Viral Video: 20 ನಿಮಿಷ ಮೊದಲೇ ರೈಲು ನಿಲ್ದಾಣ ತಲುಪಿದ್ದಕ್ಕೆ ಪ್ಲಾಟ್​ಫಾರ್ಮ್​ನಲ್ಲೇ ಡ್ಯಾನ್ಸ್​ ಮಾಡಿದ ಪ್ರಯಾಣಿಕರು; ವಿಡಿಯೋ ವೈರಲ್

| Updated By: ಸುಷ್ಮಾ ಚಕ್ರೆ

Updated on: May 27, 2022 | 10:16 AM

ಬಾಂದ್ರಾ-ಹರಿದ್ವಾರ ರೈಲು ತನ್ನ ನಿಗದಿತ ಸಮಯಕ್ಕಿಂತ 20 ನಿಮಿಷಗಳ ಮೊದಲು ನಿಲ್ದಾಣವನ್ನು ತಲುಪಿದ ಹಿನ್ನೆಲೆಯಲ್ಲಿ ಬಹಳ ಖುಷಿಯಾದ ಪ್ರಯಾಣಿಕರು ರೈಲ್ವೆ ಸ್ಟೇಷನ್​ನಲ್ಲೇ ಡ್ಯಾನ್ಸ್​ ಮಾಡಿ, ಸಂಭ್ರಮಾಚರಣೆ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

Viral Video: 20 ನಿಮಿಷ ಮೊದಲೇ ರೈಲು ನಿಲ್ದಾಣ ತಲುಪಿದ್ದಕ್ಕೆ ಪ್ಲಾಟ್​ಫಾರ್ಮ್​ನಲ್ಲೇ ಡ್ಯಾನ್ಸ್​ ಮಾಡಿದ ಪ್ರಯಾಣಿಕರು; ವಿಡಿಯೋ ವೈರಲ್
ರೈಲಿನ ಮುಂದೆ ಡ್ಯಾನ್ಸ್​ ಮಾಡಿದ ಪ್ರಯಾಣಿಕರು
Follow us on

ನಾವು ಪ್ರಯಾಣಿಸುವಾಗ ಪ್ರತಿ ಬಾರಿಯೂ ನಾವು ತಲುಪಬೇಕಾದ ಸ್ಥಳವನ್ನು ಸರಿಯಾದ ಸಮಯಕ್ಕೆ ತಲುಪುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಬಸ್, ಕ್ಯಾಬ್, ರೈಲಿನಲ್ಲಿ ಓಡಾಡುವಾಗ ಸಮಯದಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಆದರೆ, ರೈಲು ತನ್ನ ನಿಗದಿತ ಸಮಯಕ್ಕಿಂತ 20 ನಿಮಿಷಗಳ ಮೊದಲು ನಿಲ್ದಾಣವನ್ನು ತಲುಪಿದ ಹಿನ್ನೆಲೆಯಲ್ಲಿ ಬಹಳ ಖುಷಿಯಾದ ಪ್ರಯಾಣಿಕರು ರೈಲ್ವೆ ಸ್ಟೇಷನ್​ನಲ್ಲೇ (Railway Station) ಡ್ಯಾನ್ಸ್​ ಮಾಡಿ, ಸಂಭ್ರಮಾಚರಣೆ ಮಾಡಿರುವ ವಿಡಿಯೋ ಇದೀಗ ವೈರಲ್ (Video Viral) ಆಗಿದೆ. ಈ ವಿಡಿಯೋವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಕೂಡ ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಬಾಂದ್ರಾ-ಹರಿದ್ವಾರ ರೈಲು ಬುಧವಾರ ರಾತ್ರಿ 10.15ಕ್ಕೆ ಮಧ್ಯಪ್ರದೇಶದ ರತ್ಲಾಮ್ ನಿಲ್ದಾಣಕ್ಕೆ ಬಂದಾಗ ಖುಷಿಯಾದ ಪ್ರಯಾಣಿಕರು ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಡ್ಯಾನ್ಸ್​ ಮಾಡಿದರು. ಈ ವಿಡಿಯೋವನ್ನು ಸಚಿವ ಅಶ್ವಿನಿ ವೈಷ್ಣವ್ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, ಪ್ರಯಾಣಿಕರಿಗೆ 10 ನಿಮಿಷಗಳ ಸಾಮಾನ್ಯ ನಿಲುಗಡೆ ಸಮಯಕ್ಕಿಂತ ಸಾಕಷ್ಟು ಹೆಚ್ಚು ಸಮಯ ಸಿಕ್ಕಿದ್ದರಿಂದ ಅವರೆಲ್ಲರೂ ರೈಲಿನಿಂದ ಪ್ಲಾಟ್​ಫಾರ್ಮ್​ಗೆ ಇಳಿದು ಗರ್ಬಾ ನೃತ್ಯ ಪ್ರದರ್ಶಿಸುತ್ತಿರುವುದನ್ನು ವಿಡಿಯೋ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: Viral Video: 6ನೇ ಮಹಡಿಯ ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ಕಾಪಾಡಲು ಬರಿಗೈಯಲ್ಲಿ ಕಟ್ಟಡ ಹತ್ತಿದ ಯುವಕ; ವಿಡಿಯೋ ವೈರಲ್

ಈ ವಿಡಿಯೋವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಂಚಿಕೊಂಡಿದ್ದು, ವಿವಿಧ ವಯೋಮಾನದ ಪ್ರಯಾಣಿಕರು ತಮ್ಮ ಕೈಗಳಲ್ಲಿ ಚಪ್ಪಾಳೆ ತಟ್ಟಿ, ಸರ್ಕಲ್ ಹಾಕಿಕೊಂಡು ಡ್ಯಾನ್ಸ್​ ಮಾಡಿದ್ದಾರೆ. ಸುತ್ತಲೂ ನಿಂತವರು ಅವರಿಗೆ ಪ್ರೋತ್ಸಾಹ ನೀಡುತ್ತಾ ಸಂಭ್ರಮಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:59 am, Fri, 27 May 22