ವಿಡಿಯೋ: ಅಲಿಗಢದಲ್ಲಿ ಚಪ್ಪಲಿಹಾರ ಹಾಕಿಕೊಂಡು ಮತಯಾಚನೆಗೆ ಹೊರಟ ಸ್ವತಂತ್ರ ಅಭ್ಯರ್ಥಿ
ಲೋಕಸಭಾ ಚುನಾವಣೆ(Lok Sabha Election) ದಿನಾಂಕ ಘೋಷಣೆಯಾಗುತ್ತಿದ್ದಂತೆ ದೇಶಾದ್ಯಂತ ರಾಜಕೀಯ ಕಾವು ಹೆಚ್ಚಿದೆ. ಪ್ರತಿಯೊಂದು ಪಕ್ಷವು ತನ್ನ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸುತ್ತಿದೆ. ಹಾಗೆಯೇ ಉತ್ತರ ಪ್ರದೇಶದ ಅಲಿಗಢದಲ್ಲಿ ಸ್ವತಂತ್ರ ಅಭ್ಯರ್ಥಿಯೊಬ್ಬರು ಚಪ್ಪಲಿಹಾರ ಧರಿಸಿಕೊಂಡು ಮತಯಾಚನೆ ಮಾಡುತ್ತಿರುವ ವಿಡಿಯೋ ಎದುರಾಗಿದೆ.
ಲೋಕಸಭಾ ಚುನಾವಣೆ(Lok Sabha Election) ದಿನಾಂಕ ಘೋಷಣೆಯಾಗುತ್ತಿದ್ದಂತೆ ದೇಶಾದ್ಯಂತ ರಾಜಕೀಯ ಕಾವು ಹೆಚ್ಚಿದೆ. ಪ್ರತಿಯೊಂದು ಪಕ್ಷವು ತನ್ನ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸುತ್ತಿದೆ. ಹಾಗೆಯೇ ಉತ್ತರ ಪ್ರದೇಶದ ಅಲಿಗಢದಲ್ಲಿ ಸ್ವತಂತ್ರ ಅಭ್ಯರ್ಥಿಯೊಬ್ಬರು ಚಪ್ಪಲಿಹಾರ ಧರಿಸಿಕೊಂಡು ಮತಯಾಚನೆ ಮಾಡುತ್ತಿರುವ ವಿಡಿಯೋ ಎದುರಾಗಿದೆ.
ಯಾರನ್ನಾದರೂ ಶಿಕ್ಷಿಸುವಾಗ ಅಥವಾ ಅವಮಾನಿಸಲು ಚಪ್ಪಲಿ ಹಾರವನ್ನು ಹಾಕುವುದನ್ನು ನೀವು ನೋಡಿರಬಹುದು. ಆದರೆ ಅಲಿಗಢದ ಸ್ವತಂತ್ರ ಲೋಕಸಭಾ ಅಭ್ಯರ್ಥಿ ಪಂಡಿತ್ ಕೇಶವ್ ದೇವ್ ಗೌತಮ್ ಚಪ್ಪಲಿ ಹಾರ ಹಾಕಿಕೊಂಡು ಚುನಾವಣಾ ಪ್ರಚಾರ ನಡೆಸಿದ್ದಾರೆ. ಹೂವಿನ ಹಾರದ ಬದಲು ಚಪ್ಪಲಿಹಾರವನ್ನು ಹಾಕಿಕೊಂಡಿದ್ದನ್ನು ಕಂಡು ಎಲ್ಲರೂ ಅಚ್ಚರಿಗೊಂಡರು.
ಪಂಡಿತ್ ಕೇಶವ್ ದೇವ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚಪ್ಪಲಿಯ ಚುನಾವಣಾ ಚಿಹ್ನೆಯನ್ನು ಪಡೆದಿದ್ದಾರೆ. ಕೇಶವ್ ದೇವ್ ಅವರೇ ಚಪ್ಪಲಿ ಚುನಾವಣಾ ಚಿಹ್ನೆಗೆ ಅರ್ಜಿ ಸಲ್ಲಿಸಿದ್ದು, ಬಳಿಕ ಕೊರಳಿಗೆ 7 ಚಪ್ಪಲಿ ಹಾರ ಹಾಕಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಭ್ರಷ್ಟಾಚಾರವನ್ನು ವಿರೋಧಿಸುವ ಮೂಲಕವೂ ಸುದ್ದಿಯಲ್ಲಿದ್ದಾರೆ.
ಪಂಡಿತ್ ಕೇಶವ್ ದೇವ್ ಒಬ್ಬ RTI ಕಾರ್ಯಕರ್ತ, ಭಾರತೀಯ ಹಿಂದೂ ರಾಷ್ಟ್ರ ಸೇನೆ ಮತ್ತು ಭ್ರಷ್ಟಾಚಾರ ವಿರೋಧಿ ಸೇನೆ ಎಂಬ ಸಂಘಟನೆಗಳನ್ನು ಸಹ ನಡೆಸುತ್ತಿದ್ದಾರೆ.
ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಂಡಿತ್ ಕೇಶವದೇವ್ ನಗರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.
ಮತ್ತಷ್ಟು ಓದಿ: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಸಂಜಯ್ ದತ್? ಲೋಕಸಭಾ ಚುನಾವಣೆ ಸನಿಹದಲ್ಲಿ ಸಿಕ್ತು ಸ್ಪಷ್ಟನೆ
ಅಲಿಗಢ ಲೋಕಸಭಾ ಕ್ಷೇತ್ರಕ್ಕೆ ಎರಡನೇ ಹಂತದಲ್ಲಿ ಅಂದರೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಸೋಮವಾರ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇಬ್ಬರು ಪಕ್ಷೇತರರು ನಾಮಪತ್ರ ಹಿಂಪಡೆದಿದ್ದಾರೆ. ಈಗ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
#WATCH | Aligarh, UP: Independent candidate from Aligarh Pandit Keshav Dev has been allotted ‘slippers’ as the election symbol. After which, he was seen carrying out the election campaign wearing a garland of 7 slippers around his neck. (08.04) pic.twitter.com/V0Hm8JYRmC
— ANI (@ANI) April 8, 2024
ಮಾರ್ಚ್ 28ರಿಂದ ಏಪ್ರಿಲ್ 4ರವರೆಗೆ ಒಟ್ಟು 21 ಮಂದಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಲೋಪದೋಷ ಕಂಡು ಬಂದ ಹಿನ್ನೆಲೆಯಲ್ಲಿ 5 ಮಂದಿಯ ನಾಮಪತ್ರಗಳನ್ನು ರದ್ದುಗೊಳಿಸಲಾಗಿದೆ. ಇದಾದ ಬಳಿಕ ಸೋಮವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ