ಶೇಕಡಾ 2ರಿಂದ 3ರಷ್ಟು ಮಕ್ಕಳಿಗೆ ಕೊರೊನಾ ಬಂದರೂ ಬರಬಹುದು; ಅದನ್ನು ಎದುರಿಸಲು ಸಿದ್ಧರಿದ್ದೇವೆ: ವಿ ಕೆ ಪೌಲ್
ನಿತ್ಯ ಕೊರೊನಾ ಸಕ್ರಿಯ ಕೇಸ್ ಕುಸಿತವಾಗುತ್ತಿದೆ. ಈಗ ದೇಶದಲ್ಲಿ 18.95 ಲಕ್ಷ ಕೊರೊನಾ ಸಕ್ರಿಯ ಕೇಸ್ ಇದೆ. ದೇಶದ 30 ರಾಜ್ಯಗಳಲ್ಲಿ ಕಳೆದೊಂದು ವಾರದಿಂದ ಸಕ್ರಿಯ ಕೇಸ್ ಕುಸಿತವಾಗುತ್ತಿದೆ. 32 ರಾಜ್ಯಗಳಲ್ಲಿ ಹೊಸ ಕೇಸ್ ಗಿಂತ ಗುಣಮುಖ ಆದವರ ಸಂಖ್ಯೆ ಹೆಚ್ಚು ಇದೆ.
ದೆಹಲಿ: ಕೊರೊನಾ ಸ್ವರೂಪ ಬದಲಾಯಿಸಿದ್ರೆ ಮಕ್ಕಳ ಮೇಲೆ ಉಂಟಾಗಬಹುದು. ಹಾಗಾದಾಗ ಕೊವಿಡ್-19 ನಿಂದ ಮಕ್ಕಳ ಮೇಲಿನ ಪರಿಣಾಮ ಹೆಚ್ಚಾಗುತ್ತದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಹೇಳಿಕೆ ನೀಡಿದ್ದಾರೆ. ದೆಹಲಿಯಲ್ಲಿ ಇಂದು (ಜೂನ್ 1) ನಡೆದ ಕೇಂದ್ರದ ಆರೋಗ್ಯ ಇಲಾಖೆಯ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ. ಐಸಿಎಂಆರ್ ಡಿಜಿ ಬಲರಾಮ ಭಾರ್ಗವ, ಆರೋಗ್ಯ ಇಲಾಖೆಯ ಲವ್ ಅಗರವಾಲ್, ನೀತಿ ಆಯೋಗದ ವಿ.ಕೆ.ಪೌಲ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಕೊರೊನಾ ಮೂರನೇ ಅಲೆಯಲ್ಲಿ ಶೇ. 2-3ರಷ್ಟು ಮಕ್ಕಳು ಆಸ್ಪತ್ರೆಗೆ ಬರಬೇಕಾದ ಸ್ಥಿತಿ ಬಂದರೆ, ಅಂತಹ ಪರಿಸ್ಥಿತಿ ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ವಿ.ಕೆ.ಪೌಲ್ ಹೇಳಿದ್ದಾರೆ. ದೇಶದ ಎಲ್ಲರಿಗೂ ಡಿಸೆಂಬರ್ ಒಳಗೆ ಲಸಿಕೆ ನೀಡುತ್ತೇವೆ. ಮಕ್ಕಳನ್ನು ನಾವು ಕೊರೊನಾದಿಂದ ರಕ್ಷಣೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಮಕ್ಕಳಿಗೆ ಕೊರೊನಾ ಬಂದರೂ ಆಸ್ಪತ್ರೆಗೆ ದಾಖಲಿಸುವ ಅಗತ್ಯ ಇರುವುದಿಲ್ಲ. ಕನಿಷ್ಠ ಲಕ್ಷಣಗಳು ಮಾತ್ರ ಇರುತ್ತದೆ. ಗಂಭೀರ ಸ್ವರೂಪದ ಲಕ್ಷಣ ಇರುವುದಿಲ್ಲ. ಶೇ. 2-3 ರಷ್ಟು ಮಕ್ಕಳಿಗೆ ಕೊರೊನಾ ಬಂದರೂ ಬರಬಹುದು. ಮಕ್ಕಳಿಗೆ ಕೊರೊನಾ ಬಂದರೆ ನ್ಯುಮೋನಿಯಾ ಬರಲೂಬಹುದು. ಹಾಗಾದರೆ ಆಸ್ಪತ್ರೆಗೆ ದಾಖಲಾಗಬೇಕು.
ಮಕ್ಕಳು ಗುಣಮುಖ ಆದ 6 ವಾರದ ಬಳಿಕ ಮತ್ತೆ ಜ್ವರ, ಕಣ್ಣು ನೋವು, ಭೇದಿ ಆಗಬಹುದು. ಇದನ್ನು ಮಲ್ಟಿ ಸಿಸ್ಟಮ್ ಇನ್ ಪ್ಲೋಮೇಟರಿ (MSI) ಎನ್ನುತ್ತೇವೆ. ಫೆಡಿಯಾಟ್ರಿಕ್ ಕೊರೊನಾ ಸಮಸ್ಯೆ ಎದುರಿಸಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ವಿ.ಕೆ. ಪೌಲ್ ಹೇಳಿದ್ದಾರೆ.
ಭಾರತದ 239 ಜಿಲ್ಲೆಯಲ್ಲಿ ಟೆಸ್ಟಿಂಗ್ ಪಾಸಿಟಿವಿಟಿ ದರ ಹೆಚ್ಚಳವಾಗಿದೆ. ಟೆಸ್ಟಿಂಗ್ ಪಾಸಿಟಿವಿಟಿ ದರ ಶೇಕಡಾ 10ಕ್ಕಿಂತ ಹೆಚ್ಚಾಗಿದೆ. ಆದರೆ, ದೇಶದ 344 ಜಿಲ್ಲೆಯಲ್ಲಿ ಈಗ ಶೇ.5 ಕ್ಕಿಂತ ಕಡಿಮೆ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಇದೆ. ದೇಶದ 295 ಜಿಲ್ಲೆಯಲ್ಲಿ ಈಗಲೂ ನಿತ್ಯ ನೂರಕ್ಕಿಂತ ಹೆಚ್ಚಿನ ಕೊರೊನಾ ಕೇಸ್ ಪತ್ತೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಳೆದ ಒಂದು ವಾರದಲ್ಲಿ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ.8.31 ಕ್ಕೆ ಕುಸಿತ ನಿತ್ಯ ಕೊರೊನಾ ಸಕ್ರಿಯ ಕೇಸ್ ಕುಸಿತವಾಗುತ್ತಿದೆ. ಈಗ ದೇಶದಲ್ಲಿ 18.95 ಲಕ್ಷ ಕೊರೊನಾ ಸಕ್ರಿಯ ಕೇಸ್ ಇದೆ. ದೇಶದ 30 ರಾಜ್ಯಗಳಲ್ಲಿ ಕಳೆದೊಂದು ವಾರದಿಂದ ಸಕ್ರಿಯ ಕೇಸ್ ಕುಸಿತವಾಗುತ್ತಿದೆ. 32 ರಾಜ್ಯಗಳಲ್ಲಿ ಹೊಸ ಕೇಸ್ ಗಿಂತ ಗುಣಮುಖ ಆದವರ ಸಂಖ್ಯೆ ಹೆಚ್ಚು ಇದೆ. ಫೆಬ್ರವರಿಯಿಂದ 2.7 ರಷ್ಟು ಹೆಚ್ಚಿನ ಕೊರೊನಾ ಸ್ಯಾಂಪಲ್ ಟೆಸ್ಟಿಂಗ್ ನಡೆಯುತ್ತಿದೆ. ಕಳೆದೊಂದು ವಾರದಲ್ಲಿ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ.8.31 ಕ್ಕೆ ಕುಸಿತವಾಗಿದೆ ಎಂದು ಕೇಂದ್ರದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಹೇಳಿದ್ದಾರೆ.
ಡಿಸೆಂಬರ್ ತಿಂಗಳೊಳಗೆ ಎಲ್ಲರಿಗೂ ಲಸಿಕೆ ಏಪ್ರಿಲ್ ಮೊದಲ ವಾರದಲ್ಲಿ 200 ಕ್ಕಿಂತ ಕಡಿಮೆ ಜಿಲ್ಲೆಯಲ್ಲಿ ಶೇ.10 ಕ್ಕಿಂತ ಹೆಚ್ಚಿನ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರವಿತ್ತು. ಏಪ್ರಿಲ್ ಕೊನೆಯ ವಾರದಲ್ಲಿ 600 ಕ್ಕಿಂತ ಹೆಚ್ಚಿನ ಜಿಲ್ಲೆಯಲ್ಲಿ ಶೇ.10 ಕ್ಕಿಂತ ಹೆಚ್ಚಿನ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಇತ್ತು. ಈಗ 145 ಜಿಲ್ಲೆಯಲ್ಲಿ ಶೇ.5-10 ರಷ್ಟು ಪಾಸಿಟಿವಿಟಿ ದರ ಇದೆ. ದೇಶದ 350 ಜಿಲ್ಲೆಯಲ್ಲಿ ಶೇ.5 ಕ್ಕಿಂತ ಕಡಿಮೆ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಇದೆ. ದೇಶದ ಅರ್ಧಭಾಗಕ್ಕಿಂತ ಹೆಚ್ಚಿನ ಭಾಗದಲ್ಲಿ ಶೇ.5 ಕ್ಕಿಂತ ಕಡಿಮೆ ಟೆಸ್ಟಿಂಗ್ ಪಾಸಿಟಿವಿಟಿ ದರ ದಾಖಲಾಗಿದೆ ಎಂದು ಐಸಿಎಂಆರ್ ಡಿಜಿ ಬಲರಾಮ ಭಾರ್ಗವ ತಿಳಿಸಿದ್ದಾರೆ.
ಡಿಸೆಂಬರ್ ತಿಂಗಳೊಳಗೆ ಎಲ್ಲರಿಗೂ ಲಸಿಕೆ ನೀಡಿಕೆಯಾಗುತ್ತದೆ. ವಿಶ್ವದಲ್ಲಿ ಐದು ದೇಶದಲ್ಲಿ ಮಾತ್ರ ಲಸಿಕೆ ಉತ್ಪಾದನೆ ಆಗುತ್ತಿದೆ. ಐದು ದೇಶಗಳ ಪೈಕಿ ಭಾರತ ಕೂಡ ಒಂದು. ನಮ್ಮ ದೇಶದಲ್ಲಿ ಆಮೆರಿಕಾಕ್ಕಿಂತ ನಾಲ್ಕು ಪಟ್ಟು ಹೆಚ್ಚು ಜನಸಂಖ್ಯೆ ಇದೆ. ಲಸಿಕೆ ಬಗ್ಗೆ ಸ್ವಲ್ಪ ತಾಳ್ಮೆ ಇರಲಿ. ಜುಲೈ- ಆಗಸ್ಟ್ ವೇಳೆಗೆ ಪ್ರತಿ ನಿತ್ಯ ಒಂದು ಕೋಟಿ ಡೋಸ್ ಲಸಿಕೆ ನೀಡುತ್ತೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೊರೊನಾ ವೈರಸ್ನ ಮೂಲ ಚೀನಾದ ವುಹಾನ್ ಲ್ಯಾಬ್: ವೈರಸ್ ಮೂಲದ ಬಗ್ಗೆ ತನಿಖೆಗೆ ಹೆಚ್ಚಿದ ಒತ್ತಡ
ಕೊರೊನಾ ಮೂರನೇ ಅಲೆ ಎದುರಿಸಲು ನಡೆಸಿರುವ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಡಾ ಕೆ ಸುಧಾಕರ್
Published On - 7:33 pm, Tue, 1 June 21