AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

9 ಅತಿಥಿಗೃಹಗಳಿಗೆ ಮರುನಾಮಕರಣ ಮಾಡಿದ ಯೋಗಿ ಸರ್ಕಾರ; ಹಿಂದು ನದಿ, ಧಾರ್ಮಿಕ ಸ್ಥಳಗಳ ಹೆಸರು

ಹೆಸರು ಬದಲಾವಣೆ ಪ್ರಕ್ರಿಯೆ ಇಷ್ಟಕ್ಕೇ ಮುಗಿಯುವುದಿಲ್ಲ. ಬರುವ ದಿನಗಳಲ್ಲಿ ಉತ್ತರ ಪ್ರದೇಶದ ಸುಮಾರು 12 ಜಿಲ್ಲೆಗಳು, ಪಟ್ಟಣಗಳ ಮರುನಾಮಕರಣ ಮಾಡಲು ಉತ್ತರಪ್ರದೇಶ ಮುಖ್ಯಮಂತ್ರಿ ನೇತೃತ್ವದಲ್ಲಿ ಅಲ್ಲಿನ ಸಚಿವರು, ಶಾಸಕರೆಲ್ಲ ಸೇರಿ ಯೋಜನೆ ರೂಪಿಸುತ್ತಿದ್ದಾರೆ.

9 ಅತಿಥಿಗೃಹಗಳಿಗೆ ಮರುನಾಮಕರಣ ಮಾಡಿದ ಯೋಗಿ ಸರ್ಕಾರ; ಹಿಂದು ನದಿ, ಧಾರ್ಮಿಕ ಸ್ಥಳಗಳ ಹೆಸರು
ಯೋಗಿ ಆದಿತ್ಯನಾಥ
TV9 Web
| Edited By: |

Updated on: Oct 08, 2021 | 4:37 PM

Share

ಲಖನೌ: ಇಷ್ಟು ದಿನ ಜಿಲ್ಲೆಗಳು, ಸ್ಥಳಗಳ ಹೆಸರು ಬದಲಿಸುತ್ತಿದ್ದ ಉತ್ತರ ಪ್ರದೇಶ ಸರ್ಕಾರ (Uttar Pradesh Government) ಇದೀಗ 9 ಅತಿಥಿಗೃಹಗಳಿಗೆ (Guest Houses) ಮರುನಾಮಕರಣ ಮಾಡಿದೆ. ಲಖನೌ, ದೆಹಲಿ, ಮುಂಬೈ ಮತ್ತು ಕೋಲ್ಕತ್ತಗಳಲ್ಲಿ ಇರುವ ಯುಪಿ ಸರ್ಕಾರಕ್ಕೆ ಸೇರಿದ ಅತಿಥಿಗೃಹಗಳ ಹೆಸರು ಬದಲಿಸಿದ್ದು, ಅವಕ್ಕೆಲ್ಲ ಇದೀಗ ಹಿಂದೂ ನದಿಗಳು ಮತ್ತು ಹಿಂದು ಧಾರ್ಮಿಕ ಪ್ರದೇಶಗಳ ಹೆಸರನ್ನು ಇಡಲಾಗಿದೆ.  

ದೆಹಲಿಯಲ್ಲಿರುವ ಯುಪಿ ಭವನಕ್ಕೆ ಉತ್ತರ ಪ್ರದೇಶ ಭವನ ಸಂಗಮ್​​ ಎಂದು ಹೆಸರಿಡಲಾಗಿದ್ದು, ಯುಪಿ ಸದನಕ್ಕೆ ತ್ರಿವೇಣಿ ಎಂದು ನಾಮಕರಣವಾಗಿದೆ. ಲಖನೌದ ಮಹಾತ್ಮ ಗಾಂಧಿ ಮಾರ್ಗದಲ್ಲಿರುವ ವಿವಿಐಪಿ ಗೆಸ್ಟ್​​ಹೌಸ್​​ಗೆ ಸಾಕೇತ್​ ವಿವಿಐಪಿ ಗೆಸ್ಟ್​​ ಹೌಸ್​​ ಎಂಬ ಹೆಸರಿಡಲಾಗಿದೆ.  ದಲಿಬಾಗ್​​​ ವಿಐಪಿ ಅತಿಥಿಗೃಹಕ್ಕೆ ಯಮುನಾ, ವಿಕ್ರಮಾದಿತ್ಯ ಮಾರ್ಗದಲ್ಲಿರುವ ಅತಿಥಿಗೃಹಕ್ಕೆ ಗೋಮತಿ ಮತ್ತು ಮೀರಾಬಾಯಿ ಮಾರ್ಗದಲ್ಲಿರುವ ಸರ್ಕಾರಿ ಗೆಸ್ಟ್​ಹೌಸ್​​ಗೆ ಸರಯೂ, ಬಟ್ಲರ್ ಪ್ಯಾಲೇಸ್​ ಕಾಲನಿಯಲ್ಲಿರುವ ಗೆಸ್ಟ್​​ಹೌಸ್​​ಗೆ ನೈಮಿಶಾರಣ್ಯ  ಎಂದು ಹೆಸರಿಡಲಾಗಿದೆ ಎಂದು ಸರ್ಕಾರಿ ಕಚೇರಿ ತಿಳಿಸಿದೆ.  ಮುಂಬೈನಲ್ಲಿ ಇರುವ ಉತ್ತರಪ್ರದೇಶ ಸರ್ಕಾರಕ್ಕೆ ಸೇರಿದ ಅತಿಥಿ ಗೃಹವನ್ನು ಇನ್ನು ವೃಂದಾವನ ಎಂದು ಕರೆಯಲಾಗುವುದು, ಹಾಗೇ ಕೋಲ್ಕತ್ತದಲ್ಲಿರುವ ಯುಪಿ ಸರ್ಕಾರಿ ಗೆಸ್ಟ್​​ಹೌಸ್​​ನ್ನು ಗಂಗಾ ಎಂದು ಹೆಸರಿಸಲಾಗುವುದು ಎಂದೂ ಹೇಳಲಾಗಿದೆ.

ಹೆಸರು ಬದಲಾವಣೆ ಪ್ರಕ್ರಿಯೆ ಇಷ್ಟಕ್ಕೇ ಮುಗಿಯುವುದಿಲ್ಲ. ಬರುವ ದಿನಗಳಲ್ಲಿ ಉತ್ತರ ಪ್ರದೇಶದ ಸುಮಾರು 12 ಜಿಲ್ಲೆಗಳು, ಪಟ್ಟಣಗಳ ಮರುನಾಮಕರಣ ಮಾಡಲು ಉತ್ತರಪ್ರದೇಶ ಮುಖ್ಯಮಂತ್ರಿ ನೇತೃತ್ವದಲ್ಲಿ ಅಲ್ಲಿನ ಸಚಿವರು, ಶಾಸಕರೆಲ್ಲ ಸೇರಿ ಯೋಜನೆ ರೂಪಿಸುತ್ತಿದ್ದಾರೆ  ಎಂದು ವರದಿಯಾಗಿದೆ.  ಸಂಭಾಲ್​​ಗೆ ಪ್ರಥ್ವಿರಾಜ್​ ನಗರ ಅಥವಾ ಕಲ್ಕಿ ನಗರ ಎಂದು ನಾಮಕರಣ ಮಾಡಬೇಕು ಎಂದು ಯುಪಿ ಪ್ರೌಢಶಿಕ್ಷಣ ಸಚಿವ ಗುಲಾಬ್​ ದೇವಿ ಇಂಗಿತ ವ್ಯಕ್ತಪಡಿಸಿದ್ದಾರೆ. ದೇವಬಂದ್​​ ಕ್ಷೇತ್ರಕ್ಕೆ ದೇವವೃಂದ ಎಂದು ಹೆಸರಿಡಬೇಕು ಎಂದು ಅಲ್ಲಿನ ಬಿಜೆಪಿ ಶಾಸಕ ಬ್ರಿಜೇಶ್​ ಸಿಂಗ್​ ಪ್ರಸ್ತಾವನೆ ಇಟ್ಟಿದ್ದಾರೆ. ಇನ್ನು ಫಿರೋಜಾಬಾದ್​​ ಜಿಲ್ಲೆಯನ್ನು ಚಂದ್ರನಗರ ಎಂದು ಬದಲಿಸಬೇಕು ಎಂಬ ನಿರ್ಣಯವನ್ನು ಫಿರೋಜಾಬಾದ್​ ಜಿಲ್ಲಾ ಪಂಚಾಯತ್​ ಈಗಾಗಲೇ ಅಂಗೀಕರಿಸಿದೆ.

ಇದನ್ನೂ ಓದಿ: ‘ನಮ್ಮ ಮನೆಯಲ್ಲೂ ಹೆಂಡತಿ ಗದರುತ್ತಾರೆ’; ‘ಅನುಬಂಧ’ ಕಾರ್ಯಕ್ರಮದಲ್ಲಿ ಅಚ್ಚರಿ ವಿಚಾರ ಬಿಚ್ಚಿಟ್ಟ ಸಿಎಂ ಬಸವರಾಜ ಬೊಮ್ಮಾಯಿ

ಲಖಿಂಪುರ್ ಖೇರಿ ಪ್ರಕರಣವು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಅವಕಾಶವನ್ನು ಹೆಚ್ಚಿಸಲಿದೆಯೇ? ಪ್ರಶಾಂತ್ ಕಿಶೋರ್ ಏನಂತಾರೆ?

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!