ಕೇರಳ ಇನ್ಮುಂದೆ ಕೇರಳಂ; ರಾಜ್ಯದ ಹೆಸರು ಬದಲಾವಣೆಗೆ ಮೋದಿ ಸಂಪುಟ ಒಪ್ಪಿಗೆ

ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾವಣೆ ಮಾಡಲು ಕೇರಳದ ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದೀಗ ಈ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆಯೂ ಸಿಕ್ಕಿದೆ. ಹೀಗಾಗಿ, ನೆರೆಯ ರಾಜ್ಯವಾದ ಕೇರಳವನ್ನು ಇನ್ನುಮುಂದೆ ಕೇರಳಂ ಎಂದು ಕರೆಯಬೇಕಾಗುತ್ತದೆ. ಕೇರಳ ಎಂಬ ಹೆಸರು ಇಂಗ್ಲಿಷ್ ಭಾಷೆಯದ್ದಾಗಿರುವುದರಿಂದ ಮಲಯಾಳಂ ಭಾಷೆಯ ಕೇರಳಂ ಎಂಬ ಹೆಸರನ್ನು ಬಳಸಲು ನಿರ್ಧರಿಸಲಾಗಿದೆ. ಹೀಗಾಗಿ, ಈ ಹೆಸರು ಬದಲಾವಣೆ ರಾಜಕೀಯ ಹಾಗೂ ಸಾಂಸ್ಕೃತಿಕವಾಗಿಯೂ ಮಹತ್ವ ಪಡೆದಿದೆ.

ಕೇರಳ ಇನ್ಮುಂದೆ ಕೇರಳಂ; ರಾಜ್ಯದ ಹೆಸರು ಬದಲಾವಣೆಗೆ ಮೋದಿ ಸಂಪುಟ ಒಪ್ಪಿಗೆ
Cm Pinarayi Vijayan With Pm Modi

Updated on: Feb 24, 2026 | 4:23 PM

ನವದೆಹಲಿ, ಫೆಬ್ರವರಿ 24: ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸುವ ಕೇರಳ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ (Union Cabinet) ಇಂದು ಅನುಮೋದಿಸಿದೆ. ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕೇರಳಂ ಎಂಬ ಹೆಸರು ಮಲಯಾಳಂ ಮೂಲ ಭಾಷೆಯದ್ದಾದ್ದರಿಂದ ಇಂಗ್ಲಿಷ್​ನ ಕೇರಳ ಎಂಬ ಹೆಸರಿನ ಬದಲು ಕೇರಳ ಬಳಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಕೇರಳದ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದೀಗ ಇದಕ್ಕೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆಯೂ ಸಿಕ್ಕಿದೆ. ಇನ್ನು ರಾಷ್ಟ್ರಪತಿಗಳ ಅನುಮೋದನೆ ಸಿಕ್ಕಿದರೆ ಕೇರಳ ರಾಜ್ಯದ ಹೆಸರು ಅಧಿಕೃತವಾಗಿ ಕೇರಳಂ ಎಂದು ಬದಲಾವಣೆಯಾಗುತ್ತದೆ.

ಕೇರಳ ರಾಜ್ಯದ ಹೆಸರಿನ ಬದಲಾವಣೆ ಸಾಂಸ್ಕೃತಿಕ ಮಹತ್ವವನ್ನೂ ಹೊಂದಿದೆ. ಮೂಲ ಹೆಸರಿನ ಬಳಕೆಯ ಮೂಲಕ ಇತಿಹಾಸ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವುದು, ಕೇರಳ ರಾಜ್ಯದ ಜನರ ಭಾವನೆಗಳಿಗೆ ಗೌರವ ನೀಡುವುದು ಇದರ ಮುಖ್ಯ ಉದ್ದೇಶ. ಭಾರತದ ಸಂವಿಧಾನದ ಪ್ರಕಾರ ರಾಜ್ಯದ ಹೆಸರನ್ನು ಬದಲಾಯಿಸಲು ಈಗಾಗಲೇ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆ ಅಂಗೀಕರಿಸಲಾಗಿದೆ. ಇದಕ್ಕೆ ರಾಷ್ಟ್ರಪತಿಯ ಅನುಮೋದನೆಯೊಂದು ಬಾಕಿ ಇದೆ.

ಇದನ್ನೂ ಓದಿ: ಕೇರಳದ ಹೆಸರು ಬದಲಾಗುತ್ತೆ, ಇನ್ಮುಂದೆ ಯಾವ ಹೆಸರಿನಿಂದ ಕರೀಬೇಕು ಗೊತ್ತಾ?

ಜೂನ್ 24, 2024ರಂದು ಕೇರಳ ವಿಧಾನಸಭೆಯು ರಾಜ್ಯದ ಹೆಸರನ್ನು ಕೇರಳಂ ಎಂದು ಅಧಿಕೃತವಾಗಿ ಬದಲಾಯಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತ್ತು. ವಿಧಾನಸಭೆಯ ನಿರ್ಣಯದ ನಂತರ, ಇಂದು ನಡೆದ ಸಭೆಯಲ್ಲಿ ಕೇಂದ್ರ ಸಚಿವ ಸಂಪುಟವು ಕೇರಳದ ಬದಲು ಕೇರಳಂ ಎಂದು ರಾಜ್ಯದ ಹೆಸರನ್ನು ಬದಲಾಯಿಸಲು ಅನುಮೋದನೆ ನೀಡಿದೆ.


ಮಲಯಾಳಂನಲ್ಲಿ ಕೇರಳಂ ಅಂದರೆ ‘ತೆಂಗಿನಕಾಯಿ ನಾಡು’ ಎಂದರ್ಥ. ‘ಕೇರಾ’ ಅಂದರೆ ತೆಂಗಿನಕಾಯಿ, ‘ಆಲಂ’ ಅಂದರೆ ನಾಡು ಅಥವಾ ಭೂಮಿ ಎಂದರ್ಥ. ಎರಡರನ್ನೂ ಸೇರಿಸಿ ಕೇರಳಂ(ತೆಂಗಿನಕಾಯಿ ನಾಡು) ಎಂದು ಕರೆಯಲಾಗುತ್ತದೆ. ಕೇರಳ ರಾಜ್ಯದಲ್ಲಿ ಅತಿ ಹೆಚ್ಚು ತೆಂಗಿನಕಾಯಿಯನ್ನು ಬೆಳೆಯಲಾಗುತ್ತದೆ. ಕೇರಳ ಅನ್ನವುದು ಭೌಗೋಳಿಕ, ಸಾಂಸ್ಕೃತಿಕ ವೈಶಿಷ್ಟ್ಯವನ್ನು ಸೂಚಿಸುತ್ತದೆ.ಹೀಗಾಗಿ, ಕೇರಳ ಹೆಸರನ್ನು ಕೇರಳಂ ಎಂದು ಬದಲಾಯಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.


ಇತ್ತೀಚೆಗೆ ಉದ್ಘಾಟನೆಗೊಂಡ ದೆಹಲಿಯ ಹೊಸ ಪಿಎಂಒ ಕಟ್ಟಡವಾದ ಸೇವಾ ತೀರ್ಥದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆ ಇದಾಗಿದೆ. ಈ ನಿರ್ಣಯವನ್ನು ಮಂಡಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂವಿಧಾನದಲ್ಲಿ ನಮೂದಿಸಲಾದ ಎಲ್ಲಾ ಭಾಷೆಗಳಲ್ಲಿ ದಕ್ಷಿಣ ರಾಜ್ಯವಾದ ಕೇರಳದ ಹೆಸರನ್ನು ಕೇರಳಂ ಎಂದು ಬದಲಾಯಿಸಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದ್ದರು. ಈ ಬಗ್ಗೆ ನಿರ್ಣಯವನ್ನು ಮಂಡಿಸಿದ ಮುಖ್ಯಮಂತ್ರಿಗಳು, ರಾಜ್ಯವನ್ನು ಮಲಯಾಳಂನಲ್ಲಿ ‘ಕೇರಳಂ’ ಎಂದು ಕರೆಯಲಾಗುತ್ತಿತ್ತು. ಮಲಯಾಳಂ ಮಾತನಾಡುವ ಸಮುದಾಯಗಳಿಗೆ ಸಂಯುಕ್ತ ಕೇರಳವನ್ನು ರಚಿಸುವ ಬೇಡಿಕೆ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಸಮಯದಿಂದ ಬಲವಾಗಿ ಹೊರಹೊಮ್ಮಿತು. ಆದರೆ ಸಂವಿಧಾನದ ಮೊದಲ ವೇಳಾಪಟ್ಟಿಯಲ್ಲಿ ರಾಜ್ಯದ ಹೆಸರನ್ನು ಕೇರಳ ಎಂದು ಬರೆಯಲಾಗಿದೆ. ಅದನ್ನು ಕೇರಳಂ ಎಂದು ಬದಲಾಯಿಸಬೇಕು ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಮೊಬೈಲ್​ನಲ್ಲಿ 3 ಬಾರಿ ತಲಾಖ್ ಹೇಳಿ ಹೆಂಡತಿಗೆ ಹೆದರಿಸಿದ ಗಂಡ; ಕೇರಳದ ವ್ಯಕ್ತಿ ಮೇಲೆ ಕಿರುಕುಳದ ಆರೋಪ

ಸಂವಿಧಾನದ 3ನೇ ವಿಧಿಯ ಅಡಿಯಲ್ಲಿ ಅದನ್ನು ಕೇರಳ ಎಂದು ತಿದ್ದುಪಡಿ ಮಾಡಲು ಮತ್ತು ಸಂವಿಧಾನದ ಎಂಟನೇ ವೇಳಾಪಟ್ಟಿಯಲ್ಲಿ ಉಲ್ಲೇಖಿಸಲಾದ ಎಲ್ಲಾ ಭಾಷೆಗಳಲ್ಲಿ ಕೇರಳಂ ಎಂದು ಮರುನಾಮಕರಣ ಮಾಡಲು ಸಿಎಂ ಪಿಣರಾಯಿ ವಿಜಯನ್ ಕೋರಿದ್ದರು.

2016ರಲ್ಲಿ ಗುರಗಾಂವ್ ಅನ್ನು ಗುರುಗ್ರಾಮ ಎಂದು ಮರುನಾಮಕರಣ ಮಾಡಿದಾಗ, ಕೇಂದ್ರ ಸರ್ಕಾರವು ಕೇರಳವನ್ನು ‘ಕೇರಳಂ’ ಎಂದು, ಅಹಮದಾಬಾದ್ ಅನ್ನು ‘ಅಮರಾವತಿ’ ಎಂದು, ಹೈದರಾಬಾದ್ ಅನ್ನು ‘ಭಾಗ್ಯನಗರ’ ಎಂದು ಮತ್ತು ಔರಂಗಾಬಾದ್ ಅನ್ನು ‘ಸಂಭಾಜಿನಗರ’ ಎಂದು ಮರುನಾಮಕರಣ ಮಾಡಬೇಕೆಂದು ಆರ್‌ಎಸ್‌ಎಸ್ ಸೂಚಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Tue, 24 February 26

Follow Us