AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಸಭೆಯಲ್ಲಿ ಗಂಜಲ, ಯೋಗಾಸನಗಳ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದ ಆಸ್ಕರ್ ಫರ್ನಾಂಡಿಸ್​ಗೆ ವಾಜಪೇಯಿ ಆರೋಗ್ಯದ ಬಗ್ಗೆಯೂ ಕಾಳಜಿಯಿತ್ತು

ಎರಡು ಪ್ರತ್ಯೇಕ ಪಕ್ಷಗಳಲ್ಲಿರುವವರು ಪರಸ್ಪರರನ್ನು ಪ್ರೀತಿಸುವುದಿರಲಿ, ಗೌರವದಿಂದ ಮಾತನಾಡುವುದೂ ಅಪರೂಪದಲ್ಲಿ ಅಪರೂಪವಾಗುತ್ತಿದೆ. ಆದರೆ ಇಂದು ನಿಧನರಾದ ಕಾಂಗ್ರೆಸ್​ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ವ್ಯಕ್ತಿತ್ವ ಇಂಥ ನ್ಯೂನತೆಗಳಿಂದ ಮುಕ್ತವಾಗಿತ್ತು.

ರಾಜ್ಯಸಭೆಯಲ್ಲಿ ಗಂಜಲ, ಯೋಗಾಸನಗಳ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದ ಆಸ್ಕರ್ ಫರ್ನಾಂಡಿಸ್​ಗೆ ವಾಜಪೇಯಿ ಆರೋಗ್ಯದ ಬಗ್ಗೆಯೂ ಕಾಳಜಿಯಿತ್ತು
ರಾಜ್ಯಸಭೆಯಲ್ಲಿ ಆಸ್ಕರ್ ಫರ್ನಾಂಡಿಸ್
TV9 Web
| Edited By: |

Updated on:Sep 13, 2021 | 9:47 PM

Share

ಗಂಜಲ, ಯೋಗಾಸನಗಳನ್ನು ಒಪ್ಪುವವರನ್ನು ಬಲಪಂಥೀಯರು ಎಂದು ಸಾರಾಸಗಟಾಗಿ ವ್ಯಾಖ್ಯಾನಿಸುವುದು ಈಗಿನ ರೂಢಿ. ರಾಜಕಾರಿಣಿಗಳಂತೂ ಈ ಎರಡೂ ಪದಗಳನ್ನು ಬಳಸುವಾಗ ಎಚ್ಚರಿಕೆ ವಹಿಸುತ್ತಾರೆ. ಇನ್ನು ಎರಡು ಪ್ರತ್ಯೇಕ ಪಕ್ಷಗಳಲ್ಲಿರುವವರು ಪರಸ್ಪರರನ್ನು ಪ್ರೀತಿಸುವುದಿರಲಿ, ಗೌರವದಿಂದ ಮಾತನಾಡುವುದೂ ಅಪರೂಪದಲ್ಲಿ ಅಪರೂಪವಾಗುತ್ತಿದೆ. ಆದರೆ ಇಂದು ನಿಧನರಾದ ಕಾಂಗ್ರೆಸ್​ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ವ್ಯಕ್ತಿತ್ವ ಇಂಥ ನ್ಯೂನತೆಗಳಿಂದ ಮುಕ್ತವಾಗಿತ್ತು. ಹೀಗಾಗಿಯೇ ಆಸ್ಕರ್ ಅವರನ್ನು ಅವರ ರಾಜಕೀಯ ವಿರೋಧಿಗಳೂ ಅಜಾತಶತ್ರು ಎಂದು ಗೌರವಿಸುತ್ತಿದ್ದರು.

ಕಳೆದ ವರ್ಷ ಮಾರ್ಚ್​ 18ರಂದು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಹೋಮಿಯೋಪತಿ ಹಾಗೂ ಭಾರತೀಯ ವೈದ್ಯ ಪದ್ಧತಿಗಳ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಆಯೋಗ ಸ್ಥಾಪನೆ ಕುರಿತು ಎರಡು ಮಸೂದೆಗಳನ್ನು ಮಂಡಿಸಿತ್ತು. ಅಂದು ಆಸ್ಕರ್ ಫರ್ನಾಂಡಿಸ್ ಮಾಡಿದ್ದ ಭಾಷಣ ಅವರ ವ್ಯಕ್ತಿತ್ವ ಹೇಗಿತ್ತು ಎಂಬುದಕ್ಕೆ ಉದಾಹರಣೆಯಾಗುತ್ತದೆ. ಗೋಮೂತ್ರದ ಲಾಭಗಳ ಬಗ್ಗೆ ಮಾತನಾಡಿದ್ದ ಅವರು, ವ್ಯಕ್ತಿಯೊಬ್ಬ ಗಂಜಲ ಬಳಕೆಯಿಂದ ಕ್ಯಾನ್ಸರ್ ಕಾಯಿಲೆಯಿಂದ ಮುಕ್ತವಾದ ನೆನಪು ಹಂಚಿಕೊಂಡಿದ್ದರು.

ಆಸ್ಕರ್ ಮಾತಿಗೆ ನಿಲ್ಲುವ ಮೊದಲು ಮಾತನಾಡಿದ್ದ ಕೆಲ ಬಿಜೆಪಿ ನಾಯಕರು ಗೋಮೂತ್ರದ ಪ್ರಾಮುಖ್ಯತೆ ಬಗ್ಗೆ ಉದಾಹರಣೆಗಳನ್ನು ಹೇಳಿದ್ದರು. ಆಗ ಕಾಂಗ್ರೆಸ್​ ಸದಸ್ಯರು ಬಿಜೆಪಿ ಸದಸ್ಯರ ವಿರುದ್ಧ ಹರಿಹಾಯ್ದಿದ್ದರು. ಆದರೆ ಸ್ವತಃ ಕಾಂಗ್ರೆಸ್ ನಾಯಕನೇ ಎದ್ದು ನಿಂತು ಗೋಮೂತ್ರದ ಬಗ್ಗೆ ಮಾತು ಆರಂಭಿಸಿದಾಗ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ಕಾಂಗ್ರೆಸ್ ಸದಸ್ಯರಿಗೆ ಕೆಲಕ್ಷಣ ಗೊಂದಲವಾಯಿತು.

ಆಸ್ಕರ್ ಫರ್ನಾಂಡಿಸ್ ಅವರ ಭಾಷಣದ ಕನ್ನಡ ಅನುವಾದ ಇಲ್ಲಿದೆ… ನಾನು ಗೋಮೂತ್ರದ ಬಗ್ಗೆ ಏನೇ ಮಾತಾಡಿದರು ನನ್ನ ಗೆಳೆಯ ಜೈರಾಮ್ ರಮೇಶ್​ ಕಾಲೆಳೆಯುತ್ತಾರೆ. ಮೀರತ್ ಸಮೀಪದ ಆಶ್ರಮವೊಂದಕ್ಕೆ ಹೋಗಿದ್ದೆ. ಅಲ್ಲಿ ಭೇಟಿಯಾದ ವ್ಯಕ್ತಿಯೊಬ್ಬ ಗೋಮೂತ್ರ ಸೇವನೆಯಿಂದ ತನ್ನ ಕ್ಯಾನ್ಸರ್ ಗುಣವಾಯಿತು ಎಂದು ಹೇಳಿದ್ದರು. ನನಗೆ ಮೊಣಕಾಲು ನೋವು ತೀವ್ರವಾಗಿ ಬಾಧಿಸುತ್ತಿತ್ತು. ವೈದ್ಯರು ಕೀಲು ಬದಲಿಸುವ ಶಸ್ತ್ರಚಿಕಿತ್ಸೆಗೆ ಸಲಹೆ ಮಾಡಿದ್ದರು. ಆದರೆ ನಾನು ಒಪ್ಪಲಿಲ್ಲ. ಯೋಗದ ಮೊರೆ ಹೋದೆ. ನಿಯಮಿತವಾಗಿ ವಜ್ರಾಸನವನ್ನು ಅಭ್ಯಾಸ ಮಾಡುತ್ತಾ ಆರೋಗ್ಯ ಸುಧಾರಿಸಿಕೊಂಡೆ. ಈಗ ನನಗೆ ಓಡಾಡಲು ಯಾವುದೇ ಸಮಸ್ಯೆಯಿಲ್ಲ.

ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ವಿಷಯ ನನಗೆ ತಡವಾಗಿ ತಿಳಿಯಿತು. ಮೊದಲೇ ಗೊತ್ತಾಗಿದ್ದರೆ ಅವರ ಬಳಿಗೆ ಹೋಗಿ ವಜ್ರಾಸನ ಮಾಡಿ ಎಂದು ಮನವೊಲಿಸುತ್ತಿದ್ದೆ. ನಾನೇ ಹೇಳಿಕೊಡುತ್ತಿದ್ದೆ. ಅವರ ಸಮಸ್ಯೆಯೂ ಪರಿಹಾರವಾಗುತ್ತಿತ್ತೋನೋ.

ಅಮೆರಿಕದಲ್ಲಿ 104 ವರ್ಷದ ವ್ಯಕ್ತಿಯೊಬ್ಬನನ್ನು ಭೇಟಿಯಾಗಿದ್ದೆ. ಅವರು ಯುವಕನಂತೆ ಚಟುವಟಿಕೆಯಿಂದ ಓಡಾಡುತ್ತಿದ್ದರು. ಯೋಗ ಪದ್ಧತಿ ನಮ್ಮ ದೇಶದ ದೊಡ್ಡ ಆಸ್ತಿ. ನೀವು ಯೋಗಾಭ್ಯಾಸ ಆರಂಭಿಸಿದರೆ ಆರೋಗ್ಯದ ವಿಚಾರದಲ್ಲಿ ನೀವು ಮಾಡುವ ವೆಚ್ಚ ಅರ್ಧಕ್ಕರ್ಧ ಕಡಿಮೆಯಾಗುತ್ತದೆ. ಯೋಗ ಎನ್ನುವುದು ಒಂದು ಜೀವನ ಪದ್ಧತಿ. ವೈದ್ಯರ ಬಳಿಗೆ ಹೋಗುವ ಮೊದಲ ಮನೆ ವೈದ್ಯ ಮಾಡಿನೋಡಬೇಕು. ಅನೇಕ ಸಂದರ್ಭಗಳಲ್ಲಿ ನಮ್ಮ ಭಾರತೀಯ ವೈದ್ಯಕೀಯ ಪರಂಪರೆಯು ಸಾಕಷ್ಟು ಪರಿಹಾರಗಳನ್ನು ಒದಗಿಸುತ್ತದೆ.

ಹೋಮಿಯೋಪತಿ ಮತ್ತು ಭಾರತೀಯ ವೈದ್ಯಪದ್ಧತಿಯನ್ನು ಪ್ರೋತ್ಸಾಹಿಸುವ ಪ್ರಯತ್ನಗಳಿಗೆ ನನ್ನ ಬೆಂಬಲವಿದೆ. ಆದರೆ ಯೋಗ ಮತ್ತು ನಿಸರ್ಗ ಚಿಕಿತ್ಸೆಯನ್ನು ಸರ್ಕಾರ ನಿರ್ಲಕ್ಷಿಸುತ್ತಿರುವುದಕ್ಕೆ ನನ್ನ ವಿರೋಧವಿದೆ. ಯೋಗ ಮತ್ತು ನಿಸರ್ಗ ಚಿಕಿತ್ಸೆಗೂ ಪ್ರೋತ್ಸಾಹ ಸಿಗುವಂತೆ ಈ ಮಸೂದೆಗಳಲ್ಲಿ ಬದಲಾವಣೆ ಮಾಡಬೇಕು. ಅಥವಾ ಅವರೆಡೂ ಒಳಗೊಳ್ಳುವಂತೆ ಪ್ರತ್ಯೇಕ ಮಸೂದೆ ಮಂಡಿಸಬೇಕು. ಇದು ನನ್ನ ಆಗ್ರಹ.

(Congress leader Oscar Fernandes Is in Favor of Cow Urine Yogasana Naturopathy)

ಇದನ್ನೂ ಓದಿ: Obitury: ಕಾಂಗ್ರೆಸ್​ ಪಕ್ಷದ ಆಪದ್ಬಾಂಧವ, ಸೋನಿಯಾ ಗಾಂಧಿಯ ಆಪ್ತ ಆಸ್ಕರ್ ಫರ್ನಾಂಡಿಸ್

ಇದನ್ನೂ ಓದಿ: ಪೋತು ಬಲೆ ಆಸ್ಕರಣ್ಣ, ಕಾಲನ ಗರ್ಭ ಸೇರಿದ ಆಸ್ಕರ್‌ ಫರ್ನಾಂಡಿಸ್: ಪುರುಷೋತ್ತಮ ಬಿಳಿಮಲೆ ಬರಹ

Published On - 8:24 pm, Mon, 13 September 21

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್