ಒಂದಲ್ಲ ಎರಡಲ್ಲ, ಬರೋಬ್ಬರಿ 167 ಕೋಟಿ ರೂ. ಕೊಟ್ಟು ರಾಜಾ ರವಿ ವರ್ಮನ ಚಿತ್ರ ಖರೀದಿಸಿದ ಔಷಧಿ ಕಿಂಗ್​ ಸೈರಸ್ ಪೂನಾವಾಲಾ

ರಾಜಾ ರವಿ ವರ್ಮನ(Raja Ravi Verma) ಕುಂಚದಲ್ಲಿ ಮೂಡಿ ಬಂದಿರುವ ಯಶೋಧ ಮತ್ತು ಕೃಷ್ಣ ಇರುವ ಚಿತ್ರವನ್ನು ಔಷಧಿ ಕಿಂಗ್ ಸೈರಸ್ ಪೂನಾವಾಲಾ ಬರೋಬ್ಬರಿ 167 ಕೋಟಿ ರೂ. ಕೊಟ್ಟು ಖರೀದಿಸಿದ್ದಾರೆ. ಚಿತ್ರಕಲೆ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ  ಭಾರತೀಯ ಕಲಾಕೃತಿಯಾಗಿದೆ. ಕೈಗಾರಿಕೋದ್ಯಮಿ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥಾಪಕ ಸೈರಸ್ ಎಸ್ ಪೂನವಲ್ಲಾ ಈ ಆಯಿಲ್ ಪೇಂಟಿಂಗ್ ಖರೀದಿಸಿದ್ದಾರೆ.

ಒಂದಲ್ಲ ಎರಡಲ್ಲ, ಬರೋಬ್ಬರಿ 167 ಕೋಟಿ ರೂ. ಕೊಟ್ಟು ರಾಜಾ ರವಿ ವರ್ಮನ ಚಿತ್ರ ಖರೀದಿಸಿದ ಔಷಧಿ ಕಿಂಗ್​ ಸೈರಸ್ ಪೂನಾವಾಲಾ
ಚಿತ್ರ
Image Credit source: News 9

Updated on: Apr 02, 2026 | 11:36 AM

ನವದೆಹಲಿ, ಏಪ್ರಿಲ್ 02: ರಾಜಾ ರವಿ ವರ್ಮನ(Raja Ravi Verma) ಕುಂಚದಲ್ಲಿ ಮೂಡಿ ಬಂದಿರುವ ಯಶೋಧ ಮತ್ತು ಕೃಷ್ಣ ಇರುವ ಚಿತ್ರವನ್ನು ಔಷಧಿ ಕಿಂಗ್ ಸೈರಸ್ ಪೂನಾವಾಲಾ ಬರೋಬ್ಬರಿ 167 ಕೋಟಿ ರೂ. ಕೊಟ್ಟು ಖರೀದಿಸಿದ್ದಾರೆ. ಚಿತ್ರಕಲೆ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ  ಭಾರತೀಯ ಕಲಾಕೃತಿಯಾಗಿದೆ. ಕೈಗಾರಿಕೋದ್ಯಮಿ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥಾಪಕ ಸೈರಸ್ ಎಸ್ ಪೂನವಲ್ಲಾ ಈ ಆಯಿಲ್ ಪೇಂಟಿಂಗ್ ಖರೀದಿಸಿದ್ದಾರೆ.

ಯುರೋಪಿಯನ್ ತಂತ್ರ ಮತ್ತು ಭಾರತೀಯ ಸಂವೇದನೆಯನ್ನು ತಮ್ಮ ಚಿತ್ರಕಲೆಯಲ್ಲಿ ಮಿಶ್ರಣ ಮಾಡಿದ್ದಕ್ಕಾಗಿ ಹೆಸರುವಾಸಿಯಾದ ವರ್ಮಾ, 1890 ರ ದಶಕದಲ್ಲಿ ‘ಯಶೋದ ಮತ್ತು ಕೃಷ್ಣ’ ಎಂಬ ಶೀರ್ಷಿಕೆಯ ಈ ವರ್ಣಚಿತ್ರವನ್ನು ರಚಿಸಿದ್ದರು ಅದರಲ್ಲಿ ಅವರ ಸಹಿ ಕೂಡ ಇದೆ.

ಈ ವರ್ಣಚಿತ್ರವು 80 ಕೋಟಿ ರೂ.ನಿಂದ 120 ಕೋಟಿ ರೂ.ವರೆಗೆ ಮಾರಾಟವಾಗಲಿದೆ ಎಂದು ಅಂದಾಜಿಸಲಾಗಿತ್ತು, ಆದರೆ ಅದು ಅಂದಾಜು ಬೆಲೆಗಿಂತ ಎರಡು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದೆ.
ತಿರುವಾಂಕೂರಿನ ಶ್ರೀಮಂತ ಕುಟುಂಬದಲ್ಲಿ ಜನಿಸಿದ ವರ್ಮಾ ಆಧುನಿಕ ಭಾರತೀಯ ಕಲೆಯ ಪಿತಾಮಹ ಎಂದೇ ಕರೆಯುತ್ತಾರೆ, ಹಿಂದೂ ದೇವರು ಮತ್ತು ದೇವತೆಗಳ ಚಿತ್ರಗಳನ್ನು ಕ್ಯಾನ್ವಾಸ್‌ನಲ್ಲಿ ಎಷ್ಟು ಕೌಶಲ್ಯದಿಂದ ಬಿಡಿಸುತ್ತಾರೆಂದರೆ ಅದು ಪೇಂಟಿಂಗ್ ಎಂದೇ ಗೊತ್ತಾಗುವುದಿಲ್ಲ.

ಮತ್ತಷ್ಟು ಓದಿ: ಬೆಂಗಳೂರಿನ ಗೋಡೆಗಳ ಮೇಲೆ ಕಲಾವಿದರ ಕೈಚಳಕ: ಕತೆ ಹೇಳುತ್ತವೆ ಒಂದೊಂದು ಚಿತ್ರಗಳು

ದೆಹಲಿ ಮೂಲದ ಸ್ಯಾಫ್ರನ್‌ಆರ್ಟ್ ಹರಾಜು ಸಂಸ್ಥೆಯು ತನ್ನ ಸ್ಪ್ರಿಂಗ್ ಲೈವ್ ಸೇಲ್ನ ಭಾಗವಾಗಿ ಏಪ್ರಿಲ್ 1 ರಂದು ಈ ವರ್ಣಚಿತ್ರವನ್ನು ಹರಾಜಿಗೆ ಹಾಕಿತ್ತು. ಕಳೆದ ವರ್ಷ ಸೆಪ್ಟೆಂಬರ್ 27 ರಂದು, ಭಾರತೀಯ ಕಲಾವಿದ ವಾಸುದೇವ್ ಎಸ್. ಗೈತೊಂಡೆ ಅವರ ಅಮೂರ್ತ ಚಿತ್ರಕಲೆ ಅಂದಾಜು ಬೆಲೆಗಿಂತ ಮೂರು ಪಟ್ಟು ಹೆಚ್ಚು ಮಾರಾಟವಾಗಿತ್ತು. ಅದು 67 ಕೋಟಿ ರೂ.ಗೆ ಮಾರಾಟವಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us