AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶರದ್ ಪ್ರವಾರ್ ತೃತೀಯ ರಂಗದ ಸಭೆ ಆಯೋಜಿಸುತ್ತಿಲ್ಲ: ಊಹಾಪೋಹಗಳಿಗೆ ತೆರೆ ಎಳೆದ ಆಯೋಜಕರು

Sharad Pawar: ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಇತ್ತೀಚೆಗೆ ತೃಣಮೂಲ ಕಾಂಗ್ರೆಸ್​ಗೆ ಸೇರ್ಪಡೆಗೊಂಡಿದ್ದು, ಅವರು 2018 ರಲ್ಲಿ ಸ್ಥಾಪಿಸಿದ ರಾಜಕೀಯ ಕ್ರಿಯಾ ಗುಂಪಾದ "ರಾಷ್ಟ್ರ ಮಂಚ್" ನ ಸದಸ್ಯರನ್ನು ಭೇಟಿ ಮಾಡಲು ಶರದ್ ಪವಾರ್ ಅವರನ್ನು ಕೇಳಿಕೊಂಡಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.

ಶರದ್ ಪ್ರವಾರ್ ತೃತೀಯ ರಂಗದ ಸಭೆ ಆಯೋಜಿಸುತ್ತಿಲ್ಲ: ಊಹಾಪೋಹಗಳಿಗೆ ತೆರೆ ಎಳೆದ ಆಯೋಜಕರು
ಶರದ್ ಪವಾರ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jun 22, 2021 | 5:23 PM

Share

ದೆಹಲಿ:  ಹಿರಿಯ ರಾಜಕಾರಣಿ ಶರದ್ ಪವಾರ್ ಇಂದು ತೃತೀಯರಂಗದ ಸಭೆಯನ್ನು ಆಯೋಜಿಸುತ್ತಿಲ್ಲ. ಪ್ರಸ್ತುತ ಘಟನೆಗಳನ್ನು ಚರ್ಚಿಸಲು ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳ ಒಟ್ಟುಗೂಡಿಸುವಿಕೆಯಾಗಿದೆ ಎಂದು ಸಭೆಗಿಂತ ಮುಂಚೆ ಸ್ಪಷ್ಟನೆ ನೀಡಲಾಗಿದೆ.  2024 ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿಯ ವಿರುದ್ಧ ಹೋರಾಡಲು ತೃತೀಯ ರಂಗವನ್ನು ಒಟ್ಟುಗೂಡಿಸುವುದರೊಂದಿಗೆ ಸಭೆಗೆ ಯಾವುದೇ ಸಂಬಂಧವಿಲ್ಲ ಎಂದು ಆಯೋಜಕರು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಇತ್ತೀಚೆಗೆ ತೃಣಮೂಲ ಕಾಂಗ್ರೆಸ್​ಗೆ ಸೇರ್ಪಡೆಗೊಂಡಿದ್ದು, ಅವರು 2018 ರಲ್ಲಿ ಸ್ಥಾಪಿಸಿದ ರಾಜಕೀಯ ಕ್ರಿಯಾ ಗುಂಪಾದ “ರಾಷ್ಟ್ರ ಮಂಚ್” ನ ಸದಸ್ಯರನ್ನು ಭೇಟಿ ಮಾಡಲು ಶರದ್ ಪವಾರ್ ಅವರನ್ನು ಕೇಳಿಕೊಂಡಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.

“ಯಶ್ವಂತ್ ಸಿನ್ಹಾ ಅವರು ರಾಷ್ಟ್ರ ಮಂಚ್ ಮುಖ್ಯಸ್ಥರಾಗಿದ್ದಾರೆ. ಅವರು ಪವಾರ್ ಅವರನ್ನು ಭೇಟಿಯಾಗಲು ಕೇಳಿಕೊಂಡರು. ಆದ್ದರಿಂದ ಸಭೆ ರಾಷ್ಟ್ರ ಮಂಚ್ ನಿಂದ ಆಯೋಜಿಸಲಾಗಿದೆ ಎಂದು ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸದಸ್ಯ ಪ್ರಫುಲ್ ಪಟೇಲ್ ಹೇಳಿದರು.

ಶರದ್ ಪವಾರ್ ಅಥವಾ ಅವರ ಪಕ್ಷ ಯಾವುದೇ ಆಹ್ವಾನಗಳನ್ನು ನೀಡಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. “ಇದು ಹೆಚ್ಚು ಅತಿ ಹೆಚ್ಚು ಪ್ರಚಾರ ಸಿಕ್ಕಿದ ಮತ್ತು ಅನುಮಾನಗಳ ಸಭೆ” ಎಂದು ಅವರು ಹೇಳಿದರು. ರಾಜಕಾರಣಿಗಳಲ್ಲದೆ, “ವಿವಿಧ ಕ್ಷೇತ್ರಗಳ ಶ್ರೇಷ್ಠ ವ್ಯಕ್ತಿಗಳನ್ನು” ಸಭೆಗೆ ಆಹ್ವಾನಿಸಲಾಗಿದೆ.ಹಾಗಾಗಿ ಇದು ರಾಜಕೀಯ ಮಾತ್ರ ಎಂಬುದು ಗೊತ್ತಾಗಲಿದೆ.

ಇದು ಶಿವಸೇನೆ, ಸಮಾಜವಾದಿ ಪಕ್ಷ, ಬಿಎಸ್ಪಿ ಮತ್ತು ಚಂದ್ರಬಾಬು ನಾಯ್ಡುಗಳನ್ನು ಹೊಂದಿರದ ಕಾರಣ ಇದು ವಿರೋಧ ಪಕ್ಷದ ಸಭೆ ಎಂದು ನಾನು ನಂಬುವುದಿಲ್ಲ. ಬಹುಶಃ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವ ಮೊದಲ ಉಪಕ್ರಮ ಇದಾಗಿದೆ ಎಂದು ಶಿವಸೇನೆಯ ಸಂಜಯ್ ರೌತ್ ಹೇಳಿದ್ದಾರೆ.

ನಿಯಮಿತವಾಗಿ ಭೇಟಿಯಾಗುವ ಮಂಚ್, ಮುಕ್ತ ಸದಸ್ಯತ್ವವನ್ನು ಹೊಂದಿದೆ ಎಂದು ಮಾಜಿ ಜನತಾದಳ ಯುನೈಟೆಡ್ ನಾಯಕ ಪವನ್ ವರ್ಮಾ ಹೇಳಿದ್ದಾರೆ. “ನಾವು ಬಿಜೆಪಿಯನ್ನು ಹೊರತುಪಡಿಸಿ ವಿವಿಧ ಪಕ್ಷಗಳು ಮತ್ತು ವಿವಿಧ ಸದಸ್ಯರನ್ನು ಆಹ್ವಾನಿಸುತ್ತೇವೆ” ಎಂದು ವರ್ಮಾ ಹೇಳಿದರು.

ಆಹ್ವಾನಿತರಲ್ಲಿ ಹಿರಿಯ ವಕೀಲ ಕೆ.ಟಿ.ಎಸ್ ತುಳಸಿ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಕುರೇಷಿ, ಮಾಜಿ ರಾಯಭಾರಿ ಕೆ.ಸಿ.ಸಿಂಗ್, ಗೀತರಚನೆಕಾರ ಜಾವೇದ್ ಅಖ್ತರ್, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ, ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್, ಮಾಧ್ಯಮದವರಾದ ಕರಣ್ ಥಾಪರ್ ಮತ್ತು ಅಶುತೋಷ್ ಇದ್ದಾರೆ ಎಂದು ಎನ್‌ಸಿಪಿ ನಾಯಕ ನವಾಬ್ ಮಲ್ಲಿಕ್ ಹೇಳಿದ್ದಾರೆ.

ಈ ಸಭೆಯಲ್ಲಿ ಅವರ ಪುತ್ರ ಒಮರ್ ಅಬ್ದುಲ್ಲಾ ಭಾಗವಹಿಸಲಿದ್ದಾರೆ ಎಂದು ರಾಷ್ಟ್ರೀಯ ಸಮ್ಮೇಳನದ ನಾಯಕ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಈ ಸಭೆಯು  ರಾಜಕೀಯ ಗಮನವನ್ನು ಸೆಳೆಯಲು ಮತ್ತೊಂದು ಕಾರಣವೆಂದರೆ, ವಿವರಗಳು ಹೊರಬರುವ ಮುನ್ನ ಪವಾರ್ ಅವರು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರೊಂದಿಗೆ ನಡೆಸಿದ ಮಾತುಕತೆ. ಎರಡು ವಾರಗಳಲ್ಲಿ ಇದು ಅವರ ಎರಡನೇ ಸಭೆ ಮತ್ತು ತೃತೀಯ ರಂಗ ತಯಾರಾಗುತ್ತಿದೆ ಎಂಬ ತೀವ್ರ ಊಹಾಪೋಹಗಳು ಕೇಳಿ ಬಂದಿವೆ. ಪವಾರ್ ಅವರ ನೆಟ್‌ವರ್ಕಿಂಗ್ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದು ಅನೇಕ ಅಸಂಭವ ಒಕ್ಕೂಟವನ್ನು ಜೋಡಿಸಲು ಮಾಡಲು ಸಹಾಯ ಮಾಡಿದ್ದಾರೆ.

ಆದರೆ ಪ್ರಶಾಂತ್ ಕಿಶೋರ್ ಅವರು ಸಭೆಯಿಂದ ದೂರ ಸರಿದು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಸೆಣೆಸಲು ವಿರೋಧ ಪಕ್ಷದೊಂದಿಗಿನ ಯಾವುದೇ ಒಡನಾಟವನ್ನು ಮಾಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ:  ಮೂರನೇ ಅಥವಾ ನಾಲ್ಕನೇ ರಂಗವು ಬಿಜೆಪಿಗೆ ಸವಾಲೊಡ್ಡಬಲ್ಲದು ಎಂದು ನನಗನಿಸುತ್ತಿಲ್ಲ: ಪ್ರಶಾಂತ್ ಕಿಶೋರ್

Published On - 5:04 pm, Tue, 22 June 21

100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ