ಅಹಮದಾಬಾದ್: ಗುಜರಾತ್‌ನ (Gujarat) ಆನಂದ್ ಜಿಲ್ಲೆಯಲ್ಲಿ ನವರಾತ್ರಿ ಪ್ರಯುಕ್ತ ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ 21 ವರ್ಷದ ವೀರೇಂದ್ರ ಎಂಬ ವ್ಯಕ್ತಿಯೊಬ್ಬರು ನೃತ್ಯ ಮಾಡುವಾಗಲೇ ಹೃದಯಾಘಾತದಿಂದ (Heart Attack) ಕುಸಿದು ಬಿದ್ದಿದ್ದಾರೆ. ಗರ್ಬಾ ನೃತ್ಯ (Garba Dance) ಮಾಡುವಾಗ ಆನಂದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತಾರಾಪುರದ ಶಿವಶಕ್ತಿ ಸೊಸೈಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೀರೇಂದ್ರ ಸಿಂಗ್ ರಮೇಶ್ ಭಾಯಿ ರಜಪೂತ್ ಅವರು ಗರ್ಬಾ ನೃತ್ಯ ಮಾಡುವಾಗಲೇ ಹೃದಯಾಘಾತದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಈ ಇಡೀ ಘಟನೆಯನ್ನು ಆತನ ಸ್ನೇಹಿತ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನವರಾತ್ರಿ ಪ್ರಯುಕ್ತ ಈ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇದನ್ನೂ ಓದಿ: ಕುಣಿಯುತ್ತಲೇ ಸಿಂಕ್ಹೋಲ್ನಲ್ಲಿ ಬೀಳುವ ಈ 7 ಯುವತಿಯರ ವಿಡಿಯೋ ವೈರಲ್
ಹೃದಯಾಘಾತದಿಂದ ಕುಸಿದುಬಿದ್ದ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ವೀರೇಂದ್ರ ಸಿಂಗ್ ಮೃತಪಟ್ಟಿದ್ದಾರೆ. ವೈದ್ಯರ ಪ್ರಕಾರ, ಅವರಿಗೆ ಹಠಾತ್ತಾಗಿ ಹೃದಯಾಘಾತ ಉಂಟಾಗಿದ್ದು, ಇದೇ ಕಾರಣದಿಂದ ಅವರು ನಿಧನರಾಗಿದ್ದಾರೆ. ವೀರೇಂದ್ರ ಅವರ ತಂದೆ ಗುಜರಾತ್‌ನ ಮೊರಾಜ್ ಗ್ರಾಮದ ಶಾಲೆಯೊಂದರಲ್ಲಿ ಪ್ರಾಂಶುಪಾಲರಾಗಿದ್ದಾರೆ.