Viral Video: ಹೆಲ್ಮೆಟ್ ಹಾಕದ್ದಕ್ಕೆ ಬೈಕ್ನಿಂದ ಎಳೆದ ಪೊಲೀಸ್ಗೆ ಥಳಿಸಿದ ಯುವಕರು; ವಿಡಿಯೋ ವೈರಲ್
ಹೆಲ್ಮೆಟ್ ಇಲ್ಲದೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರನ್ನು ಪ್ಯಾರಾ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಶ್ರೀಕಾಂತ್ ತಡೆದಿದ್ದಾರೆ. ಆಗ ಆ ಯುವಕರು ಹೆಡ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದಾರೆ.
ನವದೆಹಲಿ: ಹೆಲ್ಮೆಟ್ (Helmet) ಧರಿಸದೆ ಪ್ರಯಾಣಿಸಿದ್ದಕ್ಕಾಗಿ ಯುವಕರನ್ನು ಬೈಕ್ನಿಂದ ಕೆಳಗೆ ಎಳೆದ ಉತ್ತರ ಪ್ರದೇಶದ (Uttar Pradesh) ಪೊಲೀಸ್ ಕಾನ್ಸ್ಟೆಬಲ್ನನ್ನು ಆ ಬೈಕ್ನಲ್ಲಿದ್ದ ನಾಲ್ವರು ಥಳಿಸಿದ್ದಾರೆ. ನಡುರಸ್ತೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ಗೆ ಯುವಕರು ಥಳಿಸುತ್ತಿರುವ ವಿಡಿಯೋ ಭಾರೀ ವೈರಲ್ (Video Viral) ಆಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ನಾಲ್ವರು ಹೆಡ್ ಕಾನ್‌ಸ್ಟೆಬಲ್‌ಗೆ ಹೊಡೆದು ನಿಂದಿಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಬೆಂಗಳೂರು: ನಟಿಯ ಅರೆನಗ್ನ ವಿಡಿಯೋ ಮೂಲಕ ಬ್ಲಾಕ್ ಮೇಲ್ ಮಾಡಿದ್ದವ ಮೇಕಪ್ ಮ್ಯಾನ್
ಈ ಬಗ್ಗೆ ಪೊಲೀಸ್ ಉಪ ಕಮಿಷನರ್ ರಾಹುಲ್ ರಾಜ್ ಮಾತನಾಡಿ, ಹೆಲ್ಮೆಟ್ ಇಲ್ಲದೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರನ್ನು ಪ್ಯಾರಾ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಶ್ರೀಕಾಂತ್ ತಡೆದಿದ್ದಾರೆ. ಆಗ ಆ ಯುವಕರು ಹೆಡ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ.
कहीं #UPPolice वाले को पीटा जा रहा तो कही #Police वाले पीट रहे किसी को , जिसका जैसा दांव पड़ जा रहा वैसे हो रहा #Lucknow #Viral pic.twitter.com/Uc1Z1Ned8S
— Aviral singh (@aviralsingh7777) October 26, 2022
ಪ್ಯಾರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಾವು ಆರೋಪಿಗಳನ್ನು ಪತ್ತೆಹಚ್ಚಿದ್ದೇವೆ. ಅವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:22 pm, Fri, 28 October 22