AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mangaluru Cooker Blast: ಡಿಕೆ ಶಿವಕುಮಾರ್ ಹೇಳಿಕೆ ಕಾಂಗ್ರೆಸ್​ ಪಕ್ಷಕ್ಕೆ ವರದಾನವೋ?

ಶಿವಕುಮಾರ್ ನೀಡಿದ ವಿವಾದಯುತ ಹೇಳಿಕೆ ಭಯೋತ್ಪಾದಕ ಸಂಘಟನೆಗಳಿಗೆ ತುಂಬಾ ಅನುಕೂಲ ಮಾಡಿಕೊಡುವ ಸಾಧ್ಯತೆ ಇದೆ ಮತ್ತು ಇಂತಹ ಸಂಘಟನೆಗಳ ನಾಯಕರು ಬೇಡ ಬೇಡ ಎಂದರೂ ಶಿವಕುಮಾರ್ ಅವರಿಗೆ ಸಹಾನುಭೂತಿ ತೋರಿಸಿದರೆ ಮುಂದೇನಾಗಬಹುದು?

Mangaluru Cooker Blast: ಡಿಕೆ ಶಿವಕುಮಾರ್ ಹೇಳಿಕೆ ಕಾಂಗ್ರೆಸ್​ ಪಕ್ಷಕ್ಕೆ ವರದಾನವೋ?
ಡಿಕೆ ಶಿವಕುಮಾರ್, ಸ್ಫೋಟಗೊಂಡಿರುವ ಕುಕ್ಕರ್
Follow us
ಡಾ. ಭಾಸ್ಕರ ಹೆಗಡೆ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 17, 2022 | 6:47 PM

ಯಾವುದು ಆಗಬಾರದಿತ್ತೋ ಅದು ಆಗಿದೆ. ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟದ (Mangaluru cooker blast) ವಿಚಾರ ಈಗ ರಾಜಕಾರಣಿಗಳ ಆಟದ ವಸ್ತು ಆಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar), ಮಂಗಳೂರು ಕುಕ್ಕರ್ ಸ್ಫೋಟದ ವಿಚಾರಕ್ಕೆ ರಾಜಕೀಯ ಬೆರೆಸಿ ಇದರ ದಿಕ್ಕು ತಪ್ಪಿಸಿದಂತೆ ಕಾಣುತ್ತಿದೆ. ಇದರಿಂದ ಆಗುವ ಪರಿಣಾಮ ಇಷ್ಟೇ-ಸ್ವತಂತ್ರವಾಗಿ ನಡೆಯುವ ತನಿಖೆ ಹಳ್ಳ ಹಿಡಿಯಬಹುದು. ಒಂದೊಮ್ಮೆ, ಬಲವಾದ ಸಾಕ್ಷ್ಯಾಧಾರಗಳನ್ನು ಕೂಡಿಹಾಕಿ ರಾಷ್ಟ್ರೀಯ ತನಿಖಾ ದಳ (National Investigating Agency), ಆರೋಪ ಪಟ್ಟಿ ಸಲ್ಲಿಸಿದರೂ ಕೂಡ, ಶಿವಕುಮಾರ್ ಅಂತವರು ಮಾಡುವ ರಾಜಕೀಯದಿಂದಾಗಿ ಇಂತಹ ಭಯೋತ್ಪಾದಕ ಕೃತ್ಯವನ್ನು ಒಪ್ಪದಿರುವ ಒಂದು ವರ್ಗ ಮಾನಸಿಕವಾಗಿ ತಯಾರಾಗಬಹುದು. ಭಯೋತ್ಪಾದನೆಯನ್ನು ಒಪ್ಪಿಕೊಳ್ಳುವ ಜನ ಅಥವಾ ಸಂಸ್ಥೆಗಳಿಗೆ ಶಿವಕುಮಾರ್ ಅವರ ಹೇಳಿಕೆಗಳು ವರದಾನವಾಗಿ ಪರಿಣಮಿಸಲೂಬಹುದು. ಇಂತಹ ಸಂಘಟನೆಗಳು ಏನು ಮಾಡುತ್ತವೆ ಎನ್ನುವುದನ್ನು ಹೊಸದಾಗಿ ಹೇಳಬೇಕಿಲ್ಲ- ಒಂದಲ್ಲ ಒಂದು ಪಿಳ್ಳೆ ನೆವ ಹೇಳಿ, ರಾಜಕೀಯ ವಿಚಾರವನ್ನು ಭಯೋತ್ಪಾದನೆಗೆ ಬೆರೆಸಿ ಎನ್ಐಎ ಮಾಡುವ ಕೆಲಸವನ್ನು ಮಣ್ಣುಪಾಲು ಮಾಡುವ ಪ್ರಯತ್ನ ಮಾಡಬಹುದು; ಆರೋಪಪಟ್ಟಿಯನ್ನು ತಿರಸ್ಕರಿಸಿ, ಭಯೋತ್ಪಾದನೆಯನ್ನು ಸಮರ್ಥಿಸುವ ಪರಿಭಾಷೆ ಹುಟ್ಟುಹಾಕುವ ಸಾಧ್ಯತೆಯನ್ನು ತಳ್ಳಿ ಹಾಕಲು ಆಗಲ್ಲ; ಭಯೋತ್ಪಾದನೆಯಲ್ಲಿ ನಿರತರಾಗಿರುವ ಕುಖ್ಯಾತ ಅಂತರಾಷ್ಟ್ರೀಯ ತಂಡಗಳು ಭಾರತದಿಂದ ಮತ್ತು ಕರ್ನಾಟಕದಿಂದ ಹೊಸ ಕುಡಿ ಹುಡುಕಿ ತಮ್ಮ ತಂಡಕ್ಕೆ ಸೆಳೆಯುವ ಪ್ರಯತ್ನಕ್ಕೆ ಇಂತಹ ಬೆಳವಣಿಗೆ ನೆರವಾದರೂ ಆಶ್ಚರ್ಯವಾಗಬೇಕಿಲ್ಲ. ಇಲ್ಲಿಯವರೆಗೆ ನಡೆದ ತನಿಖೆಯಿಂದ ಇದು ಭಯೋತ್ಪಾದನೆ ಕೃತ್ಯ ಎಂಬುದು ತಿಳಿದುಬಂದ ವಿಚಾರವಾಗಿದೆ.

ಕಾಂಗ್ರೆಸ್ ಸೆಲ್ಫ ಗೋಲ್? ಇಂಗ್ಲಿಷಿನಲ್ಲಿ ಒಂದು ಮಾತಿದೆ. Scoring a self goal ಅಥವಾ shot in the foot. ಇವೆರಡನ್ನು ಶಿವಕುಮಾರ್ ಮಾಡಿದಂತಿದೆ. ಒಂದು ವಿವಾದ ಹುಟ್ಟು ಹಾಕಿ ಲಾಭ ಪಡೆಯಲು ಹೋಗಿ ಮುಖಭಂಗ ಅನುಭವಿಸುವುದು ಈ ಎರಡು ಮಾತಿನ ಅರ್ಥ. ಬಿಜೆಪಿಯನ್ನು ಹಿಮ್ಮೆಟ್ಟಿಸಲು ಹೊರಟಿರುವ ಶಿವಕುಮಾರ್ ಅವರಿಗೆ ಪ್ರಾಯಶಃ ಇದರ ಗಾಂಭೀರ್ಯ ಗೊತ್ತಾಗಿರಲಿಕ್ಕಿಲ್ಲ. ಅಥವಾ ಇನ್ನು ಒಂದು ಕಾರಣ ಇದ್ದರೂ ಇರಬಹುದು. ಪ್ರತಿ ಬಾರಿ ಶಂಕಿತ ಉಗ್ರ ದಾಳಿ ಆದಾಗ, ಅದನ್ನು ಶತಾಯ ಗತಾಯ ಬಿಜೆಪಿ ಮಾಡಿದ ಕುತಂತ್ರ ಎಂದು ಬಿಂಬಿಸುವ ಕಾಂಗ್ರೆಸ್ ಪಕ್ಷದ ತಂತ್ರವಾಗಿಯೇ ಶಿವಕುಮಾರ್ ಅವರ ಹೇಳಿಕೆ ಇದೆಯೇನೋ ಎಂಬಂತೆ ಭಾಸವಾಗುತ್ತದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಕುಕ್ಕರ್ ಸ್ಫೋಟ ಹೇಳಿಕೆಗೆ ಬಿಜೆಪಿ ಗರಂ; ಇದು ಚುನಾವಣಾ ಓಲೈಕೆಯ ತಂತ್ರ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಮುಂಬಯಿ ದಾಳಿಯ ನಂತರ, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಹೇಳಿದ ಹೇಳಿಕೆ ಬಹಳ ವಿವಾದ ಹುಟ್ಟು ಹಾಕಿತ್ತು. “ದಾಳಿಯಲ್ಲಿ ಮಡಿದ ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ನನಗೆ ಹೇಳಿದ್ದರು-ಹಿಂದೂ ಸಂಘಟನೆಗಳಿಂದ ನನಗೆ ಬೆದರಿಕೆ ಇದೆ ಎಂದು”. ಆಮೇಲೆ ಅದನ್ನು ಸಾಬೀತುಪಡಿಸಲಾಗದೇ ತಮ್ಮ ಮಾತನ್ನು ಹಿಂಪಡೆದಿದ್ದರು.

ಅದಕ್ಕೂ ಹಿಂದೆ, 2008 ರಲ್ಲಿ ದೆಹಲಿಯಲ್ಲಿ ನಡೆದ ಭಯೋತ್ಪಾದಕರ ಹತ್ಯೆ ಕೇಸನ್ನು ಕಾಂಗ್ರೆಸ್ ನಾಯಕರು ಬಹಳ ದಿನ ಒಪ್ಪಿಕೊಳ್ಳಲಿಲ್ಲ. ‘ಬಾತ್ಲಾ ಹೌಸ್ ಹತ್ಯೆ’ (Batla House Encounter) ಎಂದೇ ಪ್ರಸಿದ್ಧವಾದ ಆ ಘಟನೆಯಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರ ಹತ್ಯೆ ಆಗಿತ್ತು. ಅದನ್ನು ಕಾಂಗ್ರೆಸ್ ನಾಯಕರೇ stage-managed ಎಂದು ಹೇಳಿದ್ದರು. ಆದರೆ, ಯಾವಾಗ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಯಿತೋ ಆಗ, ಅದೇ ನಾಯಕರು ತಮ್ಮ ಹೇಳಿಕೆ ಹಿಂಪಡೆದರು. ಒಂದು ಹಂತದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕೂಡ ಇದೇ ರೀತಿಯ ನಿಲುವು ತಳೆದಿದ್ದರು ಎಂದು ಹೇಳಲಾಯಿತು. ಆದರೆ, ಹೊರಗೆ ಬಂದು ತಮ್ಮ ನಿಲುವು ಹೇಳದಿದ್ದುದರಿಂದ ಅವರು ಹೇಳಿದ್ದಾರೆ ಎನ್ನುವ ಮಾತನ್ನು ಬರೀ ಗಾಳಿಮಾತೆಂದು ಈಗ ಹೇಳಬೇಕಾಗುತ್ತದೆ.

ಇದನ್ನೂ ಓದಿ: ನಾನು ಹೇಳಿದ್ದು ಸತ್ಯ ಸತ್ಯ ಸತ್ಯ: ಕುಕ್ಕರ್ ಬಾಂಬ್​ ಸ್ಫೋಟದ ಬಗ್ಗೆ ನೀಡಿದ ಹೇಳಿಕೆ ಸಮರ್ಥಿಸಿಕೊಂಡ ಡಿಕೆಶಿ

ಒಂದು ಹಂತದಲ್ಲಿ ಪಿ. ಚಿದಂಬರಂ ಅವರು ದೇಶದ ಗ್ರಹ ಸಚಿವರಾಗಿದ್ದಾಗ ಹುಟ್ಟಿದ ಹಿಂದೂ ಭಯೋತ್ಪಾದನೆ ಸಂಘಟನೆಗಳ ಬಗ್ಗೆ ಬಹಳ ಚರ್ಚೆ ನಡೆಯಿತು. ಆ ಸಮಯದಲ್ಲಿ ತಮ್ಮನ್ನು ಭೇಟಿ ಆದ ವಿದೇಶಿ ನಾಯಕರ ತಂಡಕ್ಕೆ, ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, ಈ ಬಲಪಂಥೀಯ ಭಯೋತ್ಪಾದನೆ ಬಹಳ ಅಪಾಯ ಎಂದಿದ್ದು ಈಗ ಇತಿಹಾಸ. ಆದರೆ, ಸ್ವತಂತ್ರ ಹಿಂದೂ ಭಯೋತ್ಪಾದನೆ ಎಂಬ ‘ಇಸಂ’ ಮುಂದೆ ಮುಂದುವರಿದಂತೆ ಕಂಡುಬಂದಿಲ್ಲ. ಅಥವಾ ಅದರ ಕುಕೃತ್ಯಕ್ಕೆ ಸಾಕ್ಷ್ಯಾಧಾರಗಳು ಸಿಗಲಿಲ್ಲ. ಇದು ಒಂದೆಡೆ ಆದರೆ, ಇನ್ನೊಂದೆಡೆ, ಸದಾ ಕಿರುಕುಳದಿಂದ (persecuction mentality) ಅಥವಾ ತುಳಿತಕ್ಕೆ ಒಳಗಾಗಿ ಉಸಿರಾಡಲು ಜಾಗವಿಲ್ಲದಿದ್ದರೆ, ಅಂತಹ ಸಮಾಜದ ಜನ ಭಯೋತ್ಪಾದನೆಗೆ ತೊಡಗುತ್ತಾರೆ ಎಂಬ ಸಮಾಜಶಾಸ್ತ್ರೀಯ ಅಧ್ಯಯನಗಳನ್ನು ಸುಳ್ಳು ಮಾಡುವಂತೆ, ತುಂಬಾ ವಿದ್ಯಾವಂತರೆ ಇಂತ ಕುಕೃತ್ಯಕ್ಕೆ ಇಳಿಯುತ್ತಿರುವುದು.

ಈ ನಡುವೆ ಕೇಂದ್ರ ಸರಕಾರ ಪಿಎಫ್ಐನ್ನು ಇತ್ತೀಚೆಗೆ ನಿಷೇಧಿಸಿತು. ಆ ಸಂಘಟನೆಗಳಿಂದ ಹೊರಬಂದಿರುವವರಿಗೆ ಶಿವಕುಮಾರ್ ನೀಡಿದ ವಿವಾದಯುತ ಹೇಳಿಕೆಗಳು ತುಂಬಾ ಅನುಕೂಲ ಮಾಡಿಕೊಡುವ ಸಾಧ್ಯತೆ ಇದೆ. ಇಂತಹ ಸಂಘಟನೆಗಳ ನಾಯಕರು ಬೇಡ ಬೇಡ ಎಂದರೂ ಶಿವಕುಮಾರ್ ಅವರಿಗೆ ಸಹಾನುಭೂತಿ ತೋರಿಸಿದರೆ ಮುಂದೇನಾಗಬಹುದು? ಇದು ಕುತೂಹಲಕಾರಿ ಮಾತ್ರ ಅಲ್ಲ, ಶಿವಕುಮಾರ್​ ಅವರ ಹೇಳಿಕೆ, ದೇಶ ಕಟ್ಟುವ ಕಾಂಗ್ರೆಸ್ ಪಕ್ಷದ ಮೂಲ ಸಿದ್ದಾಂತಕ್ಕೆ, ವ್ಯಂಗ್ಯ ಮತ್ತು ಕುಚೋದ್ಯವಾಗಿ ಕಾಣುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು