Year Ender 2022: ವರ್ಷದ ಹಿನ್ನೋಟ; ದೇಶದಲ್ಲಿ ನಡೆದ ಪ್ರಮುಖ 12 ಘಟನೆಗಳು ಇಲ್ಲಿವೆ

ಗುಜರಾತ್‌ನ ಮೋರ್ಬಿಯಲ್ಲಿ ಸಂಭವಿಸಿದ ಕೇಬಲ್ ಸೇತುವೆ ಅಪಘಾತದಲ್ಲಿ ನೂರಾರು ಜನ ಸಾವಿಗೀಡಾದರು. ದೇಶದಲ್ಲಿ 5g ನೆಟ್‌ವರ್ಕ್ ಅನ್ನು ಪ್ರಾರಂಭಿಸಲಾಯಿತು. ಹೀಗೆ ದೇಶದಲ್ಲಿ ಈ ವರ್ಷ ಸದ್ದು ಮಾಡಿದ, ಸುದ್ದಿಯಾದ ಪ್ರಮುಖ ಘಟನೆಗಳು ಇಲ್ಲಿವೆ

Year Ender 2022: ವರ್ಷದ ಹಿನ್ನೋಟ; ದೇಶದಲ್ಲಿ ನಡೆದ ಪ್ರಮುಖ 12 ಘಟನೆಗಳು ಇಲ್ಲಿವೆ
2022ರ ಪ್ರಮುಖ ಘಟನೆಗಳು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 30, 2022 | 1:46 PM

2022 ವರ್ಷದ ಆರಂಭದಲ್ಲಿ ಕರ್ನಾಟಕದಲ್ಲಿ ಹಿಜಾಬ್ (Hijab Row) ಬಗ್ಗೆ ವಿವಾದವೆದ್ದಿತ್ತು. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಆಕ್ರೋಶ ಇನ್ನೊಂದೆಡೆ.ಈ ದೇಶದಲ್ಲಿ ಮೊದಲ ಬಾರಿಗೆ ಬುಡಕಟ್ಟು ಜನಾಂಗಕ್ಕೆ ಸೇರಿದ ಮೊದಲ ಮಹಿಳೆ ದ್ರೌಪದಿ ಮುರ್ಮು (Droupadi Murmu) ರಾಷ್ಟ್ರಪತಿ ಸ್ಥಾನ ಅಲಂಕರಿಸಿದರು.ಗುಜರಾತ್‌ನ ಮೋರ್ಬಿಯಲ್ಲಿ ಸಂಭವಿಸಿದ ಕೇಬಲ್ ಸೇತುವೆ ಅಪಘಾತದಲ್ಲಿ ನೂರಾರು ಜನ ಸಾವಿಗೀಡಾದರು. ದೇಶದಲ್ಲಿ 5g ನೆಟ್‌ವರ್ಕ್ ಅನ್ನು ಪ್ರಾರಂಭಿಸಲಾಯಿತು. ಹೀಗೆ ದೇಶದಲ್ಲಿ ಈ ವರ್ಷ ಸದ್ದು ಮಾಡಿದ,ಸುದ್ದಿಯಾದ ಪ್ರಮುಖ ಘಟನೆಗಳು ಇಲ್ಲಿವೆ

ಕರ್ನಾಟಕದಲ್ಲಿ ಹಿಜಾಬ್ ವಿವಾದ

ಕರ್ನಾಟಕದ ಶಾಲೆಗಳಲ್ಲಿ ಮುಸ್ಲಿಂ ಹುಡುಗಿಯರು ಶಾಲೆಯೊಳಗೆ ಹಿಜಾಬ್ ಧರಿಸುವುದನ್ನು ತಡೆಯಲಾಯಿತು. ಇದನ್ನು ವಿರೋಧಿಸಿ ಕೆಲವು ಹುಡುಗಿಯರು ಪ್ರತಿಭಟನೆಗೆ ಕುಳಿತರು. ವಿಷಯ ಉಲ್ಬಣಗೊಂಡಾಗ ಹಲವು ಹಿಂದೂ ಸಂಘಟನೆಗಳ ಜನರು ಗದ್ದಲ ಎಬ್ಬಿಸಿದರು. ಹಲವೆಡೆ ವಿವಾದ ಭುಗಿಲೆದ್ದಿರುವುದು ಕಂಡು ಬಂತು. ಹಿಂದೂ ಸಂಘಟನೆಗಳು ಕೇಸರಿ ಶಾಲು ಹಾಕಿ ಶಾಲೆಗೆ ಬಂದು ಹಿಜಾಬ್ ವಿರುದ್ದ ದನಿಯೆತ್ತಿದ್ದವು. ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು. ಕರ್ನಾಟಕ ಹೈಕೋರ್ಟ್ ಹಿಜಾಬ್ ಅನ್ನು ನಿಷೇಧಿಸಿದಾಗ, ವಿಷಯ ಸುಪ್ರೀಂಕೋರ್ಟ್‌ಗೆ ತಲುಪಿತು. ಹಿಜಾಬ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠವು ಭಿನ್ನಮತದ ತೀರ್ಪು ನೀಡಿತ್ತು.

ರಾಷ್ಟ್ರಪತಿ ದ್ರೌಪದಿ ಮುರ್ಮು

ದ್ರೌಪದಿ ಮುರ್ಮು ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿಯಾದರು. ಬುಡಕಟ್ಟು ಸಮುದಾಯದಿಂದ ಬಂದ ದ್ರೌಪದಿ ಮುರ್ಮು ಈ ಹಿಂದೆ ಜಾರ್ಖಂಡ್‌ನ ರಾಜ್ಯಪಾಲರಾಗಿದ್ದರು ಮತ್ತು ಒಡಿಶಾ ಸರ್ಕಾರದಲ್ಲಿ ಸಚಿವರಾಗಿದ್ದರು.

ಹರ್ ಘರ್ ತಿರಂಗ

2022 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ‘ಹರ್ ಘರ್ ತಿರಂಗ’ ಅಭಿಯಾನವನ್ನು ಆಚರಿಸುವಂತೆ ಪ್ರಧಾನಿ ಮೋದಿ ದೇಶವಾಸಿಗಳಿಗೆ ಮನವಿ ಮಾಡಿದರು. ಇದಕ್ಕಾಗಿ ದೇಶಾದ್ಯಂತ ಜನರಿಗೆ ಧ್ವಜಗಳನ್ನು ಸಹ ವಿತರಿಸಲಾಯಿತು ಮತ್ತು ಜನರು ಹೆಚ್ಚಿನ ಸಂಖ್ಯೆಯಲ್ಲಿ ಧ್ವಜಗಳನ್ನು ಖರೀದಿಸಿದರು. ಆಗಸ್ಟ್ 15 ರ ಸಂದರ್ಭದಲ್ಲಿ ದೇಶವಾಸಿಗಳು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇದು ಆರ್ಥಿಕತೆಗೆ ಸಾಕಷ್ಟು ಪ್ರಯೋಜನವನ್ನು ನೀಡಿತು ಮತ್ತು ಜನರು 500 ಕೋಟಿಗೂ ಹೆಚ್ಚು ಮೌಲ್ಯದ ಧ್ವಜಗಳನ್ನು ಖರೀದಿಸಿದರು.

ಭಾರತ ಚೀನಾ ತವಾಂಗ್ ಸಂಘರ್ಷ

ಚೀನಾ ಮತ್ತು ಭಾರತದ ಗಡಿಯಲ್ಲಿನ ಉದ್ವಿಗ್ನತೆಯು 2022 ರಲ್ಲೂ ಮುಂದುವರೆಯಿತು. ಲಡಾಖ್ ವಿವಾದದ ನಂತರ ಕಮಾಂಡರ್ ಮಟ್ಟದ ಮಾತುಕತೆಗಳು ಹತ್ತಾರು ಬಾರಿ ನಡೆದಿವೆ. ಹಲವು ಕಡೆಗಳಲ್ಲಿ ಒಪ್ಪಂದಗಳನ್ನೂ ಮಾಡಿಕೊಳ್ಳಲಾಯಿತು. ಏತನ್ಮಧ್ಯೆ, ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿತ್ತು. ಈ ವೇಳೆ ಭಾರತೀಯ ಸೈನಿಕರು ಭರದ ಸಿದ್ಧತೆ ನಡೆಸಿದ್ದರಿಂದ ಚೀನಾದ ಹಲವು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾರತದ ಕೆಲವು ಸೈನಿಕರು ಸಹ ಗಾಯಗೊಂಡರು.

ಚುನಾವಣೆಗಳು

2022ರಲ್ಲಿ, ಗೋವಾ, ಉತ್ತರಾಖಂಡ, ಪಂಜಾಬ್, ಮಣಿಪುರ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಚುನಾವಣೆಗಳು ನಡೆದವು. ಬಿಜೆಪಿ ಪ್ರಾಬಲ್ಯವು 2022 ರಲ್ಲಿ ಮುಂದುವರೆಯಿತು. ಬಿಜೆಪಿ – ಗೋವಾ, ಉತ್ತರಾಖಂಡ, ಮಣಿಪುರ, ಉತ್ತರ ಪ್ರದೇಶ ಮತ್ತು ಗುಜರಾತ್ ನಲ್ಲಿ  ಗೆದ್ದಿತು. ಕಾಂಗ್ರೆಸ್ ಕೇವಲ ಒಂದು ರಾಜ್ಯವನ್ನು – ಹಿಮಾಚಲ ಪ್ರದೇಶವನ್ನು ಪಡೆದುಕೊಂಡಿತು. ಪಂಜಾಬ್‌ನಲ್ಲಿ ಆಪ್ ಗೆದ್ದು ಬೀಗಿತು. ಎಎಪಿಯ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಇದು ಐತಿಹಾಸಿಕ ಚುನಾವಣಾ ಫಲಿತಾಂಶವಾಗಿದೆ. ಎಎಪಿ ತನ್ನ ಮೊದಲ ಪೂರ್ಣ ಪ್ರಮಾಣದ ರಾಜ್ಯವನ್ನು ಪಡೆದುಕೊಂಡಿತು. ಎಎಪಿ ಎಂಸಿಡಿಯನ್ನು ಗೆದ್ದುಕೊಂಡಿತು, ಈ ಮೂಲಕ ನಾಗರಿಕ ಸಂಸ್ಥೆಯಲ್ಲಿ ಬಿಜೆಪಿಯ 15 ವರ್ಷಗಳ ಪ್ರಾಬಲ್ಯವನ್ನು ಕೊನೆಗೊಳಿಸಿತು.

ಕಾಂಗ್ರೆಸ್ ಪಕ್ಷದ ಚುನಾವಣೆ

25 ವರ್ಷಗಳ ನಂತರ ನಡೆದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಭಾರೀ ಸುದ್ದಿಯಾಗಿತ್ತು. ಕಾಂಗ್ರೆಸ್ ಆಂತರಿಕ ಚುನಾವಣೆಯನ್ನು ನಡೆಸದೆ ಮತ್ತು ವಂಶಾಡಳಿತ ರಾಜಕೀಯಕ್ಕೆ ಒಲವು ತೋರುತ್ತಿದೆ ಎಂದು ಟೀಕಿಸಲಾಯಿತು. ಆದರೆ ಕಾಂಗ್ರೆಸ್‌ನಲ್ಲಿ ಎಂದಿನಂತೆ ಆಂತರಿಕ ಚುನಾವಣೆಯೂ ವಿವಾದ ಮುಕ್ತವಾಗಿರಲಿಲ್ಲ. ಈ ಹಿಂದೆ, ಗಾಂಧಿಯವರ ನಿಷ್ಠಾವಂತ ಅಶೋಕ್ ಗೆಹ್ಲೋಟ್ ಸ್ಪರ್ಧಿಸಬೇಕಾಗಿತ್ತು, ಆದರೆ ಅವರು ತಮ್ಮ ಕಿರಿಯ ಸಚಿನ್ ಪೈಲಟ್‌ಗೆ ರಾಜಸ್ಥಾನ ಮುಖ್ಯಮಂತ್ರಿ ಹುದ್ದೆಯನ್ನು ಹಸ್ತಾಂತರಿಸಲು ನಿರಾಕರಿಸಿದರು. ಇದು ಬಹುತೇಕ ರಾಜಸ್ಥಾನದಲ್ಲಿ ದಂಗೆಯನ್ನು ಪ್ರಚೋದಿಸಿತು. ಪಕ್ಷವು ಹೇಗಾದರೂ ಅದನ್ನು ನಿಭಾಯಿಸಲು ಯಶಸ್ವಿಯಾಯಿತು.ಮಲ್ಲಿಕಾರ್ಜುನ ಖರ್ಗೆ ಜತೆ ಜಿ-23 ಸದಸ್ಯ ಶಶಿ ತರೂರ್ ಚುನಾವಣೆ ಸ್ಪರ್ಧಿಸಿದರು. ಅಂತಿಮವಾಗಿ ಖರ್ಗೆ ಗೆದ್ದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರು.

ರಾಹುಲ್ ಭಾರತ್ ಜೋಡೋ ಯಾತ್ರೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪಕ್ಷದ ಕಳೆದುಕೊಂಡಿರುವ ಚುನಾವಣಾ ನೆಲವನ್ನು ಮರಳಿ ಪಡೆಯಲು ಭಾರೀ ಪ್ರಚಾರದಲ್ಲಿದ್ದಾರೆ. ‘ರಾಹುಲ್’ ಬ್ರಾಂಡ್ ಅನ್ನು ಮರುಪ್ರಾರಂಭಿಸುವ ಉಪಕ್ರಮ ಎಂದು ಬಿಜೆಪಿ ಕರೆದಿದೆ. ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ 3,570 ಕಿ.ಮೀ ಉದ್ದದ ಈ ಯಾತ್ರೆ 150 ದಿನಗಳ ಕಾಲ ನಡೆಯಲಿದೆ. ಜನರಲ್ಲಿ ಪ್ರೀತಿಯನ್ನು ಪಸರಿಸಲು ಪಾದಯಾತ್ರೆ ನಡೆಸುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನಿತೀಶ್ ಕುಮಾರ್ ಯು-ಟರ್ನ್

2022 ಬಿಹಾರ ಮುಖ್ಯಮಂತ್ರಿ ಮತ್ತು ಜನತಾ ದಳ ಯುನೈಟೆಡ್ ನಾಯಕ ನಿತೀಶ್ ಕುಮಾರ್ ಅವರ ರಾಜಕೀಯ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿತು. ಏಕೆಂದರೆ ಅವರು ಮಹಾಘಟಬಂಧನ್‌ಗೆ ಮತ್ತೆ ಸೇರುವ ಮೂಲಕ ಮತ್ತೊಂದು ಯು-ಟರ್ನ್ ತೆಗೆದುಕೊಂಡರು. ಆಗಸ್ಟ್‌ನಲ್ಲಿ ಅವರು ಎನ್‌ಡಿಎ ತೊರೆದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬೆಂಬಲದೊಂದಿಗೆ ಸರ್ಕಾರ ರಚಿಸಿದರು. ಇತ್ತೀಚಿನ ಯು-ಟರ್ನ್ ನಿರ್ಣಾಯಕ 2024 ರ ಸಾರ್ವತ್ರಿಕ ಚುನಾವಣೆಯ ಮುಂದೆ ಮಾರ್ಗಸೂಚಿಯನ್ನು ಹಾಕಿತು. ಇತ್ತೀಚೆಗಷ್ಟೇ ನಿತೀಶ್ ಅವರು ಬಿಜೆಪಿ ವಿರುದ್ಧ ಪ್ರಚಾರ ನಡೆಸುವುದಾಗಿ ಮತ್ತು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು.

ಮಹಾರಾಷ್ಟ್ರದಲ್ಲಿ ರಾಜಕೀಯ ಜಟಾಪಟಿ

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಎರಡು ವಿಭಾಗಗಳಾಗಿ ವಿಭಜನೆಗೊಂಡಿದ್ದರಿಂದ 2022ರದಲ್ಲಿ ರಾಜಕೀಯ ಜಟಾಪಟಿ ನಡೆಯಿತು. ಜೂನ್‌ನಲ್ಲಿ, ಶಿವಸೇನಾ ನಾಯಕ ಏಕನಾಥ್ ಶಿಂಧೆ ತಮ್ಮದೇ ಪಕ್ಷದ ವಿರುದ್ಧ ಬಂಡಾಯವೆದ್ದರು. ಅವರು ಹತ್ತಾರು ಶಾಸಕರೊಂದಿಗೆ ಗುವಾಹಟಿಗೆ ಪ್ರಯಾಣ ಬೆಳೆಸಿದ್ದರು. ಎಂವಿಎ ಸರ್ಕಾರದ ಪತನವಾಯಿತು. ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಬಿಜೆಪಿ ಬೆಂಬಲದೊಂದಿಗೆ ಶಿಂಧೆ ಮಹಾರಾಷ್ಟ್ರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾದರು.

ನ್ಯಾಷನಲ್ ಹೆರಾಲ್ಡ್ ಕೇಸ್

ನ್ಯಾಷನಲ್ ಹೆರಾಲ್ಡ್ ಕೇಸ್ 2022 ರಲ್ಲಿ ಗಾಂಧಿ ಕುಟುಂಬವನ್ನು ಕಾಡಿತು. ಈ ವರ್ಷ ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಗ ರಾಹುಲ್ ಗಾಂಧಿ ಅವರು ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಮೊದಲ ಬಾರಿಗೆ ಹಾಜರಾಗಿದ್ದರು. ಜುಲೈನಲ್ಲಿ ಸೋನಿಯಾ ಗಾಂಧಿ  ಇಡಿ ಮುಂದೆ ಮೂರು ಬಾರಿ ಹಾಜರಾದರು. ಆದರೆ ರಾಹುಲ್ ಗಾಂಧಿ ಐದು ಬಾರಿ ವಿಚಾರಣೆಗೊಳಗಾದರು.

ಕೇಂದ್ರ ತನಿಖಾ ಸಂಸ್ಥೆಗಳ ದಾಳಿ

ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ)ಇದು ಅಭೂತಪೂರ್ವ ವರ್ಷವಾಗಿತ್ತು . ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನೀಷ್ ಸಿಸೋಡಿಯಾ, ಡಿಕೆ ಶಿವಕುಮಾರ್ ಮತ್ತು ಇತರ ಹಲವು ಉನ್ನತ ನಾಯಕರನ್ನು ಇಡಿ ವಿಚಾರಣೆ ನಡೆಸಿತು. ಶಿವಸೇನಾ ಸಂಸದ ಸಂಜಯ್ ರಾವುತ್, ಆಪ್ ಸಚಿವ ಸತ್ಯೇಂದ್ರ ಜೈನ್ ಮತ್ತು ಮಹಾರಾಷ್ಟ್ರದ ಮಾಜಿ ಸಚಿವರಾದ ಅನಿಲ್ ದೇಶಮುಖ್ ಮತ್ತು ನವಾಬ್ ಮಲಿಕ್ ಅವರನ್ನು ಇಡಿ ಬಂಧಿಸಿದೆ.

ಎಎಪಿ ವಿಜಯದ ನಗೆ

2022 ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಮಹತ್ವದ ವರ್ಷವಾಗಿದೆ ಇತ್ತೀಚೆಗೆ ಮುಕ್ತಾಯಗೊಂಡ ಅಸೆಂಬ್ಲಿ ಚುನಾವಣೆಯಲ್ಲಿ ಪಿಎಂ ಮೋದಿಯವರ ತವರು ರಾಜ್ಯ ಗುಜರಾತ್‌ನಲ್ಲಿ ಶೇಕಡಾ 13 ರಷ್ಟು ಮತಗಳನ್ನು ಗಳಿಸಿದ ನಂತರ ಅದು ರಾಷ್ಟ್ರೀಯ ಪಕ್ಷವಾಯಿತು. ಐದು ಸ್ಥಾನಗಳನ್ನು ಗೆದ್ದು ಪಶ್ಚಿಮ ರಾಜ್ಯದಲ್ಲಿ ಖಾತೆ ತೆರೆಯಿತು. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಬಿಜೆಪಿಯ 15 ವರ್ಷಗಳ ಪ್ರಾಬಲ್ಯವನ್ನು ಕೊನೆಗೊಳಿಸುವಲ್ಲಿ ಎಎಪಿ ಯಶಸ್ವಿಯಾಗಿದೆ. ಈ ಯಶೋಗಾಥೆ ಇಲ್ಲಿಗೆ ಮುಗಿಯುವುದಿಲ್ಲ, 10 ವರ್ಷದ ಪಕ್ಷ ಪಂಜಾಬ್‌ನಲ್ಲಿ  ಇತಿಹಾಸ ಸೃಷ್ಟಿಸಿದೆ. ಇಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು ಎಎಪಿ ಸರ್ಕಾರ ರಚಿಸಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?