ಕಾವೇರಿ ನದಿಗೆ ಜೀವಕಳೆ; ಮುಕ್ಕೊಂಬು ಅಣೆಕಟ್ಟಿನ ಡ್ರೋನ್ ವಿಡಿಯೋ ವೈರಲ್

Mukkombu Dam Video: ಮೆಟ್ಟೂರಿನಿಂದ ಕಾವೇರಿ ನದಿಗೆ ಬಿಟ್ಟ ನೀರು ಮುಕ್ಕೊಂಬು ಅಣೆಕಟ್ಟನ್ನು ತಲುಪಿದೆ. ಕರ್ನಾಟಕ ಮತ್ತು ಕೇರಳದ ಕಾವೇರಿ ನದಿಯ ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದಾಗಿ ಮೆಟ್ಟೂರು ಅಣೆಕಟ್ಟಿನ ನೀರಿನ ಮಟ್ಟವು ಭಾರೀ ಏರಿಕೆಯಾಗಿದ್ದು, ಅದರ ಪೂರ್ಣ ಸಾಮರ್ಥ್ಯವನ್ನು ತಲುಪಿದೆ. ಇದರಿಂದಾಗಿ ಅಣೆಕಟ್ಟೆಯ ಹೆಚ್ಚುವರಿ ನೀರನ್ನು 16 ಸ್ಲೂಸ್‌ಗಳ ಮೂಲಕ ಸಂಪೂರ್ಣವಾಗಿ ಹೊರಬಿಡಲಾಗುತ್ತದೆ.

ಕಾವೇರಿ ನದಿಗೆ ಜೀವಕಳೆ; ಮುಕ್ಕೊಂಬು ಅಣೆಕಟ್ಟಿನ ಡ್ರೋನ್ ವಿಡಿಯೋ ವೈರಲ್
ಮುಕ್ಕೊಂಬು ಜಲಾಶಯ
Follow us
ಸುಷ್ಮಾ ಚಕ್ರೆ
|

Updated on: Aug 02, 2024 | 10:10 PM

ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕರ್ನಾಟಕ ರಾಜ್ಯದ ಕೃಷ್ಣರಾಜ ಸಾಗರ ಮತ್ತು ಕಬಿನಿ ಅಣೆಕಟ್ಟುಗಳು ತುಂಬಿ ಹರಿಯುತ್ತಿವೆ. ಈ ಪರಿಸ್ಥಿತಿಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮೆಟ್ಟೂರು ಅಣೆಕಟ್ಟೆಯಿಂದ 1 ಲಕ್ಷದ 20 ಸಾವಿರ ಘನ ಅಡಿ ನೀರು ಬಿಡಲಾಗುತ್ತಿದೆ. ಅದೇ ರೀತಿ ತಿರುಚ್ಚಿ ಜಿಲ್ಲೆಯ ಮುಕ್ಕೊಂಬು ಜಲಾಶಯಕ್ಕೆ 1 ಲಕ್ಷ 20 ಸಾವಿರ ಘನ ಅಡಿ ನೀರು ಬರುತ್ತಿದೆ. ಮುಕ್ಕೊಂಬು ಡ್ಯಾಂ ಗೇಟುಗಳನ್ನು ತೆರೆಯಲಾಗಿದ್ದು, ಈ ಅಣೆಕಟ್ಟಿನ ಡ್ರೋನ್ ದೃಶ್ಯಾವಳಿ ವೈರಲ್ ಆಗಿದೆ.

ಜುಲೈ 28ರಂದು ಕಾವೇರಿ ಡೆಲ್ಟಾ ನೀರಾವರಿಗಾಗಿ ಮೆಟ್ಟೂರು ಅಣೆಕಟ್ಟಿನಿಂದ 12,000 ಕ್ಯೂಬಿಕ್ ಅಡಿ ನೀರು ಬಿಡಲಾಗಿತ್ತು. ಕಾವೇರಿ ನದಿಗೆ 43 ಸಾವಿರ ಘನ ಅಡಿ ನೀರು ಹಾಗೂ ಕೊಲ್ಲಿಡಂ ನದಿಗೆ 1 ಲಕ್ಷ 25 ಸಾವಿರ ಘನ ಅಡಿ ನೀರು ಹರಿದು ಬರುತ್ತಿದೆ.

ಇದನ್ನೂ ಓದಿ: Viral Video: ನದಿಯಂತಾದ ಜೈಪುರ ವಿಮಾನ ನಿಲ್ದಾಣ; ಲಗೇಜ್ ಟ್ರಾಲಿ ಮೇಲೆ ನಿಂತ ಪೈಲಟ್ ವಿಡಿಯೋ ವೈರಲ್

ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ಈ ಹಂತದಲ್ಲಿ ಮುಕ್ಕೊಂಬು ಅಣೆಕಟ್ಟಿನ ಮೂಲಕ ಹರಿಯುವ ಕಾವೇರಿ ನೀರು ಎರಡೂ ದಂಡೆಗಳನ್ನು ಸ್ಪರ್ಶಿಸುವ ಡ್ರೋನ್ ದೃಶ್ಯವು ಅದ್ಭುತವಾಗಿದೆ.

ಮೆಟ್ಟೂರಿನಿಂದ ಮುಕ್ಕೊಂಬು ಅಣೆಕಟ್ಟಿನ ನೀರಿನ ಮಟ್ಟ 1,68,000 ಕ್ಯೂಸೆಕ್ ಇದ್ದು, ಅದರಲ್ಲಿ 43,874 ಕ್ಯೂಸೆಕ್ ಕಾವೇರಿಗೆ ಮತ್ತು 1,25,000 ಕ್ಯುಸೆಕ್ ಅನ್ನು ಕೊಲ್ಲಿಡಂಗೆ ಬಿಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ