Aditya-L1: ಸೂರ್ಯನ ಈ ಚಿತ್ರವನ್ನು ನೀವು ನೋಡಿರಲು ಸಾಧ್ಯವೇ ಇಲ್ಲ, ಆದಿತ್ಯ-ಎಲ್1 ಸೆರೆಹಿಡಿದ ಅದ್ಭುತ ಫೋಟೋ ಇಲ್ಲಿದೆ

|

Updated on: May 17, 2024 | 3:10 PM

ಚಂದ್ರಯಾನ-3 ಯಶಸಸ್ವಿಯಾದ ನಂತರ, ಆದಿತ್ಯ ಎಲ್​​​​​​1 ಕೂಡ ಸೂರ್ಯನತ್ತ ಪ್ರಯಾಣಿಸಿ, ಮಹತ್ವ ಸಾಧನೆಯನ್ನು ಮಾಡಿದೆ. ಸೂರ್ಯನ ಸುತ್ತ ನಡೆಯುವ ಚುಟುವಟಿಕೆಗಳನ್ನು ಆದಿತ್ಯ ಎಲ್​​​1 ಅಧ್ಯಯನ ಮಾಡಲಿದೆ. ಇದರ ಜತೆಗೆ ನೀವು ಎಂದು ನೋಡಿರದ ಫೋಟೋವೊಂದನ್ನು ಈ ಮಿಷನ್​​​ ಸೆರೆಹಿಡಿದೆ.

Aditya-L1: ಸೂರ್ಯನ ಈ ಚಿತ್ರವನ್ನು ನೀವು ನೋಡಿರಲು ಸಾಧ್ಯವೇ ಇಲ್ಲ, ಆದಿತ್ಯ-ಎಲ್1 ಸೆರೆಹಿಡಿದ ಅದ್ಭುತ ಫೋಟೋ ಇಲ್ಲಿದೆ
Follow us on

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (Indian Space Research Organization ISRO) ಚಂದ್ರಯಾನ -3 ಮೂಲಕ ವಿಶ್ವವನ್ನೇ ಭಾರತದತ್ತ ನೋಡುವಂತೆ ಮಾಡಿತ್ತು. ಈ ಇತಿಹಾಸ ಸೃಷ್ಟಿಯ ನಂತರ ಇಸ್ರೋ ಸೂರ್ಯನಲ್ಲಿಗೆ ಪ್ರಯಾಣಿಸಿತ್ತು. ಆದಿತ್ಯ -ಎಲ್​​​1 (Aditya L1) ಮೂಲಕ ಸೂರ್ಯನ ಸುತ್ತ ನಡೆಯುವ ಚಟುವಟಿಕೆಯನ್ನು ಅಧ್ಯಯನ ಮಾಡುತ್ತಿದೆ. ಇದೀಗ ಆದಿತ್ಯ -ಎಲ್​​​1 ಮಹತ್ವದ ಮಾಹಿತಿಯೊಂದನ್ನು ನೀಡಿದೆ. ನಾವು ಎಂದಿಗೂ ನೋಡಿರದ ಸೂರ್ಯ ಚಿತ್ರವೊಂದನ್ನು ಆದಿತ್ಯ -ಎಲ್​​​1 ಕಳುಹಿಸಿದೆ.

ಇಸ್ರೋ ಸೆಪ್ಟೆಂಬರ್ 2 ರಂದು ಆದಿತ್ಯ -L1ನ್ನು ಉಡಾವಣೆ ಮಾಡಿತ್ತು. ಈ ಬಾಹ್ಯಾಕಾಶ ನೌಕೆಯು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಮೀ ದೂರದಲ್ಲಿದೆ. ಇದೀಗ ಆದಿತ್ಯ L1 ಸೂರ್ಯನ ಮೇಲಿರುವ ಅತಿ ದೊಡ್ಡ ಸೌರ ಮಂಡಲವನ್ನು ಪತ್ತೆ ಮಾಡಿದೆ. ಇಸ್ರೋ ಸೂರ್ಯನ ಈ ಚಿತ್ರವನ್ನು ಎಕ್ಸ್​​​ನಲ್ಲಿ ಹಂಚಿಕೊಂಡಿದೆ. ಇದು ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ ಸಹಾಯದಿಂದ ಸೆರೆಹಿಡಿಯಲಾದ ಸೂರ್ಯನ ಹೊಸ ವೀಡಿಯೊ ಎಂದು ಮಾಹಿತಿ ನೀಡಲಾಗಿದೆ.

ಆದಿತ್ಯ L1 ಮಿಷನ್‌ನ ಉದ್ದೇಶವೇನು?

ಇಸ್ರೋ ಪ್ರಕಾರ, ಸೌರವ್ಯೂಹದಲ್ಲಿ ಸೂರ್ಯನ ತಾಪಮಾನ, ಸೂರ್ಯನ ಮೇಲ್ಮೈಯಲ್ಲಿ ನಡೆಯುವ ಚಟುವಟಿಕೆಗಳು ಮತ್ತು ಸೂರ್ಯನ ಜ್ವಾಲೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಅಧ್ಯಯನ ಮಾಡಲು ಆದಿತ್ಯ -ಎಲ್​​​1ನ್ನು ಅಲ್ಲಿಗೆ ಕಳುಹಿಸಲಾಗಿದೆ. ಇದಕ್ಕೆ 400 ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 2019ರ ಚುನಾವಣೆ ವೇಳೆ ​ನನ್ನ ಮೇಲೆ ಗುಂಡಿನ ದಾಳಿಗೆ ಯತ್ನಿಸಿತ್ತು ಕಾಂಗ್ರೆಸ್: ಸ್ಮೃತಿ ಇರಾನಿ

ಆದಿತ್ಯ L1ನಲ್ಲಿ ಏಳು ಪೇಲೋಡ್‌ಗಳು

ಆದಿತ್ಯ L1 ನಲ್ಲಿ ಏಳು ವೈಜ್ಞಾನಿಕ ಪೇಲೋಡ್‌ಗಳನ್ನು ಬಳಸಲಾಗಿದೆ. ಈ ಎಲ್ಲಾ ಪೇಲೋಡ್‌ಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ವಿದ್ಯುತ್ಕಾಂತೀಯ ಕಣ ಮತ್ತು ಕಾಂತೀಯ ಕ್ಷೇತ್ರ ಶೋಧಕಗಳನ್ನು ಬಳಸಿಕೊಂಡು ಸೂರ್ಯನ ದ್ಯುತಿಗೋಳ, ವರ್ಣಗೋಳ ಮತ್ತು ಹೊರಗಿನ ಪದರವನ್ನು ವೀಕ್ಷಿಸಲು ಈ ಪೇಲೋಡ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ