Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡ: ಮದುವೆಗೆ ಹೋಗಿ ಬರುತ್ತಿದ್ದ ವಾಹನ ಕಮರಿಗೆ ಬಿದ್ದು 14 ಮಂದಿ ಸಾವು

ರಸ್ತೆ ಅಪಘಾತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಈವರೆಗೆ 11 ಮೃತದೇಹಗಳನ್ನು ಹೊರತೆಗೆದಿದ್ದೇವೆ. ನಮ್ಮ ಮಾಹಿತಿ ಪ್ರಕಾರ ವಾಹನದಲ್ಲಿ 14-15 ಮಂದಿ ಇದ್ದರು. ರಕ್ಷಣಾ ತಂಡವು ಇತರ ಜನರನ್ನು ಹುಡುಕುತ್ತಿದೆ ಎಂದು ಚಂಪಾವತ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಪಿಂಚಾ ಹೇಳಿದ್ದಾರೆ.

ಉತ್ತರಾಖಂಡ: ಮದುವೆಗೆ ಹೋಗಿ ಬರುತ್ತಿದ್ದ ವಾಹನ ಕಮರಿಗೆ ಬಿದ್ದು 14 ಮಂದಿ ಸಾವು
ಉತ್ತರಾಖಂಡದಲ್ಲಿ ಕಮರಿಗೆ ಬಿದ್ದ ವಾಹನ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Feb 22, 2022 | 12:19 PM

ಚಂಪಾವತ್ (ಉತ್ತರಾಖಂಡ): ಮದುವೆಗೆ  ಹೋಗಿ ಬರುತ್ತಿದ್ದ ವಾಹನವೊಂದು ಮಂಗಳವಾರ ಬೆಳಗ್ಗೆ ಉತ್ತರಾಖಂಡದ (Uttarakhand) ಚಂಪಾವತ್‌ನ ಬುಡಮ್ ಗ್ರಾಮದ ಸುಖಿದಂಗ್ ರೀತಾ ಸಾಹಿಬ್ ರಸ್ತೆಯ ಬಳಿಯ ಕಮರಿಗೆ ಬಿದ್ದು 14 ಜನರು ಸಾವನ್ನಪ್ಪಿದ್ದಾರೆ.  “ಸುಖಿದಂಗ್ ರೀತಾ ಸಾಹಿಬ್ ರಸ್ತೆಯ ಬಳಿ ವಾಹನವೊಂದು ಕಮರಿಗೆ ಬಿದ್ದ ಪರಿಣಾಮ 14 ಮಂದಿ ಸಾವನ್ನಪ್ಪಿದ್ದಾರೆ . ಸಂತ್ರಸ್ತರು ತನಕ್‌ಪುರದ ಪಂಚಮುಖಿ ಧರ್ಮಶಾಲಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು” ಎಂದು ಕುಮಾವೂನ್ ಉಪ ಪೊಲೀಸ್ ಮಹಾನಿರೀಕ್ಷಕ (ಡಿಐಜಿ) ನಿಲೇಶ್ ಆನಂದ್ ಭರಣೆ ಮಾಹಿತಿ ನೀಡಿದ್ದಾರೆ  ಎಂದು ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ಸಾವಿಗೀಡಾದವರು ಉತ್ತರಾಖಂಡದ ಕಾಕನೈನ ದಂಡ ಮತ್ತು ಕಥೋಟಿ ಗ್ರಾಮಗಳಿಗೆ ಸೇರಿದವರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 1000 ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ. ಉತ್ತರಾಖಂಡದಲ್ಲಿ ಅಪಘಾತದಿಂದ ಪ್ರಾಣ ಕಳೆದುಕೊಂಡವರ ಮುಂದಿನ ಕುಟುಂಬಕ್ಕೆ PMNRF ನಿಂದ ತಲಾ 2 ಲಕ್ಷ ರೂ. ಗಾಯಾಳುಗಳಿಗೆ ರೂ. 50,000 ಘೋಷಿಸಿರುವುದಾಗಿ ಪ್ರಧಾನಿಯವರ ಕಚೇರಿ ಟ್ವೀಟ್ ಮಾಡಿದೆ.

ಪೊಲೀಸರು ಮತ್ತು ರಕ್ಷಣಾ ತಂಡಗಳು ಪ್ರಸ್ತುತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಇಲ್ಲಿ ರಸ್ತೆ ಅಪಘಾತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಈವರೆಗೆ 11 ಮೃತದೇಹಗಳನ್ನು ಹೊರತೆಗೆದಿದ್ದೇವೆ. ನಮ್ಮ ಮಾಹಿತಿ ಪ್ರಕಾರ ವಾಹನದಲ್ಲಿ 14-15 ಮಂದಿ ಇದ್ದರು. ರಕ್ಷಣಾ ತಂಡವು ಇತರ ಜನರನ್ನು ಹುಡುಕುತ್ತಿದೆ ಎಂದು ಚಂಪಾವತ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಪಿಂಚಾ ಹೇಳಿದ್ದಾರೆ.

ಸಂತ್ರಸ್ತರು ಸೋಮವಾರ ರಾತ್ರಿ ತನಕ್‌ಪುರದಲ್ಲಿ ಮದುವೆಗೆ ಹಿಂದಿರುಗುತ್ತಿದ್ದಾಗ ಅವರ ವಾಹನವು ರುದ್ರಪುರದಿಂದ 140-ಕಿಮೀ ದೂರದಲ್ಲಿರುವ ಸುಖಿಧಾಂಗ್-ದಂಡಾ-ಮಿನಾರ್ ರಸ್ತೆಯಲ್ಲಿ ಕಮರಿಗೆ ಬಿದ್ದಿದೆ ಎಂದು ಅವರು ಹೇಳಿದರು.

ಅಪಘಾತದಲ್ಲಿ ವಾಹನದ ಚಾಲಕ ಪಾಟಿ ಗ್ರಾಮದ ಪ್ರಕಾಶ್ ರಾಮ್ ಮತ್ತು ಕಾಕನಾಯಿ ಗ್ರಾಮದ ತ್ರಿಲೋಕ್ ರಾಮ್ ಗಾಯಗೊಂಡಿದ್ದಾರೆ. ಅವರು ರಸ್ತೆಯ ಮೇಲೆ ಹತ್ತಿ ಅಪಘಾತದ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದರು. ನಂತರ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ಇದನ್ನೂ ಓದಿ: ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿಯಲ್ಲಿ ಶುರುವಾದ ಒಳಜಗಳ; ಉತ್ತರಾಖಂಡ್​ ಬಿಜೆಪಿ ಮುಖ್ಯಸ್ಥ ದೇಶದ್ರೋಹಿಯೆಂದ ಶಾಸಕ

Published On - 11:58 am, Tue, 22 February 22