Kargil Vijay Diwas: ಕಾರ್ಗಿಲ್​ ಯುದ್ಧದಲ್ಲಿ ಗೆಲುವು ತಂದುಕೊಟ್ಟ ಯೋಧರ ತ್ಯಾಗ ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ

PM Narendra Modi: ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಕಾರ್ಗಿಲ್​ ವಿಜಯ ದಿವಸ್​​​ದ ಈ ದಿನದಂದು ನಾವು ಅಂದು ಹೋರಾಡಿದ ಯೋಧರ ತ್ಯಾಗ, ಶೌರ್ಯವನ್ನು ನೆನಪಿಸಿಕೊಳ್ಳಬೇಕು. ಅಂದು ರಾಷ್ಟ್ರರಕ್ಷಣೆಗಾಗಿ ಜೀವವನ್ನೇ ಸಮರ್ಪಿಸಿದವರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದ್ದಾರೆ.

Kargil Vijay Diwas: ಕಾರ್ಗಿಲ್​ ಯುದ್ಧದಲ್ಲಿ ಗೆಲುವು ತಂದುಕೊಟ್ಟ ಯೋಧರ ತ್ಯಾಗ ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
Follow us
TV9 Web
| Updated By: Lakshmi Hegde

Updated on:Jul 26, 2021 | 10:30 AM

ನವದೆಹಲಿ: ಇಂದು ಕಾರ್ಗಿಲ್​ ವಿಜಯ ದಿವಸ್(Kargil Vijay Diwas) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಟ್ವೀಟ್​ ಮಾಡಿ, ಅಂದು ಕಾರ್ಗಿಲ್ ಯುದ್ಧ (Kargil War)ದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದ್ದಾರೆ. ಕಾರ್ಗಿಲ್​ ಯುದ್ಧದಲ್ಲಿ ಗೆಲುವು ತಂದುಕೊಟ್ಟ ಯೋಧರ ಶೌರ್ಯ, ತ್ಯಾಗವನ್ನು ನೆನಪಿಸಿಕೊಂಡ ಅವರು, ಅಂದಿನ ಯೋಧರ ಧೈರ್ಯ ಇಂದೂ ಕೂಡ ದೇಶವನ್ನು ಮುನ್ನಡೆಸುತ್ತಿದೆ ಎಂದು ಹೇಳಿದ್ದಾರೆ.

ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಕಾರ್ಗಿಲ್​ ವಿಜಯ ದಿವಸ್​​​ದ ಈ ದಿನದಂದು ನಾವು ಅಂದು ಹೋರಾಡಿದ ಯೋಧರ ತ್ಯಾಗ, ಶೌರ್ಯವನ್ನು ನೆನಪಿಸಿಕೊಳ್ಳಬೇಕು. ಅಂದು ರಾಷ್ಟ್ರರಕ್ಷಣೆಗಾಗಿ ಜೀವವನ್ನೇ ಸಮರ್ಪಿಸಿದವರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ಭಾನುವಾರ ಮನ್​ ಕೀ ಬಾತ್​ನಲ್ಲಿ ಕೂಡ ಮಾತನಾಡಿದ್ದ ಅವರು, ದೇಶ ಜುಲೈ 26ರಂದು ಕಾರ್ಗಿಲ್​ ವಿಜಯ ದಿವಸ್​​​ನ್ನು ಆಚರಿಸುತ್ತದೆ. ಯುದ್ಧದಲ್ಲಿ ಜಯತಂದುಕೊಟ್ಟ ಸೈನಿಕರಿಗೆ ದೇಶದ ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು ಎಂದಿದ್ದರು. ಹಾಗೇ, ಭಾರತದ ಸೇನಾ ಬಲವನ್ನು ಶ್ಲಾಘಿಸಿದ್ದ ಅವರು, ಈ ಬಾರಿ ಭಾರತ ಕಾರ್ಗಿಲ್​ ವಿಜಯ ದಿವಸ್​ದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಕಾರ್ಗಿಲ್ ವಿಜಯದಿನದಂದು ಕಾರ್ಗಿಲ್​ ಕುರಿತಾದ ರೋಮಾಂಚನಕಾರಿ ಕತೆಗಳನ್ನು, ಯೋಧರ ಶೌರ್ಯದ ಕತೆಗಳನ್ನು ಜನರು ಓದಬೇಕು ಎಂದೂ ಮನ್​ ಕೀ ಬಾತ್​ನಲ್ಲಿ ತಿಳಿಸಿದ್ದರು.

ಈ ಬಾರಿ ಕಾರ್ಗಿಲ್​ ವಿಜಯ್​ ದಿವಸ್​ದ 22ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಇದನ್ನು ಕೇಂದ್ರ ಸರ್ಕಾರ ಅಮೃತ ಮಹೋತ್ಸವ ಅಂದರೆ ಜನರ ಚಳವಳಿಯನ್ನಾಗಿ ಆಚರಿಸುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ರಾಷ್ಟ್ರೀಯ ಅನುಷ್ಠಾನ ಸಮಿತಿ ನಿರ್ವಹಣೆ ಮಾಡಲಿದೆ.

ಇದನ್ನೂ ಓದಿ: Kargil Vijay Diwas: ಕಾರ್ಗಿಲ್​ ಯುದ್ಧದ ಗೆಲುವಿಗೆ 22 ವರ್ಷ; ಭಾರತದ ಧೀರ ಯೋಧರ ಸಾಹಸಗಾಥೆಯ ಕಿರು ಪರಿಚಯ ಇಲ್ಲಿದೆ

ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕ; ರಕ್ಷಣೆಗೆ ಸ್ಥಳೀಯರ ಹರಸಾಹಸ

Published On - 10:29 am, Mon, 26 July 21