AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಪೂರ್ವಜರು ಪಟಾಕಿ ಇಲ್ಲದೆ ದೀಪಾವಳಿ ಆಚರಿಸುತ್ತಿದ್ದರು: ದೆಹಲಿಯ ಪರಿಸರ ಸಚಿವ

ಚಳಿಗಾಲದಲ್ಲಿ ಪ್ರತಿ ವರ್ಷ ಮಾಲಿನ್ಯದ ಮಟ್ಟ ಹೆಚ್ಚಾಗುತ್ತದೆ, ನಾವು ಪ್ರತಿ ವರ್ಷ ದೀಪಾವಳಿಯನ್ನು ಆಚರಿಸುತ್ತೇವೆ, ಈ ದೀಪಾವಳಿಯಲ್ಲಿ, ಮಾಲಿನ್ಯವನ್ನು ತಡೆಯಲು ನಾವು ಎಲ್ಲಾ ದೆಹಲಿ ನಾಗರಿಕರಿಗೆ ಮನವಿ...

ನಮ್ಮ ಪೂರ್ವಜರು ಪಟಾಕಿ ಇಲ್ಲದೆ  ದೀಪಾವಳಿ ಆಚರಿಸುತ್ತಿದ್ದರು: ದೆಹಲಿಯ ಪರಿಸರ ಸಚಿವ
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Oct 23, 2022 | 8:02 PM

Share

ದೆಹಲಿ: ಜನರ ಜೀವ ಉಳಿಸುವುದು ದಿಲ್ಲಿ ಸರ್ಕಾರದ ಆದ್ಯತೆ,ರಾಜಕೀಯವಲ್ಲ ಎಂದು ದೆಹಲಿಯ (Delhi) ಪರಿಸರ ಸಚಿವ ಗೋಪಾಲ್ ರಾಯ್ (Gopal Rai) ಹೇಳಿದ್ದಾರೆ. ದೀಪಾವಳಿಗೆ ಒಂದು ದಿನ ಮೊದಲು, ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಸುಮಾರು 250 ಆಗಿತ್ತು, ಇದು ಕಳಪೆ ವರ್ಗವಾಗಿದೆ. ದೀಪಾವಳಿಯ ಸಂಜೆ ವೇಳೆಗೆ ಇದು ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಇಂತಿರುವಾಗ ಪಟಾಕಿ ಸಿಡಿಸದಂತೆ ದೆಹಲಿಯ ಜನತೆಗೆ ರಾಯ್ ಮನವಿ ಮಾಡಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಯ್, “ಚಳಿಗಾಲದಲ್ಲಿ ಪ್ರತಿ ವರ್ಷ ಮಾಲಿನ್ಯದ ಮಟ್ಟ ಹೆಚ್ಚಾಗುತ್ತದೆ, ನಾವು ಪ್ರತಿ ವರ್ಷ ದೀಪಾವಳಿಯನ್ನು ಆಚರಿಸುತ್ತೇವೆ, ಈ ದೀಪಾವಳಿಯಲ್ಲಿ, ಮಾಲಿನ್ಯವನ್ನು ತಡೆಯಲು ನಾವು ಎಲ್ಲಾ ದೆಹಲಿ ನಾಗರಿಕರಿಗೆ ಮನವಿ ಮಾಡುತ್ತೇವೆ. ಪಟಾಕಿ ಸಿಡಿಸಬೇಡಿ. ವಿಶೇಷವಾಗಿ ಯುವಕರು ತಮ್ಮ ನಗರದಲ್ಲಿ ಮಾಲಿನ್ಯವನ್ನು ನಿಲ್ಲಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ, ಇದು ನನ್ನ ಮನವಿ ಎಂದಿದ್ದಾರೆ. ಪಟಾಕಿ ನಿಷೇಧದ ವಿರುದ್ಧದ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜಕೀಯದ ಬಗ್ಗೆ ನಾನೇನೂ ಹೇಳಲು ಬಯಸುವುದಿಲ್ಲ, ರಾಜಕೀಯ ಮಾಡುವವರು ಹಾಗೆ ಮಾಡಬಹುದು, ಜನರ ಜೀವ ಉಳಿಸುವುದು ನಮ್ಮ ಆದ್ಯತೆ, ಕೆಲವರು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು.  ನ್ಯಾಯಾಲಯದ ತೀರ್ಪಿನ ನಂತರ, ಈ ವಿಷಯದಲ್ಲಿ ಈಗ ಯಾವುದೇ ಚರ್ಚೆಗೆ ಅವಕಾಶವಿಲ್ಲ, ನಮ್ಮ ಪೂರ್ವಜರು ದೀಪಾವಳಿಯನ್ನು ಆಚರಿಸಿದಾಗ, ಪಟಾಕಿ ಇರಲಿಲ್ಲ, ಆಗ ಪಟಾಕಿಗಳನ್ನು ಉತ್ಪಾದಿಸಲಿಲ್ಲ, ಪ್ರತಿ ಧರ್ಮದ ಆದ್ಯತೆ ಜನರ ಜೀವ ಉಳಿಸುವುದು ಎಂದಿದ್ದಾರೆ.

ಜನರಲ್ಲಿ ಜಾಗೃತಿ ಮೂಡಿಸುವುದು ಸರ್ಕಾರದ ಗುರಿಯಾಗಿದೆ ಎಂದಿದ್ದಾರೆ ರಾಯ್.

ದೆಹಲಿಯ ಸುತ್ತಮುತ್ತ ವರದಿಯಾಗುತ್ತಿರುವ ಬೆಳೆ ತ್ಯಾಜ್ಯ ಸುಡುವ ಘಟನೆಗಳ ಬಗ್ಗೆ ಅವರು ಮತ್ತಷ್ಟು ಕಳವಳ ವ್ಯಕ್ತಪಡಿಸಿದರು. ದೀಪಾವಳಿ ನಂತರ ಬೆಳೆ ತ್ಯಾಜ್ಯ ಸುಡುವ ಘಟನೆಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ರಾಯ್ ಹೇಳಿದರು. “ದೆಹಲಿಯಲ್ಲಿ, ನಾವು ಹೊಲಗಳಲ್ಲಿ ಬಯೋ ಡಿಕಂಪೋಸರ್ ಗಳನ್ನು ಸಿಂಪಡಿಸುತ್ತಿದ್ದೇವೆ. ಆದರೆ ದೆಹಲಿಯ ಹೊರತಾಗಿ, ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲೂ ಬೆಳೆ ತ್ಯಾಜ್ಯ ಸುಡಲಾಗುತ್ತಿದೆಅದನ್ನು ತಡೆಯಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ದೀಪಾವಳಿ ನಂತರ ದೆಹಲಿಯ AQI ಕ್ಷಿಪ್ರವಾಗಿ ಏರಿಕೆಯಾಗುವ ಸಾಧ್ಯತೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಗ್ರಾಪಂ-1 ಮತ್ತು ಗ್ರಾಪಂ-2ರಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ರಾಯ್ ಹೇಳಿದರು. ವಾಯು ಗುಣಮಟ್ಟ ನಿರ್ವಹಣೆ ಆಯೋಗದ ನಿರ್ದೇಶನದ ಪ್ರಕಾರ ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ (ಸಿಎಕ್ಯೂಎಂ) ನಾವು ಎಲ್ಲ ಇಲಾಖೆಗಳಿಗೆ ಎಚ್ಚರಿಕೆ ನೀಡಿದ್ದೇವೆ ಎಂದಿದ್ದಾರೆ.

ಆಮ್ ಆದ್ಮಿ ಪಕ್ಷ  ಸರ್ಕಾರವು ಪಟಾಕಿಯನ್ನು ನಿಷೇಧಿಸಿದ ನಂತರ ದೆಹಲಿಯಲ್ಲಿ ಪಟಾಕಿ ಸಿಡಿಸುವವರಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವುದಕ್ಕೆ ಬಿಜೆಪಿ ಪ್ರತಿಭಟನೆ ನಡೆಸಿದೆ.  ಈ ವರ್ಷ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಸಿಡಿಸುವುದನ್ನು ದೆಹಲಿ ಸರ್ಕಾರ ನಿಷೇಧಿಸಿದೆ. ಇದನ್ನು ಉಲ್ಲಂಘಿಸಿದರೆ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ರಾಯ್ ಬುಧವಾರ ಹೇಳಿದ್ದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಯ್ಈ  ವರ್ಷವೂ, ಪಟಾಕಿಗಳ ಉತ್ಪಾದನೆ, ಮಾರಾಟ, ಸಂಗ್ರಹಣೆ ಮತ್ತು ಸಿಡಿಸುವುದನ್ನು ನಿಷೇಧಿಸಲಾಗಿದೆ. ದೆಹಲಿಯಲ್ಲಿ ಪಟಾಕಿ ಮಾರಾಟ ಅಥವಾ ಸಂಗ್ರಹಣೆಗೆ ₹ 5,000 ದಂಡ ಮತ್ತು/ಅಥವಾ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದಿದ್ದಾರೆ. ದೀಪಾವಳಿಗೂ ಮುನ್ನ ಪಟಾಕಿ ಸಿಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ

Published On - 8:00 pm, Sun, 23 October 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ