ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದ ಹುಲಿ; ವಿಡಿಯೋ ವೈರಲ್
ಅರಣ್ಯದ ರಸ್ತೆ ದಾಟಿದ ಹುಲಿ ಹೆಬ್ಬಾವು ಸತ್ತುಬಿದ್ದಿರುವುದನ್ನು ಕಂಡು ಹತ್ತಿರ ಬಂದು ಅದನ್ನು ತಿನ್ನಲಾರಂಭಿಸಿದೆ. ಇದಾದ ಸ್ವಲ್ಪ ಸಮಯದ ನಂತರ ಅದರ ಆರೋಗ್ಯ ಹದಗೆಡುತ್ತಿರುವುದನ್ನು ದೃಶ್ಯಗಳು ತೋರಿಸಿವೆ. ಬಳಿಕ ಹುಲಿ ವಾಂತಿ ಮಾಡಿಕೊಳ್ಳಲಾರಂಭಿಸಿದೆ. ಹಾವನ್ನು ತಿಂದು ಸ್ವಲ್ಪ ಸಮಯದ ನಂತರ ಹುಲಿ ಹುಲ್ಲನ್ನು ತಿನ್ನತೊಡಗಿತು. ಬಳಿಕ ವಾಂತಿ ಮಾಡಿಕೊಳ್ಳಲಾರಂಭಿಸಿತು. ಈ ವಿಡಿಯೋದಲ್ಲಿ ಹುಲಿ ಹಾವನ್ನು ತಿನ್ನುವುದನ್ನು ಮಾತ್ರ ತೋರಿಸಲಾಗಿದೆ. ಆ ಹಾವನ್ನು ಹುಲಿಯೇ ಬೇಟೆಯಾಡಿತ್ತಾ ಅಥವಾ ಹಾವು ಮೊದಲೇ ಸತ್ತುಬಿದ್ದಿತ್ತಾ ಎಂಬುದು ಗೊತ್ತಾಗಿಲ್ಲ.
ನೊಯ್ಡಾ, ಏಪ್ರಿಲ್ 18: ಉತ್ತರ ಪ್ರದೇಶದ (Uttar Pradesh) ಪಿಲಿಭಿತ್ ಹುಲಿ ಅಭಯಾರಣ್ಯದಲ್ಲಿ ಅಪರೂಪದ ಘಟನೆ ನಡೆದಿದೆ. ಸಫಾರಿ ಪ್ರವಾಸಿಗರು ಹುಲಿಯೊಂದು ಹೆಬ್ಬಾವನ್ನು ತಿಂದು ನಂತರ ವಾಂತಿ ಮಾಡುವುದನ್ನು ನೋಡಿದ್ದಾರೆ. ಹುಲಿ (Tiger) ಕಾಡಿನ ರಸ್ತೆ ದಾಟಿ, ಹೆಬ್ಬಾವಿನ ಮೃತದೇಹವನ್ನು ಕಂಡು, ಅದನ್ನು ತಿಂದಿದೆ. ಹಾವನ್ನು ತಿಂದು ಸ್ವಲ್ಪ ಸಮಯದ ನಂತರ ಹುಲಿ ಹುಲ್ಲನ್ನು ತಿನ್ನತೊಡಗಿತು. ಬಳಿಕ ವಾಂತಿ ಮಾಡಿಕೊಳ್ಳಲಾರಂಭಿಸಿತು. ಈ ವಿಡಿಯೋದಲ್ಲಿ ಹುಲಿ ಹಾವನ್ನು ತಿನ್ನುವುದನ್ನು ಮಾತ್ರ ತೋರಿಸಲಾಗಿದೆ. ಆ ಹಾವನ್ನು ಹುಲಿಯೇ ಬೇಟೆಯಾಡಿತ್ತಾ ಅಥವಾ ಹಾವು ಮೊದಲೇ ಸತ್ತುಬಿದ್ದಿತ್ತಾ ಎಂಬುದು ಗೊತ್ತಾಗಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ