AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ, ಅಭಿಷೇಕ್ ಬ್ಯಾನರ್ಜಿ ಅಮಾನತು, ಅರೂಪ್ ರಾಯ್ ಹೊಸ ಮುಖ್ಯಸ್ಥ

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಆಘಾತಕಾರಿ ಬೆಳವಣಿಗೆ. ಟಿಎಂಸಿ ಬಂಡಾಯ ನಾಯಕರು ದೀರ್ಘಕಾಲದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದಾರೆ. ಅವರ ಸೋದರಸಬಂಧಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅರೂಪ್ ರಾಯ್ ಅವರನ್ನು ಟಿಎಂಸಿಯ ಹೊಸ ಅಖಿಲ ಭಾರತ ಅಧ್ಯಕ್ಷರನ್ನಾಗಿ ಘೋಷಿಸಲಾಗಿದೆ. ರುತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಆಂತರಿಕ ಕಲಹ ಪಶ್ಚಿಮ ಬಂಗಾಳದ ರಾಜಕೀಯ ಭವಿಷ್ಯವನ್ನು ತೀವ್ರ ಕುತೂಹಲಕ್ಕೆ ಕಾರಣವಾಗಿಸಿದೆ.

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ, ಅಭಿಷೇಕ್ ಬ್ಯಾನರ್ಜಿ ಅಮಾನತು, ಅರೂಪ್ ರಾಯ್ ಹೊಸ ಮುಖ್ಯಸ್ಥ
ಮಮತಾ ಬ್ಯಾನರ್ಜಿ Image Credit source: PTI
ನಯನಾ ರಾಜೀವ್
|

Updated on: Jun 23, 2026 | 8:59 AM

Share

ಕೋಲ್ಕತ್ತಾ, ಜೂನ್ 23: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಭಾರಿ ಆಲಿಕಲ್ಲು ಮಳೆ ಸುರಿದಂತಾಗಿದೆ. ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ ಎದುರು ಸೋಲುಂಡಿರುವ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಒಳಗೆ ಹೊಗೆಯಾಡುತ್ತಿದ್ದ ಆಂತರಿಕ ಕಲಹವು ಈಗ ಸ್ಫೋಟಗೊಂಡಿದ್ದು, ಬಂಡಾಯ ನಾಯಕರು ದೀರ್ಘಕಾಲದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ(Mamata Banerjee) ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದಾರೆ. ಇದರ ಜೊತೆಗೆ ಮಮತಾ ಅವರ ಸೋದರಸಬಂಧಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನೂ ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಕೋಲ್ಕತ್ತಾದ ನ್ಯೂಟೌನ್‌ನಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಬಂಡಾಯ ಬಣದ ತರಾತುರಿಯ ವಿಶೇಷ ಸಭೆಯಲ್ಲಿ ಈ ಐತಿಹಾಸಿಕ ಮತ್ತು ಆಘಾತಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರುತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಶಿಬಿರವು ಮಮತಾ ಬ್ಯಾನರ್ಜಿ ಅವರನ್ನು ಹುದ್ದೆಯಿಂದ ತೆಗೆದುಹಾಕಿ, ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಅರೂಪ್ ರಾಯ್ ಅವರನ್ನು ಟಿಎಂಸಿಯ ಹೊಸ ಅಖಿಲ ಭಾರತ ಅಧ್ಯಕ್ಷರನ್ನಾಗಿ ಘೋಷಿಸಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಕಾರ್ಯವೈಖರಿ ವಿರುದ್ಧ ಅಸಮಾಧಾನಗೊಂಡಿದ್ದ ಬಂಡಾಯ ನಾಯಕರು, ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ನಿರ್ಣಯಕ್ಕೆ ಸರ್ವಾನುಮತದಿಂದ ಸಹಿ ಹಾಕಿದ್ದಾರೆ. ಪಕ್ಷದ ಸಂಘಟನೆಯಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಮರಳಿ ತರಲು 20 ಸದಸ್ಯರ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು (NWC) ರಚಿಸಲಾಗಿದೆ. ಇದರಲ್ಲಿ ಹಿರಿಯ ನಾಯಕ ಫಿರ್ಹಾದ್ ಹಕೀಮ್ ಸೇರಿದಂತೆ 12 ಪ್ರಮುಖ ನಾಯಕರನ್ನು ಸೇರಿಸಿಕೊಳ್ಳಲಾಗಿದೆ.

ವಿಧಾನಸಭೆಯಲ್ಲಿ ಬಜೆಟ್ ಮಂಡನೆಯಾದ ತಕ್ಷಣವೇ ಬಂಡಾಯ ನಾಯಕರು ರಹಸ್ಯ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಪ್ರಭಾವಿ ನಾಯಕರಾದ ಋತಬ್ರತಾ ಬ್ಯಾನರ್ಜಿ, ಫಿರ್ಹಾದ್ ಹಕೀಮ್, ಅರೂಪ್ ರಾಯ್, ಜಾವೇದ್ ಖಾನ್ ಮತ್ತು ರತಿನ್ ಘೋಷ್ ಸೇರಿದಂತೆ ಹಲವು ಶಾಸಕರು ಮತ್ತು ಮುಖಂಡರು ಭಾಗವಹಿಸಿದ್ದರು. ತಾವುಗಳೇ ಅಸಲಿ ತೃಣಮೂಲ ಕಾಂಗ್ರೆಸ್ ಎಂದು ಈ ಬಣ ಹೇಳಿಕೊಂಡಿದೆ.

ಮತ್ತಷ್ಟು ಓದಿ: ಟಿಎಂಸಿ ಬಿಕ್ಕಟ್ಟಿನ ನಡುವೆ ಸೋನಿಯಾ ಗಾಂಧಿಯನ್ನು ಭೇಟಿಯಾದ ಮಮತಾ ಬ್ಯಾನರ್ಜಿ

ಪಕ್ಷದ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದ ಮಮತಾ ಬ್ಯಾನರ್ಜಿ ಅವರನ್ನೇ ಕುರ್ಚಿಯಿಂದ ಇಳಿಸಿರುವ ಈ ನಡೆ ಇಡೀ ದೇಶದ ರಾಜಕೀಯ ವಲಯವನ್ನು ಬೆಚ್ಚಿಬೀಳಿಸಿದೆ. ಆದರೆ, ಈ ಭಾರಿ ಬಂಡಾಯದ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಲಿ ಅಥವಾ ಅವರ ಅಧಿಕೃತ ಟಿಎಂಸಿ ನಾಯಕತ್ವವಾಗಲಿ ತಕ್ಷಣಕ್ಕೆ ಯಾವುದೇ ಔಪಚಾರಿಕ ಪ್ರತಿಕ್ರಿಯೆ ನೀಡಿಲ್ಲ. ಮುಂಬರುವ ದಿನಗಳಲ್ಲಿ ಈ ಆಂತರಿಕ ಯುದ್ಧವು ಕೋರ್ಟ್ ಮೆಟ್ಟಿಲೇರುವ ಅಥವಾ ಮಮತಾ ಬ್ಯಾನರ್ಜಿ ಅವರ ಸರ್ಕಾರಕ್ಕೇ ಕಂಟಕ ತರುವ ಸಾಧ್ಯತೆಗಳಿದ್ದು, ಪಶ್ಚಿಮ ಬಂಗಾಳದ ರಾಜಕೀಯ ಭವಿಷ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್