AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕರ ನಕಲಿ ಬೆಂಬಲದ ಪತ್ರ ನೀಡಿದ್ದಕ್ಕೆ ಟಿವಿಕೆ ನಾಯಕ ವಿಜಯ್ ವಿರುದ್ಧ ದೂರು ದಾಖಲು

ಟಿಟಿವಿ ದಿನಕರನ್ ಅವರು 'ನಕಲಿ' ಶಾಸಕರ ಪತ್ರದ ಕುರಿತು ವಿಜಯ್ ಅವರ ಟಿವಿಕೆ ಪಕ್ಷದ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಈಗಾಗಲೇ ತಮಿಳುನಾಡಿನಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಎಎಂಎಂಕೆ ಶಾಸಕ ಕಾಮರಾಜ್ ಟಿವಿಕೆಗೆ ಬೆಂಬಲ ನೀಡಿ ಪತ್ರವನ್ನು ಬರೆಯುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಟಿವಿಕೆ ಹಂಚಿಕೊಂಡಿತ್ತು. ಅದರಲ್ಲಿ ಕಾಮರಾಜ್ ಅವರು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ದಿನಕರನ್ ಅವರ ಅನುಮೋದನೆಯೊಂದಿಗೆ ಟಿವಿಕೆಗೆ ಬೆಂಬಲ ನೀಡುತ್ತಿರುವುದಾಗಿ ಹೇಳುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಕೂಡ ನಕಲಿ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಶಾಸಕರ ನಕಲಿ ಬೆಂಬಲದ ಪತ್ರ ನೀಡಿದ್ದಕ್ಕೆ ಟಿವಿಕೆ ನಾಯಕ ವಿಜಯ್ ವಿರುದ್ಧ ದೂರು ದಾಖಲು
VijayImage Credit source: PTI
ಸುಷ್ಮಾ ಚಕ್ರೆ
|

Updated on:May 09, 2026 | 1:49 PM

Share

ಚೆನ್ನೈ, ಮೇ 9: ತಮಿಳುನಾಡಿನಲ್ಲಿ ಸರ್ಕಾರ ರಚನೆಯಲ್ಲಿ ಎಎಂಎಂಕೆ ಬೆಂಬಲವನ್ನು ಸುಳ್ಳು ಎಂದು ಬಿಂಬಿಸಲು ವಿಜಯ್ (Vijay) ನೇತೃತ್ವದ ಪಕ್ಷವು ನಕಲಿ ಬೆಂಬಲ ಪತ್ರವನ್ನು ಬಳಸುತ್ತಿದೆ ಎಂದು ಆರೋಪಿಸಿ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ತಮಿಳಗ ವೆಟ್ರಿ ಕಳಗಂ (ಟಿವಿಕೆ) ವಿರುದ್ಧ ಪೊಲೀಸ್ ದೂರು ದಾಖಲಿಸಿದೆ. ಇದರಿಂದ ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕುರಿತಾದ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ.

ಎಎಂಎಂಕೆಯ ಏಕೈಕ ಶಾಸಕ ಎಸ್. ಕಾಮರಾಜ್ ಅವರ ಬೆಂಬಲದ ಕುರಿತು ಎರಡೂ ಪಕ್ಷಗಳ ನಡುವೆ ರಾಜಕೀಯ ಘರ್ಷಣೆ ಹೆಚ್ಚುತ್ತಿರುವ ಮಧ್ಯೆ ಈ ದೂರು ಬಂದಿದೆ. ಎಸ್​. ಕಾಮರಾಜ್ ನಿನ್ನೆ ಸುದ್ದಿಗಾರರಿಗೆ ತಾವು ಟಿವಿಕೆಗೆ ಬೆಂಬಲ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದರ ನಡುವೆ, ಟಿಟಿವಿ ನಾಯಕ ದಿನಕರನ್ ತಮ್ಮ ಪಕ್ಷದ ಶಾಸಕ ಕಾಮರಾಜ್ ಅವರ ಪತ್ರದ ನಕಲಿ ಪ್ರತಿಯನ್ನು ಟಿವಿಕೆ ರಾಜ್ಯಪಾಲರಿಗೆ ನೀಡಿದೆ ಮತ್ತು ತಮ್ಮ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ವಿಜಯ್‌ಗೆ ಬಹುಮತ ಸಾಬೀತಿನ ಸವಾಲು ಹಾಕಿದ ರಾಜ್ಯಪಾಲರು, ಕೋರ್ಟ್ ಮೆಟ್ಟಿಲೇರಲು ಟಿವಿಕೆ ಸಿದ್ಧತೆ

ಅದರ ಬೆನ್ನಲ್ಲೇ ಇಂದು ಟಿವಿಕೆ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ತಾವು ಸುಳ್ಳು ಹೇಳಿಲ್ಲ ಎಂದು ಸಾಬೀತುಪಡಿಸಲು ಟಿವಿಕೆ ವಿಜಯ್ ನೇತೃತ್ವದ ಪಕ್ಷವನ್ನು ಬೆಂಬಲಿಸಿ ಕಾಮರಾಜ್ ಬೆಂಬಲ ಪತ್ರ ಬರೆಯುತ್ತಿರುವ ವೀಡಿಯೊವನ್ನು ಬಿಡುಗಡೆ ಮಾಡಿತ್ತು. ಈ ವಿಡಿಯೋ ಕೂಡ ಎಐ ನಿರ್ಮಿತವಾದುದು ಎಂದು ಎಎಂಎಂಕೆ ಆರೋಪಿಸಿದೆ. ಎಎಂಎಂಕೆ ಶಾಸಕ ಕಾಮರಾಜ್ ಟಿವಿಕೆಗೆ ಬೆಂಬಲ ನೀಡಿ ಪತ್ರವನ್ನು ಬರೆಯುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಟಿವಿಕೆ ಹಂಚಿಕೊಂಡಿತ್ತು. ಅದರಲ್ಲಿ ಕಾಮರಾಜ್ ಅವರು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ದಿನಕರನ್ ಅವರ ಅನುಮೋದನೆಯೊಂದಿಗೆ ಟಿವಿಕೆಗೆ ಬೆಂಬಲ ನೀಡುತ್ತಿರುವುದಾಗಿ ಹೇಳುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ತಮಿಳುನಾಡಿನಲ್ಲಿ ಇನ್ಮುಂದೆ ವಿಜಯ್ ‘ಸರ್ಕಾರ್’; ಕೊನೆಗೂ ಟಿವಿಕೆಗೆ ಸಿಕ್ಕಿತು ಮ್ಯಾಜಿಕ್ ನಂಬರ್

“ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರ ಅನುಮೋದನೆಯೊಂದಿಗೆ ತಮಿಳಗ ವೆಟ್ರಿ ಕಳಗಂಗೆ ಬೆಂಬಲ ನೀಡುತ್ತಿರುವುದಾಗಿ ಅವರು ಹೇಳಿದ್ದರು. ಆದರೆ, ಅವರು ಪತ್ರ ಬರೆದಿಲ್ಲ ಎಂದು ಈಗ ಹರಡುತ್ತಿರುವ ಮಾಹಿತಿಯು ಸಂಪೂರ್ಣವಾಗಿ ಸುಳ್ಳು ಮತ್ತು ಸತ್ಯಕ್ಕೆ ವಿರುದ್ಧವಾಗಿದೆ” ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:40 pm, Sat, 9 May 26

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More