Azadi Ka Amrit Mahotsav: ಸ್ವಾತಂತ್ರ್ಯಾ ಪೂರ್ವ ಹಾಗೂ ನಂತರದ ಚಿತ್ರರಂಗ
ಭಾರತದಲ್ಲಿ 1913ರಲ್ಲಿ ಮೊಟ್ಟ ಮೊದಲ ಸಿನಿಮಾ ಸಿದ್ಧಗೊಂಡಿತು. ಅದು ‘ರಾಜಾ ಹರಿಚಂದ್ರ’. ಈ ಸಿನಿಮಾ ನಿರ್ದೇಶನ ಮಾಡಿದ್ದು ದಾದಾ ಸಾಹೇಬ್ ಫಾಲ್ಕೆ. ಭಾರತೀಯ ಸಿನಿಮಾದ ಪಿತಾಮಹ ಎಂದು ಅವರನ್ನು ಕರೆಯಲಾಗುತ್ತದೆ.
ಭಾರತೀಯರ ನಿತ್ಯ ಜೀವನದಲ್ಲಿ ಸಿನಿಮಾ (Cinema) ಎಂಬುದು ಹಾಸು ಹೊಕ್ಕಾಗಿದೆ. ಸ್ಟಾರ್ ನಟ/ನಟಿಯರನ್ನು ಆರಾಧಿಸುವ ಕಾರ್ಯ ಈ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಭಾರತಕ್ಕೆ ಸಿನಿಮಾ (Indian Cinema) ಕಾಲಿಟ್ಟು 100 ವರ್ಷಗಳೇ ಕಳೆದಿವೆ. ಈ ಅವಧಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡಿವೆ. ತಂತ್ರಜ್ಞಾನ, ವೀಕ್ಷಕರ ವಲಯ ಹೀಗೆ ಪ್ರತಿ ವಿಚಾರದಲ್ಲೂ ಹಲವು ಬದಲಾವಣೆಗಳನ್ನು ಭಾರತದ ಚಿತ್ರರಂಗ ಕಂಡಿದೆ.
ಮೊದಲು ಬ್ಲ್ಯಾಕ್ ಆ್ಯಂಡ್ ವೈಟ್ ಸಿನಿಮಾಗಳು ಸಿದ್ಧಗೊಳ್ಳುತ್ತಿದ್ದವು. ಈಗ ಕಲರಿಂಗ್ನಲ್ಲೇ ಮೋಡಿ ಮಾಡುವ ತಂತ್ರಜ್ಞಾನ ಬದಿದೆ. ಮೊದಲಿನ ಸಿನಿಮಾಗಳಿಗೆ ಜೀರೋ ಗ್ರಾಫಿಕ್ಸ್ ಇರುತ್ತಿತ್ತು. ಈಗ ಗ್ರಾಫಿಕ್ಸ್ ಬಳಕೆ ಮಾಡಿಕೊಂಡೇ ಸಂಪೂರ್ಣ ಸಿನಿಮಾ ಸಿದ್ಧಗೊಂಡ ಉದಾಹರಣೆ ಇದೆ. ಡಾರ್ವಿನ್ ಅವರ ವಿಕಸನಾ ವಾದ ಚಿತ್ರರಂಗಕ್ಕೆ ಉತ್ತಮ ರೀತಿಯಲ್ಲಿ ಅನ್ವಯ ಆಗುತ್ತದೆ.
ಭಾರತದಲ್ಲಿ 1913ರಲ್ಲಿ ಮೊಟ್ಟ ಮೊದಲ ಸಿನಿಮಾ ಸಿದ್ಧಗೊಂಡಿತು. ಅದು ‘ರಾಜಾ ಹರಿಚಂದ್ರ’. ಈ ಸಿನಿಮಾ ನಿರ್ದೇಶನ ಮಾಡಿದ್ದು ದಾದಾ ಸಾಹೇಬ್ ಫಾಲ್ಕೆ. ಭಾರತೀಯ ಸಿನಿಮಾದ ಪಿತಾಮಹ ಎಂದು ಅವರನ್ನು ಕರೆಯಲಾಗುತ್ತದೆ. ಇದು ಮೂಕಿ ಚಿತ್ರವಾಗಿತ್ತು. ಆದರೆ, ಈ ಚಿತ್ರ ಅನೇಕರ ಮೇಲೆ ಪ್ರಭಾವ ಬೀರಿತು. ಈ ಚಿತ್ರದಿಂದ ಸ್ಫೂರ್ತಿ ಪಡೆದು ಹಲವು ನಿರ್ದೇಶಕರು ಹುಟ್ಟಿಕೊಂಡರು. ಆ ಬಳಿಕ ಸುಮಾರು 20 ವರ್ಷಗಳ ಕಾಲ ತೆರೆಗೆ ಬಂದಿದ್ದ ಎಲ್ಲ ಚಿತ್ರಗಳು ಮೂಕಿಯೇ. 1931ರ ಮಾರ್ಚ್ 14ರಂದು ‘ಆಲಂ ಆರ’ ಸಿನಿಮಾ ತೆರೆಗೆ ಬಂತು. ಇದು ಮೊದಲ ಸೌಂಡ್ ಒಳಗೊಂಡ ಚಿತ್ರ.
ಬ್ರಿಟಿಷ್ ಆಳ್ವಿಕೆ ಕೊನೆಗೊಂಡ ಬಳಿಕದ ಸಮಯವನ್ನು ಸುವರ್ಣ ಯುಗ ಎಂದು ಸಿನಿ ಪಂಡಿತರು ಕರೆಯುತ್ತಾರೆ. 1940-60ರ ಸಮಯ ಭಾರತದ ಪಾಲಿಗೆ ವಿಶೇಷವಾಗಿತ್ತು. ಬೆಂಗಾಲಿ ನಿರ್ದೇಶಕರಾದ ಸತ್ಯಜಿತ್ ರೇ, ರಿತ್ವಿಕ್ ಘಟಕ್, ಮೃಣಾಲ್ ಸೇನ್ ಮೊದಲಾದವರು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದರು. ಇದರ ಜತೆಗೆ ದಕ್ಷಿಣ ಭಾರತದ ಕೊಡುಗೆ ಕೂಡ ದೊಡ್ಡದಿದೆ.
ಸಿನಿಮಾದಲ್ಲಿ ಹಾಡುಗಳು, ಡ್ಯಾನ್ಸ್, ಫೈಟ್ ಹಾಗೂ ಹೀರೋಯಿಸಂ ಚಿತ್ರಗಳು ಕೂಡ ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಇದನ್ನು ಕಮರ್ಷಿಯಲ್ ಸಿನಿಮಾಗಳು ಎಂದು ಕರೆಯಲಾಗುತ್ತದೆ. ಲಾಭದ ದೃಷ್ಟಿಯಲ್ಲಿ ಈ ರೀತಿಯ ಸಿನಿಮಾಗಳನ್ನು ತಯಾರಿಸಲಾಗುತ್ತದೆ. ರಾಜ್ಕುಮಾರ್, ರಜನಿಕಾಂತ್, ಅಮಿತಾಭ್ ಬಚ್ಚನ್, ಎನ್ಟಿಆರ್ ಮೊದಲಾದ ಸ್ಟಾರ್ ನಟರು ಭಾರತ ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ನವದಂಪತಿಯನ್ನು ಮನೆಗೆ ಆಹ್ವಾನಿಸಿ ಉಡುಗೊರೆ ಕೊಟ್ಟ ನಟ ರಜನಿಕಾಂತ್
ಸಿನಿಮಾ ಮೇಕಿಂಗ್ನಲ್ಲೂ ಸಾಕಷ್ಟು ಬದಲಾವಣೆ ಕಂಡಿದೆ. ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ದಕ್ಷಿಣ ನಿರ್ದೇಶಕರಾದ ಎಸ್ಎಸ್ ರಾಜಮೌಳಿ, ಪ್ರಶಾಂತ್ ನೀಲ್ ಮೊದಲಾದ ಸ್ಟಾರ್ ನಿರ್ದೇಶಕರು ಫಿಕ್ಷನ್ ಸಿನಿಮಾ ಮೂಲಕ ವಿಶ್ವ ಮಟ್ಟದಲ್ಲಿ ಭಾರತದ ಸಿನಿಮಾವನ್ನು ಕರೆದುಕೊಂಡು ಹೋಗಿದ್ದಾರೆ. ವಿಶ್ವ ಮಾರುಕಟ್ಟೆಯಲ್ಲಿ ಭಾರತದ ಸಿನಿಮಾಗಳು ಪಾರುಪತ್ಯ ಸಾಧಿಸುತ್ತಿವೆ ಅನ್ನೋದು ಹೆಮ್ಮೆಯ ವಿಚಾರ.