9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ‌ ಸಂಜಯನಿಗೆ ಗಲ್ಲು ‌ಶಿಕ್ಷೆ

ವಾರಂಗಲ್: ತೆಲಂಗಾಣದ ವಾರಂಗಲ್ ಜಿಲ್ಲಾ‌ ಸೆಷನ್ಸ್ ಕೋರ್ಟ್​​ ಇಂದು ಮಹತ್ವದ ತೀರ್ಪೊಂದನ್ನು ನೀಡಿದೆ. ವಾರಂಗಲ್ ಜಿಲ್ಲಾ ನ್ಯಾಯಾಲಯದ‌‌ ಸೆಷನ್ಸ್ ಜಡ್ಜ್‌ ಜಯಕುಮಾರ್ ಅವರು ವಾರಂಗಲ್ ಬಳಿಯ ಗೊರ್ರಕುಂಟನಲ್ಲಿ 9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ ಬಿಹಾರ ಮೂಲದ‌ ಸಂಜಯ ಕುಮಾರ್​ ಯಾದವ್ ಎಂಬಾತನಿಗೆ ಗಲ್ಲು ‌ಶಿಕ್ಷೆ ವಿಧಿಸಿದ್ದಾರೆ. ವಾರಂಗಲ್ ಬಳಿಯ ಗೊರಕುಂಟದಲ್ಲಿ ನಡೆದಿದ್ದ ಘಟನೆಯಿದು. ಅಪರಾಧಿ ಸಂಜಯ ಕುಮಾರ್ ​ಯಾದವ್, ಊಟದಲ್ಲಿ ನಿದ್ರೆ ಮಾತ್ರೆ ಸೇರಿಸಿ, ಆ 9 ಮಂದಿಗೆ ತಿನ್ನಿಸಿದ್ದ. ನಿದ್ದೆಯಲ್ಲಿದ್ದ ಆ 9 ಮಂದಿಯನ್ನೂ […]

9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ‌ ಸಂಜಯನಿಗೆ ಗಲ್ಲು ‌ಶಿಕ್ಷೆ
ಸಾಧು ಶ್ರೀನಾಥ್​

Updated on: Oct 28, 2020 | 3:40 PM

ವಾರಂಗಲ್: ತೆಲಂಗಾಣದ ವಾರಂಗಲ್ ಜಿಲ್ಲಾ‌ ಸೆಷನ್ಸ್ ಕೋರ್ಟ್​​ ಇಂದು ಮಹತ್ವದ ತೀರ್ಪೊಂದನ್ನು ನೀಡಿದೆ. ವಾರಂಗಲ್ ಜಿಲ್ಲಾ ನ್ಯಾಯಾಲಯದ‌‌ ಸೆಷನ್ಸ್ ಜಡ್ಜ್‌ ಜಯಕುಮಾರ್ ಅವರು ವಾರಂಗಲ್ ಬಳಿಯ ಗೊರ್ರಕುಂಟನಲ್ಲಿ 9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ ಬಿಹಾರ ಮೂಲದ‌ ಸಂಜಯ ಕುಮಾರ್​ ಯಾದವ್ ಎಂಬಾತನಿಗೆ ಗಲ್ಲು ‌ಶಿಕ್ಷೆ ವಿಧಿಸಿದ್ದಾರೆ.
ವಾರಂಗಲ್ ಬಳಿಯ ಗೊರಕುಂಟದಲ್ಲಿ ನಡೆದಿದ್ದ ಘಟನೆಯಿದು. ಅಪರಾಧಿ ಸಂಜಯ ಕುಮಾರ್ ​ಯಾದವ್, ಊಟದಲ್ಲಿ ನಿದ್ರೆ ಮಾತ್ರೆ ಸೇರಿಸಿ, ಆ 9 ಮಂದಿಗೆ ತಿನ್ನಿಸಿದ್ದ. ನಿದ್ದೆಯಲ್ಲಿದ್ದ ಆ 9 ಮಂದಿಯನ್ನೂ ಒಬ್ಬೊಬ್ಬರಾಗಿ ಬಾವಿ ವರೆಗೂ ಎಳೆದೊಯ್ದು, ಬಾವಿಗೆ ಹಾಕಿದ್ದ. ಇದೀಗ, ಸಂಜಯ ಕುಮಾರನಿಗೆ ಗಲ್ಲು ಶಿಕ್ಷೆ ವಿಧಿಸಿದ್ದಕ್ಕೆ ಮೃತರ ಸಂಬಂಧಿಕರು, ಮೃತರ ಪರ ವಕೀಲರು ಸಂತಸ ವ್ಯಕ್ತಪಡಿಸಿದ್ದಾರೆ.

Published On - 3:28 pm, Wed, 28 October 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us