ತಿರುವಣ್ಣಾಮಲೈ ಕಾರ್ತಿಕ ದೀಪೋತ್ಸವಕ್ಕೆ ಹೋಗುವವರಿಗೆ ಬಿಗ್ ಅಲರ್ಟ್

ತಿರುವಣ್ಣಾಮಲೈ ಕಾರ್ತಿಕ ದೀಪೋತ್ಸವ ನವೆಂಬರ್ 24ರಂದು ನಡೆಯಲಿದೆ. ಈ ಬಾರಿ ಭಾರೀ ಮಳೆ ಮತ್ತು ಸುರಕ್ಷತೆಯ ಕಾರಣದಿಂದ ಅರುಣಾಚಲ ಬೆಟ್ಟ ಏರಲು ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಭಕ್ತರು ಮಹಾ ದೀಪವನ್ನು ಕೆಳಗಿನಿಂದಲೇ ದರ್ಶನ ಮಾಡಬೇಕು. ಪ್ರಯಾಣಕ್ಕೆ ಮುನ್ನ ಜಿಲ್ಲಾಡಳಿತದ ಸೂಚನೆಗಳನ್ನು ಪರಿಶೀಲಿಸಿ, ಸುರಕ್ಷತಾ ನಿಯಮಗಳನ್ನು ಪಾಲಿಸಬೇಕೆಂದು ಎಚ್ಚರಿಕೆ ನೀಡಲಾಗಿದೆ.

ತಿರುವಣ್ಣಾಮಲೈ ಕಾರ್ತಿಕ ದೀಪೋತ್ಸವಕ್ಕೆ ಹೋಗುವವರಿಗೆ ಬಿಗ್ ಅಲರ್ಟ್
ತಿರುವಣ್ಣಾಮಲೈ
Image Credit source: PTI

Updated on: Nov 06, 2026 | 12:21 PM

ಚೆನ್ನೈ, ನವೆಂಬರ್ 06: ತಮಿಳುನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ ತಿರುವಣ್ಣಾಮಲೈನಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಸಿದ್ಧತೆಗಳು ಜೋರಾಗಿವೆ. ನವೆಂಬರ್ 24ರಂದು ಅರುಣಾಚಲೇಶ್ವರ ದೇವಸ್ಥಾನದ ಸಮೀಪದ ಅರುಣಾಚಲ ಬೆಟ್ಟದ ಮೇಲೆ ಮಹಾ ದೀಪವನ್ನು ಬೆಳಗಿಸಲಾಗುತ್ತದೆ. ಈ ವಿಶೇಷ ದಿನದಂದು ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಆದರೆ ಈ ಬಾರಿ ಭಕ್ತರು ಬೆಟ್ಟ ಹತ್ತುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಭಾರೀ ಮಳೆ ಮತ್ತು ಬೆಟ್ಟ ಪ್ರದೇಶದಲ್ಲಿನ ಸುರಕ್ಷತಾ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ.

ಕಾರ್ತಿಕ ದೀಪೋತ್ಸವದ ವಿಶೇಷತೆ ಏನು?

ತಿರುವಣ್ಣಾಮಲೈನ ಅರುಣಾಚಲೇಶ್ವರ ದೇವಸ್ಥಾನವು ಶಿವನ ಪಂಚಭೂತ ಕ್ಷೇತ್ರಗಳಲ್ಲಿ ಅಗ್ನಿ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಪೌರಾಣಿಕ ನಂಬಿಕೆಯ ಪ್ರಕಾರ, ಶಿವನು ಇಲ್ಲಿ ಅಗ್ನಿಯ ಜ್ಯೋತಿರ್ಲಿಂಗದ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ. ಇದೇ ಕಾರಣಕ್ಕೆ ಕಾರ್ತಿಕ ದೀಪೋತ್ಸವಕ್ಕೆ ವಿಶೇಷ ಮಹತ್ವವಿದೆ.

Loading...

ಕಾರ್ತಿಕ ದೀಪದ ದಿನ ಸುಮಾರು 2,668 ಅಡಿ ಎತ್ತರದ ಅರುಣಾಚಲ ಬೆಟ್ಟದ ಶಿಖರದಲ್ಲಿ ಬೃಹತ್ ದೀಪವನ್ನು ಬೆಳಗಿಸಲಾಗುತ್ತದೆ. ಈ ಮಹಾ ದೀಪವನ್ನು ಸಾವಿರಾರು ಭಕ್ತರು ದೂರದಿಂದಲೇ ದರ್ಶನ ಮಾಡುತ್ತಾರೆ. ಈ ಬಾರಿ ನವೆಂಬರ್ 24ರಂದು ಸಂಜೆ ಮಹಾ ದೀಪ ಬೆಳಗಿಸುವ ನಿರೀಕ್ಷೆಯಿದೆ.

ಗಿರಿವಲಂ ಎಂದರೇನು?
ತಿರುವಣ್ಣಾಮಲೈಗೆ ಬರುವ ಭಕ್ತರು ಅರುಣಾಚಲ ಬೆಟ್ಟದ ಸುತ್ತ ಸುಮಾರು 14 ಕಿಲೋಮೀಟರ್ ನಡೆದು ಪ್ರದಕ್ಷಿಣೆ ಹಾಕುತ್ತಾರೆ. ಇದನ್ನು ಗಿರಿವಲಂ ಎಂದು ಕರೆಯಲಾಗುತ್ತದೆ. ವಿಶೇಷವಾಗಿ ಹುಣ್ಣಿಮೆಯ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಗಿರಿವಲಂ ಮಾಡುತ್ತಾರೆ. ಕಾರ್ತಿಕ ದೀಪೋತ್ಸವದ ಸಮಯದಲ್ಲಿ ಜನಸಂದಣಿ ಹೆಚ್ಚಾಗುವುದರಿಂದ ಸಂಚಾರ ಮತ್ತು ಭದ್ರತಾ ವ್ಯವಸ್ಥೆಗಳಿಗೆ ಜಿಲ್ಲಾಡಳಿತ ಹೆಚ್ಚಿನ ಆದ್ಯತೆ ನೀಡಲಿದೆ.

ಇದನ್ನೂ ಓದಿ: ಆಗಮ ದೇವಾಲಯಗಳಿಗೆ ಅನ್ಯಧರ್ಮೀಯರ ಪ್ರವೇಶಕ್ಕೆ ಕಠಿಣ ನಿಯಮ

ಭಕ್ತರು ಗಮನಿಸಬೇಕಾದ ಪ್ರಮುಖ ಅಂಶಗಳು
– ನವೆಂಬರ್ 24ರಂದು ಅರುಣಾಚಲ ಬೆಟ್ಟ ಹತ್ತಲು ಅನುಮತಿ ಇರುವುದಿಲ್ಲ.
– ಬೆಟ್ಟದ ಮೇಲೆ ಮಹಾ ದೀಪ ಬೆಳಗಿಸುವುದನ್ನು ಭಕ್ತರು ಕೆಳಗಿನಿಂದಲೇ ದರ್ಶನ ಮಾಡಬೇಕು.
– ಭಾರೀ ಮಳೆ, ಜಾರುವ ಹಾದಿ ಮತ್ತು ಭೂಕುಸಿತದ ಅಪಾಯದ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ.
– ಪೊಲೀಸ್ ಮತ್ತು ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸಬೇಕು.
– ಪ್ರಯಾಣಕ್ಕೆ ಹೊರಡುವ ಮುನ್ನ ಸಾರಿಗೆ, ವಾಹನ ನಿಲುಗಡೆ ಮತ್ತು ದೇವಸ್ಥಾನದ ದರ್ಶನದ ಅಧಿಕೃತ ಸೂಚನೆಗಳನ್ನು ಪರಿಶೀಲಿಸಬೇಕು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us