AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಳಪತಿ’ ರಾಜಕೀಯ ತಮಿಳುನಾಡಿಗೆ ಮಾತ್ರ ಸೀಮಿತವೇ? ಕೇರಳಂ ಸಿಎಂ ವಿಡಿ ಸತೀಶನ್ ಪದಗ್ರಹಣಕ್ಕೆ ವಿಜಯ್ ಗೈರು

ಕೇರಳದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಸೋಮವಾರ ಅಧಿಕಾರ ಸ್ವೀಕರಿಸಿದರು. ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ದೇಶದ ಪ್ರಮುಖ ನಾಯಕರು ಪಾಲ್ಗೊಂಡಿದ್ದ ಈ ಭವ್ಯ ಸಮಾರಂಭದಲ್ಲಿ, ತಮಿಳುನಾಡಿನ ನೂತನ ಸಿಎಂ ದಳಪತಿ ವಿಜಯ್ ಅವರ ಗೈರು ಭಾರಿ ಚರ್ಚೆಗೆ ಕಾರಣವಾಗಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಿರುವ ವಿಜಯ್, ಅಧಿಕೃತ ಆಮಂತ್ರಣವಿದ್ದರೂ ಕೊನೆ ಕ್ಷಣದಲ್ಲಿ ದೂರ ಉಳಿದಿದ್ದಾರೆ. ವಿಜಯ್ ಅವರ ರಾಜಕೀಯ ಸಿದ್ಧಾಂತವು 'ತಮಿಳು ಅಸ್ಮಿತೆ'ಗೆ ಸೀಮಿತವಾಗಿರುವುದರಿಂದ ಹಾಗೂ ತಮ್ಮ ಪಕ್ಷವನ್ನು ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಮಯ ಎಂದು ಬಿಂಬಿಸಲು ಇಷ್ಟಪಡದ ಕಾರಣ ಅವರು ಈ ನಿರ್ಧಾರ ಕೈಗೊಂಡಿರಬಹುದು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

‘ದಳಪತಿ’ ರಾಜಕೀಯ ತಮಿಳುನಾಡಿಗೆ ಮಾತ್ರ ಸೀಮಿತವೇ? ಕೇರಳಂ ಸಿಎಂ ವಿಡಿ ಸತೀಶನ್ ಪದಗ್ರಹಣಕ್ಕೆ ವಿಜಯ್  ಗೈರು
ವಿಜಯ್ Image Credit source: NDTV
ನಯನಾ ರಾಜೀವ್
|

Updated on: May 18, 2026 | 10:42 AM

Share

ತಿರುವನಂತಪುರಂ, ಮೇ 18: ಕೇರಳಂನಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ್ದು, ಹಿರಿಯ ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಅವರು ಸೋಮವಾರ (ಮೇ 18) ಕೇರಳದ ನೂತನ ಮುಖ್ಯಮಂತ್ರಿಯಾಗಿ ಅದ್ಧೂರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೇಶದ ಪ್ರಮುಖ ರಾಜಕೀಯ ಗಣ್ಯರು ಭಾಗವಹಿಸಿದ್ದ ಈ ಸಮಾರಂಭದಲ್ಲಿ, ತಮಿಳುನಾಡಿನ ನೂತನ ಮುಖ್ಯಮಂತ್ರಿ, ನಟ ದಳಪತಿ ವಿಜಯ್(Thalapathy Vijay) ಅವರ ಗೈರುಹಾಜರಿ ಈಗ ದಕ್ಷಿಣ ಭಾರತದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕಾಂಗ್ರೆಸ್ ಕೈಹಿಡಿದಿದ್ದ ವಿಜಯ್, ಕೇರಳಕ್ಕೆ ಬರಲಿಲ್ಲ ಏಕೆ? ಕಳೆದ ವಾರವಷ್ಟೇ ತಮಿಳುನಾಡಿನಲ್ಲಿ ಮ್ಯಾಜಿಕ್ ನಂಬರ್ ಕೊರತೆಯಿಂದ ಪರದಾಡುತ್ತಿದ್ದ ವಿಜಯ್ ಅವರ ‘ಟಿವಿಕೆ’ (TVK) ಪಕ್ಷಕ್ಕೆ ಕಾಂಗ್ರೆಸ್‌ನ 5 ಶಾಸಕರು ಬೆಂಬಲ ನೀಡಿದ್ದರು. ಈ ಮೈತ್ರಿಯ ಬಲದಿಂದಲೇ ವಿಜಯ್ ಮೇ 10 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ತಮಿಳುನಾಡಿನಲ್ಲಿ ವಿಜಯ್ ಗೆಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಅವರೊಂದಿಗೆ ಸೆಲ್ಫಿ ವಿಡಿಯೋ ತೆಗೆದುಕೊಂಡು ಸಂಭ್ರಮಿಸಿದ್ದ ವಿಜಯ್, ಕೇರಳ ಸಿಎಂ ಪದಗ್ರಹಣಕ್ಕೆ ಆಗಮಿಸಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ವಿಜಯ್ ಅವರಿಗೆ ಅಧಿಕೃತ ಆಮಂತ್ರಣವನ್ನೂ ಕಳುಹಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ವಿಜಯ್ ಸಮಾರಂಭದಿಂದ ದೂರ ಉಳಿದಿದ್ದಾರೆ.

ವೇದಿಕೆಯಲ್ಲಿದ್ದ ದಕ್ಷಿಣದ ದೈತ್ಯರು ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಉಪಸ್ಥಿತರಿದ್ದರು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ಸೇರಿದಂತೆ ನೆರೆರಾಜ್ಯಗಳ ಮುಖ್ಯಮಂತ್ರಿಗಳು ವೇದಿಕೆ ಹಂಚಿಕೊಂಡಿದ್ದರು. ಆದರೆ ವಿಜಯ್ ಅವರ ಅನುಪಸ್ಥಿತಿಯು ಎದ್ದು ಕಾಣುತ್ತಿತ್ತು.

ಮತ್ತಷ್ಟು ಓದಿ: ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ಜೋಸೆಫ್​​ ವಿಜಯ್​​

‘ತಮಿಳುನಾಡಿಗೆ ಮಾತ್ರ ಸೀಮಿತ’ ಎಂಬ ಚರ್ಚೆ ಶುರುವಾಗಿದ್ದು ಏಕೆ? ವಿಜಯ್ ಅವರ ಈ ಗೈರುಹಾಜರಿಯನ್ನು ರಾಜಕೀಯ ತಜ್ಞರು ವಿಭಿನ್ನವಾಗಿ ವಿಶ್ಲೇಷಿಸುತ್ತಿದ್ದಾರೆ, ತಮಿಳುನಾಡಿನಲ್ಲಿ ಈಗಷ್ಟೇ ವಿಶ್ವಾಸಮತ ಗೆದ್ದಿರುವ ವಿಜಯ್, ತಮ್ಮದೇ ರಾಜ್ಯದ ಆಡಳಿತ ಮತ್ತು ಇತ್ತೀಚಿನ ರಾಜಕೀಯ ವಿವಾದಗಳ ಕಸರತ್ತಿನಲ್ಲಿ ಬ್ಯುಸಿಯಾಗಿದ್ದಾರೆ.

ವಿಜಯ್ ಅವರ ರಾಜಕೀಯದ ಮೂಲ ಸಿದ್ಧಾಂತವೇ ‘ತಮಿಳು ಅಸ್ಮಿತೆ’ಯಾಗಿದೆ. ತಮಿಳುನಾಡು ದಾಟಿ ಕೇರಳ ಅಥವಾ ಇತರ ರಾಜ್ಯಗಳ ರಾಜಕೀಯ ವೇದಿಕೆಗಳಲ್ಲಿ ಕಾಣಿಸಿಕೊಂಡರೆ ಪ್ರಾದೇಶಿಕ ನಾಯಕತ್ವದ ಮೇಲಿನ ಹಿಡಿತ ಸಡಿಲವಾಗಬಹುದು ಎಂಬ ಲೆಕ್ಕಾಚಾರವೂ ಇರಬಹುದು.ಕಾಂಗ್ರೆಸ್ ಬೆಂಬಲದೊಂದಿಗೆ ತಮಿಳುನಾಡಿನಲ್ಲಿ ಸರ್ಕಾರ ರಚಿಸಿದ್ದರೂ, ತಮ್ಮ ಪಕ್ಷವನ್ನು ಸಂಪೂರ್ಣವಾಗಿ ಕಾಂಗ್ರೆಸ್ ಮಯ ಎಂದು ಬಿಂಬಿಸಿಕೊಳ್ಳಲು ವಿಜಯ್ ಇಷ್ಟಪಡುತ್ತಿಲ್ಲ ಎನ್ನಲಾಗಿದೆ.

ಬೆಳ್ಳಿತೆರೆಯ ಮೇಲಿದ್ದಾಗ ಕೇರಳದಲ್ಲಿ ವಿಜಯ್ ಅವರಿಗೆ ತಮಿಳುನಾಡಿನಷ್ಟೇ ಭೀಕರ ಫ್ಯಾನ್ ಬೇಸ್ ಇತ್ತು. ಆದರೆ, ರಾಜಕೀಯಕ್ಕೆ ಬರುತ್ತಿದ್ದಂತೆ ವಿಜಯ್ ತಮ್ಮನ್ನು ಕೇವಲ ತಮಿಳುನಾಡಿನ ಗಡಿಯೊಳಗೆ ಸೀಮಿತಗೊಳಿಸಿಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆ ಕೇರಳದ ಅಭಿಮಾನಿಗಳಲ್ಲಿ ಮೂಡಿದೆ.

ಕೇರಳದಲ್ಲಿ ವಿ.ಡಿ. ಸತೀಶನ್ ನೇತೃತ್ವದ 20 ಸದಸ್ಯರ ನೂತನ ಸಂಪುಟ ಯಶಸ್ವಿಯಾಗಿ ಅಧಿಕಾರ ವಹಿಸಿಕೊಂಡಿದ್ದರೂ, ತಮಿಳುನಾಡು ಸಿಎಂ ವಿಜಯ್ ಅವರ ‘ಮಿಸ್ಸಿಂಗ್’ ಮಾತ್ರ ಇಂದಿನ ಕಾರ್ಯಕ್ರಮದ ಹಾಟ್ ಟಾಪಿಕ್ ಆಗಿ ಉಳಿದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More