ಮದುವೆ ಮುಗಿದ ಮೇಲೆ ಮಗಳನ್ನು ಗಂಡನ ಮನೆಗೆ ಕಳಿಸಲ್ಲ ಎಂದು ಮದುವೆ ಮುರಿದ ತಂದೆ, ಅಂಥದ್ದೇನಾಯ್ತು?

ಅಂದು ಮನೆಯಲ್ಲಿ ಎರಡೆರಡು ಮದುವೆ, ಮನೆಯ ತುಂಬಾ ನೆಂಟರಿಷ್ಟರು ತುಂಬಿದ್ದರು. ಎಲ್ಲಾ ವಿಧಿ ವಿಧಾನಗಳು ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಮದುವೆಯಲ್ಲಾ ಮುಗಿದ ಬಳಿಕ ತಂದೆ ಮಗಳನ್ನು ವರನ ಜತೆ ಕಳುಹಿಸಲು ನಿರಾಕರಿಸಿದ್ದಷ್ಟೇ ಅಲ್ಲದೆ ಈ ಮದುವೆ ಮುರಿದಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಅಂದು ಎರಡು ವಿವಾಹಗಳು ನೆರವೇರಿದ್ದವು. ಮದುವೆಯ ವಿಧಿ ವಿಧಾನಗಳು ಮುಗಿದಿದ್ದವು. ಆದರೆ ತಂದೆ ವಧುವನ್ನು ಬೀಳ್ಕೊಡಲು ನಿರಾಕರಿಸಿದ್ದಾರೆ. ವರನ ತಪ್ಪಿನಿಂದಾಗಿ ಮದುವೆ ಮೆರವಣಿಗೆ ವಧು ಇಲ್ಲದೆ ಹಿಂದಿರುಗಬೇಕಾಯಿತು.

ಮದುವೆ ಮುಗಿದ ಮೇಲೆ ಮಗಳನ್ನು ಗಂಡನ ಮನೆಗೆ ಕಳಿಸಲ್ಲ ಎಂದು ಮದುವೆ ಮುರಿದ ತಂದೆ, ಅಂಥದ್ದೇನಾಯ್ತು?
ಮದುವೆ
Image Credit source: Avira Diamonds

Updated on: Apr 06, 2026 | 1:01 PM

ಮೊರಾದಾಬಾದ್, ಏಪ್ರಿಲ್ 06: ಅಂದು ಮನೆಯಲ್ಲಿ ಎರಡೆರಡು ಮದುವೆ(Marriage), ಮನೆಯ ತುಂಬಾ ನೆಂಟರಿಷ್ಟರು ತುಂಬಿದ್ದರು. ಎಲ್ಲಾ ವಿಧಿ ವಿಧಾನಗಳು ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಮದುವೆಯಲ್ಲಾ ಮುಗಿದ ಬಳಿಕ ತಂದೆ ಮಗಳನ್ನು ವರನ ಜತೆ ಕಳುಹಿಸಲು ನಿರಾಕರಿಸಿದ್ದಷ್ಟೇ ಅಲ್ಲದೆ ಈ ಮದುವೆ ಮುರಿದಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಅಂದು ಎರಡು ವಿವಾಹಗಳು ನೆರವೇರಿದ್ದವು. ಮದುವೆಯ ವಿಧಿ ವಿಧಾನಗಳು ಮುಗಿದಿದ್ದವು. ಆದರೆ ತಂದೆ ವಧುವನ್ನು ಬೀಳ್ಕೊಡಲು ನಿರಾಕರಿಸಿದ್ದಾರೆ. ವರನ ತಪ್ಪಿನಿಂದಾಗಿ ಮದುವೆ ಮೆರವಣಿಗೆ ವಧು ಇಲ್ಲದೆ ಹಿಂದಿರುಗಬೇಕಾಯಿತು.

ಮೊರಾದಾಬಾದ್‌ನ ಸುರ್ಜನ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ, ಶನಿವಾರ ಒಂದೇ ಮನೆಯಿಂದ ಎರಡು ವಿವಾಹ ಮೆರವಣಿಗೆಗಳು ಹೊರಡಬೇಕಿತ್ತು. ಒಬ್ಬ ಮಗಳನ್ನು ಸಂತಸದಿಂದ ಬೀಳ್ಕೊಟ್ಟರು ಆದರೆ ಮತ್ತೊಬ್ಬ ಮಗಳ ಸರದಿ ಬಂದಾಗ, ತಂದೆ ಮಗಳನ್ನು ಕಳುಹಿಸುವುದಿಲ್ಲ ಎಂದಾಗ ಗೊಂದಲ ಸೃಷ್ಟಿಯಾಗಿತ್ತು.

ಎಷ್ಟು ಮನವೊಲಿಸಿದರೂ ಕೂಡ, ತಂದೆಯ ನಿರ್ಧಾರ ಬದಲಾಗಲಿಲ್ಲ.ಈ ವಿಚಾರ ಪಂಚಾಯಿತಿವರೆಗೂ ಹೋಯಿತು. ವಧುವಿನ ಕುಟುಂಬವು ವರ ಇನ್ನೊಬ್ಬ ಮಹಿಳೆಯೊಂದಿಗೆ ವಿವಾಹ ಸ್ಥಳದಲ್ಲಿ ಅಲೆದಾಡುತ್ತಿರುವುದನ್ನು ಗಮನಿಸಿದ್ದರು. ಯುವತಿಯ ಬಗ್ಗೆ ವರನನ್ನು ಪ್ರಶ್ನಿಸಿದಾಗ, ಆತ ತೃಪ್ತಿದಾಯಕ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಓದಿ: ಮದುವೆ ಮಂಟಪಕ್ಕೇ ನುಗ್ಗಿ ಮಾಜಿ ಪ್ರಿಯಕರನಿಗೆ ಶಾಕ್​​ಕೊಟ್ಟ ಯುವತಿ: ಫುಲ್​​ ಹೈಡ್ರಾಮಾ

ಪರಿಸ್ಥಿತಿ ಬೇಗನೆ ಉಲ್ಬಣಗೊಂಡಿತು ಮತ್ತು ವಧುವಿನ ಕುಟುಂಬವು ಮದುವೆಯನ್ನು ರದ್ದುಗೊಳಿಸಿತು. ಈ ಘಟನೆ ಸಾಮಾಜಿಕ ಮಾಧ್ಯಮ ಮತ್ತು ಸ್ಥಳೀಯ ಪ್ರದೇಶಗಳಲ್ಲಿ ಚರ್ಚೆಯ ವಿಷಯವಾಗಿದೆ. ತಂದೆಯ ನಿರ್ಧಾರವು ಕೆಲವರನ್ನು ಆಘಾತಗೊಳಿಸಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us