Azadi Ka Amrit Mahotsav: 4.5 ಕೋಟಿಗೂ ಹೆಚ್ಚು ರಾಷ್ಟ್ರಧ್ವಜಗಳನ್ನು ಹಾರಿಸಲು ಸಿದ್ಧತೆ ಮಾಡಿಕೊಂಡ ಉತ್ತರ ಪ್ರದೇಶ ಸರ್ಕಾರ

ಸ್ವ-ಸಹಾಯ ಗುಂಪುಗಳು, ಶ್ರೀ ಗಾಂಧಿ ಭವನ ಮತ್ತು ಮೀರತ್ ಜಿಲ್ಲೆಯ ಎನ್‌ಜಿಒಗಳು ದಾಖಲೆ ಸಂಖ್ಯೆಯ ಧ್ವಜಗಳನ್ನು ತಯಾರಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದಲ್ಲದೇ ರಾಜ್ಯದ ಹಲವು ಖಾಸಗಿ ಹೊಲಿಗೆ ಕೇಂದ್ರಗಳಿಗೂ ಇದರ ಜವಾಬ್ದಾರಿ ನೀಡಲಾಗಿದೆ. ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಸುಮಾರು 97 ಸಾವಿರ ಸ್ಥಳೀಯ ಉತ್ಪಾದನಾ ಕೇಂದ್ರಗಳಿಂದ 2.64 ಕೋಟಿ ಧ್ವಜಗಳನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದೆ.

Azadi Ka Amrit Mahotsav: 4.5 ಕೋಟಿಗೂ ಹೆಚ್ಚು ರಾಷ್ಟ್ರಧ್ವಜಗಳನ್ನು ಹಾರಿಸಲು ಸಿದ್ಧತೆ ಮಾಡಿಕೊಂಡ ಉತ್ತರ ಪ್ರದೇಶ ಸರ್ಕಾರ
national flagsImage Credit source: india today
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 05, 2022 | 9:55 AM

ರಾಷ್ಟ್ರದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಆಗಸ್ಟ್ 13 ರಿಂದ 15 ರವರೆಗೆ ಉತ್ತರ ಪ್ರದೇಶದಲ್ಲಿ 4.5 ಕೋಟಿ ರಾಷ್ಟ್ರಧ್ವಜಗಳನ್ನು ಹಾರಿಸಲಾಗುವುದು. ಧ್ವಜಗಳನ್ನು ಸಿದ್ಧಪಡಿಸಲು, ಸ್ವ-ಸಹಾಯ ಗುಂಪುಗಳು, ಎನ್‌ಜಿಒಗಳು, ಎಂಎಸ್‌ಎಂಇಗಳು ಮತ್ತು ಗ್ರಾಮೋದ್ಯೋಗಗಳು, ಜೊತೆಗೆ ಖಾಸಗಿ ಹೊಲಿಗೆ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ರಾಜ್ಯದ 76,547 ಸ್ವ-ಸಹಾಯ ಗುಂಪುಗಳಿಗೆ 1,50,16,077 ತ್ರಿವರ್ಣ ಧ್ವಜಗಳನ್ನು ತಯಾರಿಸುವ ಗುರಿಯನ್ನು ನೀಡಲಾಗಿದೆ. 10,224 ಎನ್‌ಜಿಒಗಳಿಗೆ 31,82,134 ಧ್ವಜಗಳನ್ನು ಮತ್ತು 10,112 ಖಾಸಗಿ ಹೊಲಿಗೆ ಕೇಂದ್ರಗಳಿಗೆ 81,66,735 ತ್ರಿವರ್ಣ ಧ್ವಜಗಳನ್ನು ತಯಾರಿಸುವ ಗುರಿಯನ್ನು ನೀಡಲಾಗಿದೆ.

ಬಾರಾಬಂಕಿಯ ಸ್ವ-ಸಹಾಯ ಗುಂಪುಗಳು, ಶ್ರೀ ಗಾಂಧಿ ಭವನ ಮತ್ತು ಮೀರತ್ ಜಿಲ್ಲೆಯ ಎನ್‌ಜಿಒಗಳು ದಾಖಲೆ ಸಂಖ್ಯೆಯ ಧ್ವಜಗಳನ್ನು ತಯಾರಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದಲ್ಲದೇ ರಾಜ್ಯದ ಹಲವು ಖಾಸಗಿ ಹೊಲಿಗೆ ಕೇಂದ್ರಗಳಿಗೂ ಇದರ ಜವಾಬ್ದಾರಿ ನೀಡಲಾಗಿದೆ. ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಸುಮಾರು 97 ಸಾವಿರ ಸ್ಥಳೀಯ ಉತ್ಪಾದನಾ ಕೇಂದ್ರಗಳಿಂದ 2.64 ಕೋಟಿ ಧ್ವಜಗಳನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದೆ.

ಅಷ್ಟೇ ಅಲ್ಲ, ರಾಜ್ಯದ ಎಂಎಸ್‌ಎಂಇ ಇಲಾಖೆಯು ಎರಡು ಕೋಟಿ ಧ್ವಜಗಳನ್ನು ಸಿದ್ಧಪಡಿಸುತ್ತಿದೆ. ಇದಕ್ಕಾಗಿ, ಜಿಇಎಂ ಪೋರ್ಟಲ್‌ನಲ್ಲಿ ಟೆಂಡರ್ ಕೂಡ ಕರೆಯಲಾಗಿದೆ. ಪಡಿತರ ಅಂಗಡಿಗಳ ಅಭಿವೃದ್ಧಿ ಕಟ್ಟಡಗಳಲ್ಲಿ, ಗ್ರಾಮ ಪಂಚಾಯತ್ ಕಟ್ಟಡಗಳಲ್ಲಿ, ಸಾರ್ವಜನಿಕ ಸೇವಾ ಕೇಂದ್ರಗಳು, ಬ್ಲಾಕ್ ಕೇಂದ್ರಗಳಲ್ಲಿ, ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ, ಮತ್ತು ಪೆಟ್ರೋಲ್ ಪಂಪ್‌ಗಳಲ್ಲಿ, ಎಲ್‌ಪಿಜಿ ಕೇಂದ್ರಗಳಲ್ಲಿ, ಎಲ್ಲ ಜಿಲ್ಲೆಗಳಲ್ಲಿ ಮುನ್ಸಿಪಲ್, ಕಾರ್ಪೊರೇಷನ್ ಪುರಸಭೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಳಸಬೇಕು.

ಇದನ್ನೂ ಓದಿ
Image
Azadi Ka Amrit Mahotsav: ಸ್ವಾತಂತ್ರ್ಯಾ ಪೂರ್ವ ಹಾಗೂ ನಂತರದ ಚಿತ್ರರಂಗ
Image
ಸ್ವಾತಂತ್ರ್ಯಾ ನಂತರ ಚಿತ್ರರಂಗದಿಂದ ಹಾಗೂ ಚಿತ್ರರಂಗದಲ್ಲಿ ಆದ ಬದಲಾವಣೆಗಳು ಏನು?
Image
Azadi Ka Amrit Mahotsav: ಸಮುದ್ರದಡಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಕೋಸ್ಟ್ ಗಾರ್ಡ್: ಇಲ್ಲಿದೆ ವಿಡಿಯೋ

ಡೈಯಿಂಗ್ ಮತ್ತು ಪ್ರಿಂಟಿಂಗ್ ನಲ್ಲಿ ಉತ್ತರ ಭಾರತದ ಅಗ್ರಸ್ಥಾನದಲ್ಲಿರುವ ಕಾರಣ ಇಲ್ಲಿ ತಯಾರಾದ ಧ್ವಜಗಳು ಉತ್ತಮ ಗುಣಮಟ್ಟವನ್ನು ಹೊಂದಿವೆ. ದೇಶದಲ್ಲಿ ಅಮೃತೋತ್ಸವದಿಂದಾಗಿ ಉತ್ತರಾಖಂಡದ ಬಂದಾ, ರಾಯ್ ಬರೇಲಿ, ಗೋರಖ್‌ಪುರ, ಝಾನ್ಸಿ, ಲಕ್ನೋ, ಅಲಿಗಢ, ಮೊರಬದದ್ ಮತ್ತು ಹಲ್ದ್ವಾನಿ ಮುಂತಾದ ಹಲವು ಜಿಲ್ಲೆಗಳಿಂದ ಧ್ವಜಗಳಿಗೆ ಬೇಡಿಕೆ ಬಂದಿದೆ. ಗಾಂಧಿ ಆಶ್ರಮದಿಂದ 1.5 ಲಕ್ಷ ಧ್ವಜಗಳ ಆರ್ಡರ್ ಹೊಂದಿದೆ.

25 ಮಹಿಳೆಯರು ಸೇರಿದಂತೆ 50 ಕ್ಕೂ ಹೆಚ್ಚು ಕಾರ್ಮಿಕರು 1.5 ಲಕ್ಷಕ್ಕೂ ಹೆಚ್ಚು ಧ್ವಜಗಳನ್ನು ತಯಾರಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ, ಅದು ಆಗಸ್ಟ್ 9ರೊಳಗೆ ತಲುಪಿಸಲಾಗುವುದು. ಅಮೃತ ಮಹೋತ್ಸವವು ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಿದ್ದು, ಧ್ವಜಗಳಿಗೆ ಬೇಡಿಕೆಯೂ ಹೆಚ್ಚಾಗಿದೆ ಎಂದು ಪ್ರಾದೇಶಿಕ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಇಂಡಿಯಾ ಟುಡೆಗೆ ಮಾಹಿತಿ ನೀಡಿದ್ದಾರೆ. ಕಾರ್ಮಿಕರು ನಿರಂತರವಾಗಿ ಕೊಡುಗೆ ನೀಡಲು ಶ್ರಮಿಸುತ್ತಿದ್ದಾರೆ ಮತ್ತು ಈ 75 ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ 2.5 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಆತಿಥ್ಯ ವಹಿಸುವ ಮೂಲಕ ವಿಶೇಷವಾಗಿದೆ. ಬಟ್ಟೆಗೆ ಬಣ್ಣ ಬಳಿಯುವುದರಿಂದ ಹಿಡಿದು ಸ್ಟಾಪ್‌ಗಳನ್ನು ಕತ್ತರಿಸುವುದು, ಧ್ವಜದ ಹೊಲಿಗೆಗಳನ್ನು ಇಲ್ಲಿ ಮಾಡಲಾಗಿದೆ ಇದರ ಜೊತೆಗೆ ವಿತರಣೆಯು ಈಗಾಗಲೇ ಪ್ರಾರಂಭವಾಗಿದೆ ಎಂದು ಉತ್ಪಾದನಾ ಘಟಕದ ಮೇಲ್ವಿಚಾರಕ ಮದನ್ ಸಿಂಗ್ ಹೇಳಿದರು.

ಮತ್ತೊಂದೆಡೆ, ಪ್ರತಿ ಮನೆಯಲ್ಲೂ ತಿರಂಗಾ ಅಭಿಯಾನವನ್ನು ಅದ್ಧೂರಿಯಾಗಿ ಮಾಡಲು ಯುಪಿ ಸರ್ಕಾರ 40 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ಧ್ವಜವನ್ನು ಖರೀದಿಸಿದೆ. ಇದಕ್ಕಾಗಿ ನಗರಾಭಿವೃದ್ಧಿ ಇಲಾಖೆಯಿಂದ 30 ಕೋಟಿ ಪಂಚಾಯತ್ ರಾಜ್ ಹಾಗೂ 10 ಕೋಟಿ ರೂ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಹಿಂದೆ ಕ್ಯಾಬಿನೆಟ್ ಪ್ರಸ್ತಾವನೆಯನ್ನು ಅನುಮೋದಿಸಿದ್ದರು.

ಉತ್ತರ ಪ್ರದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಇಲಾಖೆಯು ಅಮೃತ ಮಹೋತ್ಸವದ ಅಡಿಯಲ್ಲಿ ಸ್ವಾತಂತ್ರ್ಯ ದಿನದಂದು ಆಚರಿಸಲಾಗುವ ‘ಹರ್ ಘರ್ ತಿರಂಗ’ ಕಾರ್ಯಕ್ರಮಕ್ಕಾಗಿ 2 ಕೋಟಿ ರಾಷ್ಟ್ರಧ್ವಜಗಳನ್ನು ಖರೀದಿಸಲಿದೆ. ರಾಷ್ಟ್ರಧ್ವಜವೊಂದರ ಬೆಲೆಯನ್ನು 20 ರೂಪಾಯಿ ಎಂದು ಪರಿಗಣಿಸಿ, 1.5 ಕೋಟಿ ಧ್ವಜಗಳನ್ನು ಖರೀದಿಸಲು ಪಂಚಾಯತ್ ರಾಜ್ ಇಲಾಖೆ MSME ಇಲಾಖೆಗೆ 30 ಕೋಟಿ ರೂಪಾಯಿಗಳನ್ನು ನೀಡುತ್ತದೆ.

Published On - 9:49 am, Fri, 5 August 22

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?