ಉತ್ತರಾಖಂಡ್‌ನಲ್ಲಿ ಶೀಘ್ರವೇ ಏಕರೂಪ ನಾಗರಿಕ ಸಂಹಿತೆ ಜಾರಿ: ಸಿಎಂ ಪುಷ್ಕರ್ ಸಿಂಗ್ ಧಾಮಿ

|

Updated on: Jun 18, 2023 | 10:03 PM

ಏಕರೂಪ ನಾಗರಿಕ ಸಂಹಿತೆ ಕಾನೂನಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ದೊಡ್ಡ ಘೋಷಣೆ ಮಾಡಿದ್ದಾರೆ. ಈ ಕಾನೂನನ್ನು ಉತ್ತರಾಖಂಡದ ದೇವಭೂಮಿಯಲ್ಲಿ ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

ಉತ್ತರಾಖಂಡ್‌ನಲ್ಲಿ ಶೀಘ್ರವೇ ಏಕರೂಪ ನಾಗರಿಕ ಸಂಹಿತೆ ಜಾರಿ: ಸಿಎಂ ಪುಷ್ಕರ್ ಸಿಂಗ್ ಧಾಮಿ
ಉತ್ತರಾಖಂಡ್‌ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ
Follow us on

ಉತ್ತರಾಖಂಡ: ಉತ್ತರಾಖಂಡ್‌ನಲ್ಲಿ ಶೀಘ್ರವೇ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿ ಮಾಡಲಾಗುವುದು ಎಂದು ಉತ್ತರಾಖಂಡ್‌ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಉತ್ತರಾಖಂಡ ಸರ್ಕಾರವು 2022ರ ಮಾರ್ಚ್‌ನಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಸಿದ್ಧಪಡಿಸಲು ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಸಾಮಾನ್ಯ ಜನರ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಒಳಗೊಂಡಿದೆ. ಸುಮಾರು 2 ಲಕ್ಷದ 31 ಸಾವಿರ ಸಲಹೆಗಳನ್ನು ಸಮಿತಿಗೆ ಕಳುಹಿಸಲಾಗಿದೆ.

ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಅದರ ಪ್ರಕಾರ ಯುವತಿರ ಮದುವೆಯ ವಯಸ್ಸನ್ನು ಹೆಚ್ಚಿಸಲಾಗುತ್ತಿದ್ದು, ಮದುವೆಗೆ ಮುಂಚೆ ಅವರು ಪದವಿ ಪಡೆಯಬಹುದು. ಇದಲ್ಲದೆ, ವಿಚ್ಛೇದನದ ಸಮಾನ ಆಧಾರಗಳು ಗಂಡ ಮತ್ತು ಹೆಂಡತಿ ಇಬ್ಬರಿಗೂ ಲಭ್ಯವಿರುತ್ತವೆ.

ಇದನ್ನೂ ಓದಿ: ಕರ್ನಾಟಕ ಮತದಾರರು ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ: ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್​ ಠಾಕ್ರೆ

ಪತಿಗೆ ಅನ್ವಯವಾಗುವ ವಿಚ್ಛೇದನದ ಆಧಾರವು ಪತ್ರಕ್ಕೂ ಅನ್ವಯಿಸುತ್ತದೆ. ಪ್ರಸ್ತುತ, ವೈಯಕ್ತಿಕ ಕಾನೂನಿನ ಅಡಿಯಲ್ಲಿ, ಗಂಡ ಮತ್ತು ಹೆಂಡತಿ ವಿಚ್ಛೇದನಕ್ಕೆ ವಿಭಿನ್ನ ಕಾರಣಗಳನ್ನು ಹೊಂದಿದ್ದಾರೆ. ಅದೇ ಸಮಯದಲ್ಲಿ, ಹೆಂಡತಿ ಸಾವನ್ನಪ್ಪಿದರೆ ಮತ್ತು ಅವಳ ಹೆತ್ತವರಿಗೆ ಯಾವುದೇ ಬೆಂಬಲವಿಲ್ಲದಿದ್ದರೆ, ಅವರ ಜೀವನಾಂಶದ ಜವಾಬ್ದಾರಿಯು ಗಂಡನ ಮೇಲಿರುತ್ತದೆ ಎಂದು ಹೇಳಿದೆ.

ಇದಲ್ಲದೆ, ಲಿವ್-ಇನ್ ಸಂಬಂಧದ ಘೋಷಣೆ ಅಗತ್ಯವಾಗಿದ್ದು, ಇದು ಶಾಸನಬದ್ಧ ಸ್ವರೂಪವನ್ನು ಹೊಂದಿರುವ ಸ್ವಯಂ ಘೋಷಣೆಯಂತೆ ಇರುತ್ತದೆ. ಜೊತೆಗೆ ಉದ್ಯೋಗಸ್ಥ ಮಗನ ಮರಣದ ಸಂದರ್ಭದಲ್ಲಿ ಹೆಂಡತಿ ಪಡೆಯುವ ಪರಿಹಾರವನ್ನು ವಯಸ್ಸಾದ ಪೋಷಕರ ನಿರ್ವಹಣೆಗೆ ಬಳಸಬೇಕು ಎಂದು ಹೇಳಲಾಗಿದೆ. ಒಂದು ವೇಳೆ ಪತ್ನಿ ಮರುಮದುವೆಯಾದರೆ, ಪತಿಯ ಮರಣದ ನಂತರ ಪಡೆದ ಪರಿಹಾರದಲ್ಲಿ ಪೋಷಕರಿಗೂ ಪಾಲು ಇರುತ್ತದೆ.

ಇದನ್ನೂ ಓದಿ: ವಿಶ್ವದ ಅತಿದೊಡ್ಡ ಪ್ರಕಾಶನ ಸಂಸ್ಥೆ ಪಾಲಾದ 2021ನೇ ಸಾಲಿನ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿ

ಏಕರೂಪ ನಾಗರಿಕ ಸಂಹಿತೆಗೆ ವಿರೋಧ

ಪ್ರಧಾನಿ ಮೋದಿ ಸರ್ಕಾರವು ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧ ಪಕ್ಷಗಳು ವಿರೋಧಿಸುತ್ತಿವೆ. ಏಕರೂಪ ನಾಗರಿಕ ಸಂಹಿತೆಯ ಅಗತ್ಯವನ್ನು ಹೊಸದಾಗಿ ಪರಿಶೀಲಿಸಲು ಕಾನೂನು ಆಯೋಗ ನಿರ್ಧರಿಸಿದೆ. ಜತೆಗೆ ಜನರು ಮತ್ತು ಮಾನ್ಯತೆ ಪಡೆದ ಧಾರ್ಮಿಕ ಸಂಸ್ಥೆಗಳ ಸದಸ್ಯರು ಸೇರಿದಂತೆ ವಿವಿಧ ಮಧ್ಯಸ್ಥಗಾರರ ಅಭಿಪ್ರಾಯಗಳನ್ನು ಆಹ್ವಾನಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.