ದೇಶದ ಅನೇಕ ಭಾಗಗಳಲ್ಲಿ ಮನೆಯ ಹೊರಗೆ ಕೆಂಪು ಬಣ್ಣದ ಬಾಟಲಿ ನೇತು ಹಾಕುವುದೇಕೆ?
ದೇಶದ ಅನೇಕ ಭಾಗಗಳಲ್ಲಿ ಮನೆಯ ಹೊರಗೆ ಕೆಂಪು ಹಾಗೂ ಬೇರೆ ಬಣ್ಣದ ಬಾಟಲಿಗಳನ್ನು ಇಡುವ ವಾಡಿಕೆ ಇದೆ. ಯಾರಾದರೂ ಮಾಟ ಮಂತ್ರ ಮಾಡಿದ್ದಾರೆಯೇ ಎಂದು ನೀವು ಯೋಚಿಸುತ್ತಿದ್ದರೆ ಅದು ತಪ್ಪು. ಬೀದಿಗಳಲ್ಲಿ, ಮನೆಯ ಎದುರು ಗೇಟಿನ ಬಳಿ ಈ ಬಾಟಲಿಗಳನ್ನು ನೇತುಹಾಕುತ್ತಾರೆ. ಬಾಟಲಿಗಳ ಮೂಲಕ ಬೀದಿ ನಾಯಿಗಳನ್ನು ಓಡಿಸುವ ಪ್ರಯತ್ನ ಅದು.

ಕೆಂಪು, ನೀಲಿ, ಹಸಿರು ಬಣ್ಣದ ಬಾಟಲಿಗಳನ್ನು ಇರಿಸಲಾಗುತ್ತದೆ, ಆ ಬಾಟಲಿಗಳು ಇರುವ ಜಾಗದಲ್ಲಿ ಪ್ರಾಣಿಗಳು ಗಲೀಜು ಮಾಡುವುದಿಲ್ಲ ಎಂಬ ನಂಬಿಕೆ. ನಾಯಿಗಳ ಹಾವಳಿ ಹೆಚ್ಚಾದ ಪ್ರದೇಶಗಳಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತದೆ, ಜಮ್ಮು ಕಾಶ್ಮೀರ, ಕೋಲ್ಕತ್ತಾ, ಮಧ್ಯಪ್ರದೇಶ ಹಲವೆಡೆ ಈ ಪದ್ಧತಿ ಅನುಸರಿಸುತ್ತಾರೆ.
ಮಧ್ಯಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ, 30ಕ್ಕೂ ಹೆಚ್ಚು ಮಂದಿ ರೇಬಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. 15 ದಿನಗಳ ಹಿಂದೆ ಸಾಗರದ ಬೀನಾ ಎಂಬಲ್ಲಿ 8 ವರ್ಷದ ಮಗುವಿಗೆ ನಾಯಿ ಕಚ್ಚಿದ್ದು, ಚಿಕಿತ್ಸೆ ವೇಳೆ ಮೃತಪಟ್ಟಿತ್ತು. ಎರಡು ದಿನಗಳ ಹಿಂದೆಯಷ್ಟೇ ಹಳ್ಳಿಯೊಂದರಲ್ಲಿ ಎರಡೂವರೆ ಗಂಟೆಗಳಲ್ಲಿ 17 ಮಂದಿಗೆ ಹುಚ್ಚುನಾಯಿ ಕಚ್ಚಿತ್ತು. ಮಕ್ಕಳು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ.
ಮತ್ತಷ್ಟು ಓದಿ: ನೀವು ಹೋಟೆಲ್ನಲ್ಲಿ ಉಳಿದುಕೊಳ್ತೀರಾ, ಹಾಸಿಗೆ ಕೆಳಗೆ ನೀರಿನ ಬಾಟಲಿ ಎಸೆಯುವುದ ಮರಿಬೇಡಿ
ಹಾಗಾಗಿ ಮನೆಯ ಮುಂದೆ ಕೆಂಪು ಬಾಟಲಿಗಳನ್ನು ನೇತುಹಾಕುತ್ತಾರೆ, ನಾಯಿಗಳು ಹೆದರುವುದು ಮಾತ್ರವಲ್ಲದೆ, ಕಂಡ ಕಂಡಲ್ಲಿ ನಾಯಿಗಳು ಮೂತ್ರ ಮಾಡುವುದು ತಪ್ಪುತ್ತದೆ ಎಂಬುದು ನಂಬಿಕೆ.
ಜಮ್ಮು ಕಾಶ್ಮೀರದಲ್ಲಿ, ಕೋಲ್ಕತ್ತಾದಲ್ಲೂ ಇದನ್ನು ಕಾಣಬಹುದು ಮೊದಲು ನೋಡಿದವರು ಮಕ್ಕಳು ಮೋಜಿಗಾಗಿ ನೇತುಹಾಕಿದ್ದಾರೆ ಎಂದೇ ಜನರು ಭಾವಿಸುತ್ತಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ