ಮುಂಬೈ: ಆಸ್ಪತ್ರೆಯಲ್ಲಿ ಕುಡುಕ ರೋಗಿಯಿಂದ ವೈದ್ಯೆ ಮೇಲೆ ಹಲ್ಲೆ

ಆಸ್ಪತ್ರೆಯಲ್ಲಿ ಪಾನಮತ್ತ ರೋಗಿ ಹಾಗೂ ಆತನ ಸಂಬಂಧಿಕರು ವೈದ್ಯೆ ಮೇಲೆ ಹಲ್ಲೆ ನಡೆಸಿರುವ ಘಟನೆ ಮುಂಬೈನ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಬೆಳಗಿನ ಜಾವ 3.30ರ ಸುಮಾರಿಗೆ ರೋಗಿ ಮತ್ತವನ ಸಂಬಂಧಿಕರು ವೈದ್ಯೆ ಮೇಲೆ ಹಲ್ಲೆ ನಡೆಸಿದ್ದಾರೆ.

ಮುಂಬೈ: ಆಸ್ಪತ್ರೆಯಲ್ಲಿ ಕುಡುಕ ರೋಗಿಯಿಂದ ವೈದ್ಯೆ ಮೇಲೆ ಹಲ್ಲೆ
ಪ್ರತಿಭಟನೆ
Follow us
|

Updated on:Aug 18, 2024 | 12:54 PM

ಕೋಲ್ಕತ್ತಾದ ಆರ್​ಜಿ ಕರ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿ ಮೇಲಿನ ಅತ್ಯಾಚಾರ, ಕೊಲೆ ಕುರಿತಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಭಾನುವಾರ ಮುಂಜಾನೆ ಸಿಯಾನ್ ಆಸ್ಪತ್ರೆಯ ವೈದ್ಯೆಯ ಮೇಲೆ ರೋಗಿ ಮತ್ತವರ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಮುಂಜಾನೆ 3.30ರ ಸುಮಾರಿಗೆ ವೈದ್ಯರು ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದಾಳಿ ನಡೆದಿದೆ. ಮುಖಕ್ಕೆ ಗಾಯಗಳಾಗಿ ಆಸ್ಪತ್ರೆಗೆ ಬಂದಿದ್ದ ರೋಗಿ ಚಿಕಿತ್ಸೆ ವೇಳೆ ಆಕ್ರೋಶ ವ್ಯಕ್ತಪಡಿಸಿದರು. ಅವರು ವೈದ್ಯರನ್ನು ನಿಂದಿಸಲು ಮತ್ತು ಬೆದರಿಕೆ ಹಾಕಲು ಪ್ರಾರಂಭಿಸಿದರು.

ಪರಿಸ್ಥಿತಿ ಉಲ್ಬಣಗೊಂಡಿತ್ತು, ಗುಂಪು ದೈಹಿಕವಾಗಿ ಹಲ್ಲೆ ನಡೆಸಿದೆ, ಆಕೆ ತಪ್ಪಿಸಿಕೊಳ್ಳಳು ಪ್ರಯತ್ನಿಸಿದಾಗ ಗಾಯಗಳಾಗಿವೆ. ಇಂದು ಬೆಳಗಿನ ಜಾವ ರೋಗಿ ಹಾಗೂ ಸಂಬಂಧಿಕರು ಕುಡಿದ ಮತ್ತಿನಲ್ಲಿ ಆಸ್ಪತ್ರೆಗೆ ಬಂದಿದ್ದರು.

ಹಲ್ಲೆಯ ನಂತರ, ರೋಗಿಯು ಮತ್ತು ಅವನ ಸಂಬಂಧಿಕರು ಸ್ಥಳದಿಂದ ಓಡಿಹೋದರು. ಈ ಘಟನೆಯು ಭಾರತದಲ್ಲಿ ವೈದ್ಯಕೀಯ ವೃತ್ತಿಪರರ ಸುರಕ್ಷತೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳನ್ನು ತೀವ್ರಗೊಳಿಸಿದೆ.

ಮತ್ತಷ್ಟು ಓದಿ: ಕೋಲ್ಕತ್ತಾ ಅತ್ಯಾಚಾರ, ಕೊಲೆ ಪ್ರಕರಣ: ಪರ್ಸನಲ್ ಡೈರಿಯ ಹರಿದ ಹಾಳೆಯಲ್ಲಿ ಏನಿರಬಹುದು?

ಕೇಂದ್ರ ಅಥವಾ ರಾಜ್ಯ ನಿಯಂತ್ರಣದಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ತಮ್ಮ ಆವರಣದಲ್ಲಿ ಯಾವುದೇ ಹಿಂಸಾತ್ಮಕ ಘಟನೆ ನಡೆದ ಆರು ಗಂಟೆಗಳ ಒಳಗೆ ಪೊಲೀಸ್ ದೂರುಗಳನ್ನು ಸಲ್ಲಿಸಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ನಿರ್ದೇಶನ ನೀಡಿದೆ. ಅಂತಹ ಯಾವುದೇ ದೂರು ನೀಡದಿದ್ದರೆ ಸಂಸ್ಥೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವಾಲಯ ಒತ್ತಿ ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:53 pm, Sun, 18 August 24