್ಣಾಗಿದೆ. ಈ ಹಣ್ಣನ್ನು ವಿಶೇಷವಾಗಿ ಚಳಿಗಾಲದಲ್ಲಿ ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಅನುಕೂಲಗಳಿವೆ. ಈ ಪೈನಾಪಲ್ ಹಣ್ಣಿನ ಬೆಲೆ 20 ರೂ.ನಿಂದ ಶುರುವಾಗುತ್ತದೆ. ಆದರೆ, ವಿಶ್ವದ ಅತ್ಯಂತ ದುಬಾರಿ ಪೈನಾಪಲ್ ಹಣ್ಣೊಂದಕ್ಕೆ 1 ಲಕ್ಷ ರೂ. ಬೆಲೆ ಇದೆ. ಹಾಗಾದರೆ, ಈ ಹಣ್ಣಿನಲ್ಲಿರುವ ವಿಶೇಷತೆಯಾದರೂ ಏನು? ಎಂಬ ಕುತೂಹಲ ಮೂಡುವುದು ಸಹಜ.
ಬಿಬಿಸಿ ವರದಿಯ ಪ್ರಕಾರ, ಹೆಲಿಗಾನ್ ಎಂಬ ಈ ಅನಾನಸ್ ಬೆಳೆಯಲು ತೆಗೆದುಕೊಳ್ಳುವ ಕೆಲಸದ ಸಮಯದಿಂದಾಗಿ ಪ್ರತಿಯೊಂದು ಹಣ್ಣಿಗೂ ಸುಮಾರು 1 ಲಕ್ಷ ರೂ. ವೆಚ್ಚವಾಗುತ್ತದೆ. ಒಂದು ಬೆಳೆ ಸಿದ್ಧವಾಗಲು ಸುಮಾರು 2ರಿಂದ 3 ವರ್ಷಗಳು ಬೇಕಾಗುತ್ತದೆ! ಇಂಗ್ಲೆಂಡಿನ ಕಾರ್ನ್‌ವಾಲ್ ದಿ ಲಾಸ್ಟ್ ಗಾರ್ಡನ್ಸ್ ಆಫ್ ಹೆಲಿಗಾನ್‌ನಲ್ಲಿ ಈ ಹಣ್ಣನ್ನು ಬೆಳೆಯಲಾಗಿತ್ತು. ಈ ಹಣ್ಣು ವಿಶ್ವದ ಅತ್ಯಂತ ದುಬಾರಿ ಬೆಲೆಯ ಪೈನಾಪಲ್ ಎನಿಸಿಕೊಂಡಿದೆ.
ಇದನ್ನೂ ಓದಿ: Pineapple Juice: ಚಳಿಗಾಲದಲ್ಲಿ ಅನಾನಸ್ ಜ್ಯೂಸ್ ಕುಡಿಯುವುದರಿಂದಾಗುವ ಪ್ರಯೋಜನಗಳೇನು?
ಈ ಪೈನಾಪಲ್ ಹಣ್ಣನ್ನು 1819ರಲ್ಲಿ ಬ್ರಿಟನ್‌ಗೆ ತರಲಾಯಿತು. ಆದರೆ, ತೋಟಗಾರಿಕಾ ತಜ್ಞರು ದೇಶದ ಹವಾಮಾನವು ಅನಾನಸ್ ಕೃಷಿಗೆ ಉತ್ತಮವಾಗಿಲ್ಲ ಎಂದು ಶೀಘ್ರದಲ್ಲೇ ಅರಿತುಕೊಂಡರು. ಆದ್ದರಿಂದ, ಅವರು ಒಂದು ತಂತ್ರವನ್ನು ರೂಪಿಸಿದರು. ವಿಶೇಷವಾದ ಮರದ ಪಿಟ್ ಆಕಾರದ ಮಡಕೆಗಳನ್ನು ವಿನ್ಯಾಸಗೊಳಿಸುವ ಮೂಲಕ ಮತ್ತು ಅದನ್ನು ಪೋಷಿಸಲು ಕೊಳೆಯುವ ಗೊಬ್ಬರ ಹಾಕಿ, ಕೃತಕ ಶಾಖದಲ್ಲಿ ಪೈನಾಪಲ್ ಬೆಳೆಯನ್ನು ಬೆಳೆದರು.
ಇದನ್ನೂ ಓದಿ: ಈ ಹಣ್ಣುಗಳನ್ನು ತಿಂದ ಬಳಿಕ ಯಾವುದೇ ಕಾರಣಕ್ಕೂ ನೀರು ಕುಡಿಯಬೇಡಿ, ಈ ಸಮಸ್ಯೆಗಳು ಕಾಡಬಹುದು
ಈ ಅನಾನಸ್ ಬೆಳೆಯಲು ಬಹಳ ಶ್ರಮ ಬೇಕಾಗುತ್ತದೆ. ಅನಾನಸ್ ಗೊಬ್ಬರದ ಸಾಗಣೆ ವೆಚ್ಚ, ಅನಾನಸ್ ಹೊಂಡಗಳ ನಿರ್ವಹಣೆಯನ್ನು ನೋಡಿಕೊಳ್ಳಲು ಸಾಕಷ್ಟು ಗಂಟೆಗಳು ಬೇಕಾಗುತ್ತದೆ. ಪ್ರತಿ ಅನಾನಸ್ ಹಣ್ಣಿಗೂ ಸುಮಾರು 1 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಹೆಲಿಗನ್ ವಕ್ತಾರರು ಬಿಬಿಸಿಗೆ ತಿಳಿಸಿದ್ದಾರೆ.
ರಾಣಿ ಎಲಿಜಬೆತ್ II ಅವರಿಗೆ ವಿಕ್ಟೋರಿಯನ್ ಹಸಿರುಮನೆಯಲ್ಲಿ ಬೆಳೆದ ಈ ಜಾತಿಯ ಎರಡನೇ ಅನಾನಸ್ ಹಣ್ಣನ್ನು ಉಡುಗೊರೆಯಾಗಿ ನೀಡಲಾಯಿತು ಎಂದು ಹೆಲಿಗನ್ ವೆಬ್‌ಸೈಟ್ ಹೇಳಿದೆ.