ಮುಂದಿನ ವಾರ ಭಾರತಕ್ಕೆ ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಭೇಟಿ
ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಅವರು ತಮ್ಮ ಪತ್ನಿ, ಅಮೆರಿಕದ ಎರಡನೇ ಮಹಿಳೆ ಉಷಾ ವ್ಯಾನ್ಸ್ ಅವರೊಂದಿಗೆ ಇಟಲಿ ಮತ್ತು ಭಾರತಕ್ಕೆ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಶ್ವೇತಭವನ ದೃಢಪಡಿಸಿದೆ.

ನವದೆಹಲಿ, ಏಪ್ರಿಲ್ 16: ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ತಮ್ಮ ಪತ್ನಿಯಾದ ಉಷಾ ವ್ಯಾನ್ಸ್ ಅವರೊಂದಿಗೆ ಏಪ್ರಿಲ್ 18ರಿಂದ ಏಪ್ರಿಲ್ 24ರವರೆಗೆ ಇಟಲಿ ಮತ್ತು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ಅಧಿಕೃತವಾಗಿ ದೃಢಪಡಿಸಿದೆ. ಈ ಪ್ರವಾಸವು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ, ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಆದ್ಯತೆಗಳ ಕುರಿತು ಸಹಯೋಗವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಶ್ವೇತಭವನ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಜೆ.ಡಿ. ವ್ಯಾನ್ಸ್ ಅವರು ಮೊದಲು ಇಟಲಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ವ್ಯಾಟಿಕನ್ ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ಅವರನ್ನು ಭೇಟಿ ಮಾಡಲಿದ್ದಾರೆ. ಇಟಲಿಗೆ ಭೇಟಿ ನೀಡಿದ ನಂತರ ಅವರು ನವದೆಹಲಿ, ಜೈಪುರ ಮತ್ತು ಆಗ್ರಾವನ್ನು ಒಳಗೊಂಡ 3 ನಗರ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಲಿದ್ದಾರೆ.
🚨NEW:@VP JD Vance and @SLOTUS will visit Italy and India this week. pic.twitter.com/UYqTfNlvGt
— Taylor Van Kirk (@VPPressSec) April 16, 2025
ಇದನ್ನೂ ಓದಿ: ಅಮೆರಿಕ ಚುನಾವಣೆಯಲ್ಲಿ ಜೆಡಿ ವ್ಯಾನ್ಸ್ಗೆ ಸಹಕಾರಿಯಾಗಬಹುದೇ ಪತ್ನಿ ಉಷಾ ಚಿಲುಕುರಿ ಅವರ ಭಾರತೀಯ ಮೂಲ?
ಭಾರತದ ಭೇಟಿ ವೇಳೆ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಚರ್ಚೆ ಸೇರಿದಂತೆ ಉನ್ನತ ಮಟ್ಟದ ಸಭೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಜೆ.ಡಿ ವ್ಯಾನ್ಸ್ ಮತ್ತು ಉಷಾ ವ್ಯಾನ್ಸ್ ಅವರ ಈ ಭೇಟಿ ಹೆಚ್ಚಾಗಿ ಖಾಸಗಿಯಾಗಿರುತ್ತದೆ. ಆದರೆ, ಅವರು ಭಾರತದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದು ಎರಡು ರಾಷ್ಟ್ರಗಳ ನಡುವಿನ ಜನರಿಂದ ಜನರಿಗೆ ಇರುವ ಸಂಬಂಧಗಳ ಮಹತ್ವವನ್ನು ಪ್ರದರ್ಶಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ