ಭಾರತಕ್ಕಿಂದು ಹೆಮ್ಮೆಯ ದಿನ: ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ಯುದ್ಧನೌಕೆ ವಿಕ್ರಾಂತ್ ಪರೀಕ್ಷಾರ್ಥ ಸಂಚಾರ ಆರಂಭ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 04, 2021 | 11:18 PM

Indian Navy: ದೇಶದಲ್ಲಿ ಈವರೆಗೆ ನಿರ್ಮಿಸಿರುವ ಯುದ್ಧನೌಕೆಗಳ ಪೈಕಿ ಇದು ಅತ್ಯಂತ ಸಂಕೀರ್ಣ ಮತ್ತು ಬೃಹತ್​ ನೌಕೆಯಾಗಿದೆ.

ಭಾರತಕ್ಕಿಂದು ಹೆಮ್ಮೆಯ ದಿನ: ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ಯುದ್ಧನೌಕೆ ವಿಕ್ರಾಂತ್ ಪರೀಕ್ಷಾರ್ಥ ಸಂಚಾರ ಆರಂಭ
ಕೊಚಿನ್ ಶಿಪ್​ಯಾರ್ಡ್ ನಿರ್ಮಿಸಿರುವ ವಿಕ್ರಾಂತ್ ಯುದ್ಧನೌಕೆ ಬುಧವಾರ ಪರೀಕ್ಷಾರ್ಥ ಸಂಚಾರ ಆರಂಭಿಸಿತು.
Follow us on

ದೆಹಲಿ: ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ಯುದ್ಧನೌಕೆ (Indigenous Aircraft Carrier – IAC) ವಿಕ್ರಾಂತ್​ ಪರೀಕ್ಷಾರ್ಥ ಸಂಚಾರ ಬುಧವಾರ ಆರಂಭವಾಯಿತು. ಕೊಚಿನ್ ಶಿಪ್​ಯಾರ್ಡ್ ನಿರ್ಮಿಸರುವ ಈ ಯುದ್ಧನೌಕೆಯು ದೇಶದಲ್ಲಿ ಈವರೆಗೆ ನಿರ್ಮಿಸಿರುವ ಯುದ್ಧನೌಕೆಗಳ ಪೈಕಿ ಇದು ಅತ್ಯಂತ ಸಂಕೀರ್ಣ ಮತ್ತು ಬೃಹತ್​ ಆದುದು.

ಇದು ದೇಶದ ಹೆಮ್ಮೆಯ, ಐತಿಹಾಸಿಕ ಕ್ಷಣ ಎಂದು ಭಾರತೀಯ ನೌಕಾಪಡೆಯು ಹೇಳಿದೆ. ಈ ಸಾಧನೆಯೊಂದಿಗೆ ವಿಮಾನ ವಾಹಕ ಯುದ್ಧನೌಕೆಯ ವಿನ್ಯಾಸ ಮತ್ತು ವಿವಿಧ ಸಂಕೀರ್ಣ ತಂತ್ರಜ್ಞಾನಗಳನ್ನು ಸಂಯೋಜಿಸಿ ಯುದ್ಧನೌಕೆಯನ್ನು ಕಾರ್ಯಾಚರಣೆ ಸ್ಥಿತಿಯ ಮಟ್ಟಕ್ಕೆ ನಿರ್ಮಿಸುವ ಸಾಮರ್ಥ್ಯ ಹೊಂದಿರುವ ವಿಶ್ವದ ಕೆಲವೇ ದೇಶಗಳ ಸಾಲಿಗೆ ಭಾರತವೂ ಸೇರಿದೆ.

ಐಎನ್​ಎಸ್​ ವಿಕ್ರಾಂತ್​ ಹೆಸರಿನ ಯುದ್ಧನೌಕೆ ಈ ಮೊದಲೂ ಭಾರತೀಯ ನೌಕಾಪಡೆಯ ಸೇವೆಯಲ್ಲಿತ್ತು. 50 ವರ್ಷಗಳ ಹಿಂದೆ, ಅಂದರೆ 1971ರ ಯುದ್ಧದಲ್ಲಿ ಐಎನ್​ಎಸ್ ವಿಕ್ರಾಂತ್ ಮಹತ್ವದ ಪಾತ್ರ ನಿರ್ವಹಿಸಿದ್ದ ದಿನದಂದೇ 40,000 ಟನ್ ತೂಕದ ಹೊಸ ಯುದ್ಧನೌಕೆಯು ನೀರಿನಲ್ಲಿ ತೇಲಲು ಆರಂಭಿಸಿರುವುದು ಮಹತ್ವದ ಸಂಗತಿ ಎನಿಸಿದೆ.

ಮುಂದಿನ ವರ್ಷ ದ್ವಿತೀಯಾರ್ಧದಲ್ಲಿ ಈ ನೌಕೆಯನ್ನು ಸೇವೆಗೆ ನಿಯೋಜಿಸಲು ಭಾರತೀಯ ನೌಕಾಪಡೆ ಉದ್ದೇಶಿಸಿದೆ. ಇದು ನಮ್ಮ ದೇಶಕ್ಕೆ ಮಹತ್ವದ ಮತ್ತು ಐತಿಹಾಸಿಕ ಕ್ಷಣ ಎಂದು ನೌಕಾಪಡೆಯ ವಕ್ತಾರ ಕಮೋಡರ್ ವಿವೇಕ್ ಮಧ್ವಾನ್ ಹೇಳಿದ್ದಾರೆ.

ಇದು ಭಾರತದಲ್ಲಿ ನಿರ್ಮಾಣವಾದ ಅತಿದೊಡ್ಡ ಮತ್ತು ಅತಿಸಂಕೀರ್ಣ ಯುದ್ಧನೌಕೆ. ಇದು ಆತ್ಮನಿರ್ಭರ್ ಭಾರತ್ ಮತ್ತು ಮೇಕ್​ ಇನ್​ ಇಂಡಿಯಾ ಉಪಕ್ರಮದ ಮಹತ್ವದ ಮುನ್ನಡೆ ಎಂದು ಅವರು ಹೇಳಿದರು.

ನೌಕಾಪಡೆಯ ಈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.

(Vikrant Indias first indigenous aircraft carrier begins sea trial)

ಇದನ್ನೂ ಓದಿ: Explainer: ಭೂಸೇನೆ, ವಾಯುಪಡೆ, ನೌಕಾಪಡೆಗಳ ಏಕೀಕೃತ ಕಮಾಂಡ್ ರಚನೆ ಪ್ರಸ್ತಾವಕ್ಕೆ ಹೊಸವೇಗ, ದೇಶದ ಭದ್ರತೆಗೆ ಇದೇಕೆ ಅತ್ಯಗತ್ಯ?

ಇದನ್ನೂ ಓದಿ: ಭಾರತ ನೌಕಾಪಡೆಗೆ ಎರಡು ಎಂಎಚ್​-60 ಮಲ್ಟಿ ರೋಲ್​ ಹೆಲಿಕಾಪ್ಟರ್​​ಗಳನ್ನು ಹಸ್ತಾಂತರ ಮಾಡಿದ ಯುಎಸ್​ ನೌಕಾಪಡೆ..