‘ಸೂಕ್ತ ಸಮಯದಲ್ಲಿ ಹಿಂದಿನ ಸರ್ಕಾರದ ಭ್ರಷ್ಟಾಚಾರದ ಫೈಲ್​ಗಳನ್ನು ಬಹಿರಂಗಪಡಿಸುತ್ತೇನೆ’; ಡಿಎಂಕೆಗೆ ಸಿಎಂ ವಿಜಯ್ ಎಚ್ಚರಿಕೆ

ರಸ್ತೆ ನಿರ್ಮಾಣ ಕಾಮಗಾರಿಗಳಲ್ಲಿನ ಅಕ್ರಮಗಳ ಕುರಿತು ವಿಧಾನಸಭೆಯಲ್ಲಿ ಮತ್ತೊಂದು ಬಿಸಿ ವಾಗ್ವಾದ ನಡೆದ ಸಂದರ್ಭದಲ್ಲಿ "ಹಿಂದಿನ ಡಿಎಂಕೆ ಸರ್ಕಾರದ ಭ್ರಷ್ಟಾಚಾರದ ಫೈಲ್‌ಗಳನ್ನು ಸೂಕ್ತ ಸಮಯದಲ್ಲಿ" ಬಹಿರಂಗಪಡಿಸುತ್ತೇನೆ" ಎಂದು ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಎಚ್ಚರಿಸಿದ್ದಾರೆ. ಚೆನ್ನೈನ ಸೆಕ್ರೆಟರಿಯೇಟ್ ಸಂಕೀರ್ಣದಲ್ಲಿರುವ ಮುಖ್ಯಮಂತ್ರಿ ಕಚೇರಿಯನ್ನು ಸ್ಥಳಾಂತರಿಸಲು ರೂ. 5.54 ಕೋಟಿ ಮೊತ್ತದ ಟೆಂಡರ್‌ಗೆ ಸಂಬಂಧಿಸಿದಂತೆ ಡಿಎಂಕೆ ಮತ್ತು ಟಿವಿಕೆ ನಾಯಕರು ಘರ್ಷಣೆ ನಡೆಸಿದ ಒಂದು ದಿನದ ನಂತರ ಈ ಘರ್ಷಣೆ ಸಂಭವಿಸಿದೆ. ನನ್ನ ಬಳಿ ಎರಡು ಫೈಲ್‌ಗಳಿವೆ ಎಂದು ವಿಜಯ್ ಹೇಳಿದ್ದಾರೆ. ಈ ಬಗ್ಗೆ ಡಿಎಂಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ಸೂಕ್ತ ಸಮಯದಲ್ಲಿ ಹಿಂದಿನ ಸರ್ಕಾರದ ಭ್ರಷ್ಟಾಚಾರದ ಫೈಲ್​ಗಳನ್ನು ಬಹಿರಂಗಪಡಿಸುತ್ತೇನೆ’; ಡಿಎಂಕೆಗೆ ಸಿಎಂ ವಿಜಯ್ ಎಚ್ಚರಿಕೆ
Cm Vijay In Session
Image Credit source: TV9

Updated on: Aug 19, 2026 | 11:03 PM

ಚೆನ್ನೈ, ಆಗಸ್ಟ್ 19: ಮುಖ್ಯಮಂತ್ರಿ ಕಚೇರಿ ಸ್ಥಳಾಂತರಕ್ಕೆ ಸಂಬಂಧಿಸಿದ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ ಮತ್ತು ಟಿವಿಕೆ ನಾಯಕರ ನಡುವೆ ನಡೆದ ಕಾವೇರಿದ ಚರ್ಚೆಯ ಮರುದಿನವೇ, ರಸ್ತೆ ನಿರ್ಮಾಣ ಕಾಮಗಾರಿಯಲ್ಲಿನ ಅಕ್ರಮಗಳ ಕುರಿತು ಮತ್ತೊಂದು ಗದ್ದಲ ಸೃಷ್ಟಿಯಾಗಿದೆ. ಈ ವೇಳೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (CM Joseph Vijay) “ಸೂಕ್ತ ಸಮಯದಲ್ಲಿ ಹಿಂದಿನ ಡಿಎಂಕೆ ಸರ್ಕಾರದ ಭ್ರಷ್ಟಾಚಾರದ ಕಡತಗಳನ್ನು ಬಹಿರಂಗಪಡಿಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಡಿಎಂಕೆ (DMK) ನಾಯಕ ಇ.ವಿ. ವೇಲು, ಮುಖ್ಯಮಂತ್ರಿ ಕಚೇರಿ ಸ್ಥಳಾಂತರಕ್ಕಾಗಿ ನೀಡಲಾದ 5.54 ಕೋಟಿ ರೂ. ವೆಚ್ಚದ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ತಮಿಳುನಾಡಿನ ಲೋಕೋಪಯೋಗಿ ಸಚಿವ ಆಧವ್ ಅರ್ಜುನ್ ಅವರೊಂದಿಗೆ ವಾಗ್ವಾದ ನಡೆಸಿದ್ದರು. ಇಂದು ರಸ್ತೆ ನಿರ್ಮಾಣ ಕಾಮಗಾರಿಗಳಲ್ಲಿನ ವ್ಯತ್ಯಾಸಗಳ ಕುರಿತು ವಿಧಾನಸಭೆಯಲ್ಲಿ ಮತ್ತೊಮ್ಮೆ ರಾದ್ಧಾಂತ ಉಂಟಾಗಿದ್ದು, ಟಿವಿಕೆ ಮತ್ತು ಡಿಎಂಕೆ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ತಮಿಳುನಾಡು ಶಾಸಕರಿಗೆ ಸರ್ಕಾರಿ ಕಾರು, 1 ಲಕ್ಷ ರೂ. ಭತ್ಯೆ: ಆರೋಗ್ಯ ವಿಮೆ 25 ಲಕ್ಷ ರೂ.ಗೆ ಹೆಚ್ಚಳ: ಸಿಎಂ ವಿಜಯ್ ಘೋಷಣೆ

ಈ ಕಾವೇರಿದ ಚರ್ಚೆಯ ನಡುವೆ ಮಾತನಾಡಿದ ಮುಖ್ಯಮಂತ್ರಿ ವಿಜಯ್, “ಹಿಂದಿನ ಡಿಎಂಕೆ ಸರ್ಕಾರದ ಭ್ರಷ್ಟಾಚಾರದ ಕಡತಗಳನ್ನು ಸೂಕ್ತ ಸಮಯದಲ್ಲಿ ನಾನು ಬಹಿರಂಗಪಡಿಸುತ್ತೇನೆ. ನನ್ನ ಮೇಜಿನ ಮೇಲೆ ಎರಡು ಕಡತಗಳಿವೆ. ಅದನ್ನು ಈಗಲೇ ಹೊರಹಾಕುವಂತೆ ನನ್ನನ್ನು ಕೆಣಕಬೇಡಿ” ಎಂದು ಹೇಳಿದರು.


ಸಿಎಂ ಕಚೇರಿ ಸ್ಥಳಾಂತರದ ಸುತ್ತ ವಿವಾದ:

ತಮಿಳುನಾಡು ಸರ್ಕಾರವು ಸಿಎಂ ಕಚೇರಿಯನ್ನು ಸ್ಥಳಾಂತರಿಸಲು ತೆಗೆದುಕೊಂಡ ನಿರ್ಧಾರವನ್ನು ಡಿಎಂಕೆ ಶಾಸಕ ವೇಲು ಅವರು ಮಂಗಳವಾರ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ಟೆಂಡರ್ ಪ್ರಕ್ರಿಯೆಯನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ, ಆದರೆ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿಲ್ಲ ಎಂದು ಅವರು ಆರೋಪಿಸಿದ್ದರು.

ಇದನ್ನೂ ಓದಿ: ಸಿಎಂ ವಿಜಯ್ ಸರ್ಕಾರದಿಂದ ಬಂಪರ್ ಗಿಫ್ಟ್: ಒಂದು ವರ್ಷ ಮಾತೃತ್ವ ರಜೆ

ಚೆನ್ನೈನ ಫೋರ್ಟ್ ಸೆಂಟ್ ಜಾರ್ಜ್ ಪ್ರಸ್ತುತ ಮುಖ್ಯಮಂತ್ರಿ ಕಚೇರಿ ಮತ್ತು ರಾಜ್ಯ ವಿಧಾನಸಭೆಯನ್ನು ಹೊಂದಿದೆ. ಅದೇ ಸಚಿವಾಲಯದ ಸಂಕೀರ್ಣದಲ್ಲಿ ದಿವಂಗತ ಮಾಜಿ ಸಿಎಂ ಕಲೈಂಜರ್ ನಿರ್ಮಿಸಿದ 10 ಅಂತಸ್ತಿನ ಕಟ್ಟಡವಾದ ನಮಕ್ಕಲ್ ಕವಿಜ್ಞರ್ ಮಾಳಿಗೆಗೆ ಸಿಎಂ ಕಚೇರಿಯನ್ನು ಸ್ಥಳಾಂತರಿಸುವುದು ಸರ್ಕಾರದ ಯೋಜನೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:02 pm, Wed, 19 August 26

Loading...
Unable to load recommendations.
Follow Us