Parvesh Verma: ಅರವಿಂದ್ ಕೇಜ್ರಿವಾಲ್​ ಎದುರು ಗೆದ್ದು ದೆಹಲಿ ಸಿಎಂ ರೇಸ್​ನಲ್ಲಿ ಮೊದಲ ಸ್ಥಾನದಲ್ಲಿರುವ ಪರ್ವೇಶ್ ವರ್ಮಾ ಯಾರು?

|

Updated on: Feb 08, 2025 | 6:58 PM

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಗೆದ್ದು ಬೀಗಿದ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಇದೀಗ ಕೇಂದ್ರಬಿಂದುವಾಗಿದ್ದಾರೆ. ಈ ವರ್ಷ ದೆಹಲಿ ಚುನಾವಣೆಯ ಮ್ಯಾನ್ ಆಫ್ ದಿ ಮ್ಯಾಚ್ ಎಂದೇ ಕರೆಸಿಕೊಳ್ಳುತ್ತಿರುವ ಪರ್ವೇಶ್ ವರ್ಮಾ ದೆಹಲಿಯ ಮುಂದಿನ ಮುಖ್ಯಮಂತ್ರಿಗಳ ರೇಸ್​ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹಾಗಾದರೆ, ಈ ಪರ್ವೇಶ್ ವರ್ಮಾ ಯಾರು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Parvesh Verma: ಅರವಿಂದ್ ಕೇಜ್ರಿವಾಲ್​ ಎದುರು ಗೆದ್ದು ದೆಹಲಿ ಸಿಎಂ ರೇಸ್​ನಲ್ಲಿ ಮೊದಲ ಸ್ಥಾನದಲ್ಲಿರುವ ಪರ್ವೇಶ್ ವರ್ಮಾ ಯಾರು?
Parvesh Verma
Follow us on

ನವದೆಹಲಿ: ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿ, ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿರುವ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಸದ್ಯಕ್ಕೆ ಭಾರೀ ಸುದ್ದಿಯಲ್ಲಿದ್ದಾರೆ. 25,000ಕ್ಕೂ ಹೆಚ್ಚು ಮತಗಳನ್ನು ಗಳಿಸಿ 1,200 ಅಂತರದಿಂದ ಗೆದ್ದ ಪರ್ವೇಶ್ ವರ್ಮಾ ಸದ್ಯಕ್ಕೆ ಬಿಜೆಪಿಯ ಮುಂದಿನ ಸಿಎಂ ಅಭ್ಯರ್ಥಿಗಳ ರೇಸ್​ನಲ್ಲಿದ್ದಾರೆ. ರಾಜಕೀಯ ಜೀವನದಲ್ಲಿ ತಮ್ಮ ಸಾಧನೆಗಳಿಗಿಂತ ವಿವಾದಗಳಿಗೆ ಹೆಚ್ಚು ಹೆಸರುವಾಸಿಯಾದ ಪರ್ವೇಶ್ ವರ್ಮಾ 25,000ಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಸತತ 3 ವರ್ಷಗಳ ಕಾಲ ದೆಹಲಿಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ 1,200 ಮತಗಳ ಅಂತರದಿಂದ ಗೆದ್ದಿದ್ದಾರೆ.

ಜೂನ್ 2024ರ ಲೋಕಸಭಾ ಚುನಾವಣೆಯಲ್ಲಿ ಲೋಕಸಭಾ ಟಿಕೆಟ್ ನಿರಾಕರಿಸಲ್ಪಟ್ಟ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಬಳಿಕ ವಿಧಾನಸಭಾ ಚುನಾವಣೆಯ ಟಿಕೆಟ್ ಗಿಟ್ಟಿಸಿಕೊಂಡು, ನವದೆಹಲಿಯಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸುವ ಮೂಲಕ ಅದ್ಭುತ ಪುನರಾಗಮನವನ್ನು ಮಾಡಿದ್ದಾರೆ. 2024ರಲ್ಲಿ ಸ್ಥಾನ ಪಡೆದ ನಂತರ 2025ರಲ್ಲಿ 2 ತಿಂಗಳಲ್ಲಿ ಯಶಸ್ಸನ್ನು ಸಾಧಿಸುವವರೆಗೆ, ಪರ್ವೇಶ್ ವರ್ಮಾ ಈಗ ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.

ಪರ್ವೇಶ್ ವರ್ಮಾ ಯಾರು?:

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಹಿನ್ನೆಲೆಯನ್ನು ಹೊಂದಿರುವ ಪರ್ವೇಶ್ ವರ್ಮಾ, ಒಮ್ಮೆ ರಾಷ್ಟ್ರೀಯ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ, 2014 ಮತ್ತು 2019 ಎರಡರಲ್ಲೂ ಪಶ್ಚಿಮ ದೆಹಲಿಯ ಸಂಸದೀಯ ಸ್ಥಾನವನ್ನು ಗೆದ್ದರು. ಆದರೂ ಅವರು 2024ರ ಚುನಾವಣೆಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಇದರಿಂದ ಅವರು ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕೀಯಕ್ಕೆ ಮರಳುವಂತಾಗಿತು.

ಇದನ್ನೂ ಓದಿ: ಕೇಜ್ರಿವಾಲ್, ಸಿಸೋಡಿಯಾ ಸೇರಿ ದೆಹಲಿ ಚುನಾವಣೆಯಲ್ಲಿ ಈ ಪ್ರಮುಖ ಆಪ್ ನಾಯಕರಿಗೆ ಭಾರೀ ಮುಖಭಂಗ

ನವದೆಹಲಿಯಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಬಿಜೆಪಿಯ ಪರ್ವೇಶ್ ವರ್ಮಾ ಅವರನ್ನು ಬಹುತೇಕರು ಅತಿದೊಡ್ಡ ವಿಜೇತ ಎಂದು ಬ್ರಾಂಡ್ ಮಾಡುತ್ತಿದ್ದಾರೆ. ರಾಜ್ಯ ರಾಜಕಾರಣದ ಅಖಾಡದಲ್ಲೇ ಇರದಿದ್ದ ಪರ್ವೇಶ್ ವರ್ಮಾ ಅವರಿಗೆ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧದ ಯುದ್ಧಕ್ಕೆ ತಯಾರಿ ನಡೆಸಲು ಕೇವಲ ಎರಡು ತಿಂಗಳುಗಳಿದ್ದವು.

ಪಶ್ಚಿಮ ದೆಹಲಿಯಿಂದ (2014-2024) ಎರಡು ಬಾರಿ ಸಂಸದರಾಗಿದ್ದರೂ, 2024ರ ಲೋಕಸಭಾ ಚುನಾವಣೆಯಲ್ಲಿ ಪರ್ವೇಶ್ ವರ್ಮಾಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಆದರೂ ವರ್ಮಾ ಬೇಸರಗೊಳ್ಳಲಿಲ್ಲ ಅಥವಾ ದಾರಿ ತಪ್ಪಲಿಲ್ಲ. ಬೇರೆ ಪಕ್ಷದತ್ತಲೂ ವಾಲಲಿಲ್ಲ. ಇದೀಗ ಅವರು ದೆಹಲಿಯ ಮುಖ್ಯಮಂತ್ರಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಇದನ್ನೂ ಓದಿ: ರಾಜ್ಯಸಭೆ ಬಹುಮತ, ರಾಷ್ಟ್ರಪತಿ ಚುನಾವಣಾ ಗೆಲುವಿಗೆ ಮುನ್ನುಡಿ ಬರೆದ ಬಿಜೆಪಿಯ ದೆಹಲಿ ಗೆಲುವು

ದೆಹಲಿಯ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ ಪರ್ವೇಶ್ ವರ್ಮಾ, ಸಂಸತ್ತಿಗೆ ಆಯ್ಕೆಯಾಗುವ ಮೊದಲು ಮೆಹ್ರೌಲಿಯಿಂದ ಶಾಸಕರಾಗಿ ಗೆದ್ದರು. 2013ರಲ್ಲಿ ದೆಹಲಿ ವಿಧಾನಸಭೆ ವಿಸರ್ಜನೆಯಾದ ನಂತರ ಅವರನ್ನು 2014ರಲ್ಲಿ ಲೋಕಸಭೆಗೆ ಕಣಕ್ಕಿಳಿಸಲಾಯಿತು. ಅವರು ಪಶ್ಚಿಮ ದೆಹಲಿಯಿಂದ ಗೆದ್ದರು ಮತ್ತು 2019ರ ಚುನಾವಣೆಯಲ್ಲಿ ಸ್ಥಾನವನ್ನು ಉಳಿಸಿಕೊಂಡರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ