ನೀರಿಗಾಗಿ ಸ್ವಯಂಪ್ರೇರಿತ ಅಳಿಲು ಸೇವೆಗೆ ವಿಪುಲ ಅವಕಾಶ; ಡಾ ರವಿಕಿರಣ ಪಟವರ್ಧನ
ಕೆಲವು ದಿನಗಳ ಹಿಂದೆ ಒಂದು ಹೋಟೆಲ್ ಒಂದಕ್ಕೆ ಹೋದಾಗ ಅಲ್ಲಿ ಜನರಿಂದ ತುಂಬು ತುಳುಕುತ್ತಿತ್ತು ನಾನು ಗಮನಿಸಿದಾಗ ಹಲವು ಟೇಬಲ್ ಮೇಲಿನ ನೀರಿನ ಲೋಟದಲ್ಲಿ ಅರ್ಧ ಗ್ಲಾಸ್ ನೀರು ಬಿಟ್ಟು ಹೋಗಿದ್ದು ಹಾಗೆ ಇತ್ತು ಕೊನೆಗೆ ಅದು ಚಲ್ಲಲಾಗುತ್ತದೆ. ಉದಾಹರಣೆಗೆ ದಿನದ 10 ಗಂಟೆಗಳ ಕಾಲ ಹೋಟೆಲ್ ತೆರೆದರೆ, ದಿನಕ್ಕೆ ಸರಾಸರಿ 350 ಜನರು ಹೋಟೆಲ್‌ಗೆ ಬರುತ್ತಾರೆ. ಇದು ಶನಿವಾರ ಮತ್ತು ಭಾನುವಾರ ದ್ವಿಗುಣಗೊಳ್ಳಲಿದೆ. ಈ ಸಣ್ಣ ಹೋಟೆಲ್ ಹೀಗೆ ಎಂದಾದರೆ ದೊಡ್ಡ ಹೋಟೆಲ್‌ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿರುತ್ತವೆ.
ಹಲವು ವರ್ಷಗಳ ಹಿಂದೆ ನಾನು ಊಟ ಮಾಡಿದ ನಂತರ ನನ್ನ ಶ್ರೀಮತಿಯವರು ಹೇಳಿದ್ದು ಊಟದ ನಂತರ ಲೋಟದಲ್ಲಿಯ ಪೂರ್ಣ ನೀರನ್ನು ಮುಗಿಸಿ, ಅರ್ಥ ಲೋಟದ ನೀರಿನ ಮಹತ್ವ ಗೊತ್ತಿದ್ದವರಿಗೆ ಗೊತ್ತಿದೆ ಎಂದು. ಆ ದಿನದ ನಂತರ ಇಲ್ಲಿ ಸಭೆ ಸಭಾರಂಭಗಳಿಗೆ ಹೋದರು ಬಾಟಲಿಯಲ್ಲಿಯ ನೀರು ನೀಡಿದರೆ ಆ ಬಾಟಲಿಯಲ್ಲಿ ನೀರನ್ನು ಹೊಟ್ಟೆ ತುಂಬಿದ್ದರು ಇಬ್ಬರು ಕುಡಿದು ಬರುತ್ತೇವೆ. ಈ ಮೇಲಿನ ಮಾಹಿತಿ ಯಾಕೆ ಎಂದರೆ ಕುಡಿಯುವ ನೀರಿಗಾಗಿ ನಿಮ್ಮ ಪಾತ್ರವೇನು ಎಂದು ಯಾರಾದರೂ ಪ್ರಶ್ನಿಸಬಾರದಲ್ಲ ಅಂತ, ಯಾಕೆಂದರೆ ಹೇಳುವುದು ಅತ್ಯಂತ ಸುಲಭದ ಕೆಲಸ ಜಾರಿಗೆ ತರುವುದು ಕಠಿಣ ಕೆಲಸ. ಈ ದಿಸೆಯಲ್ಲಿ ನಮ್ಮಿಬ್ಬರ ಒಂದು ಪ್ರಯತ್ನ ಇದು.
ಅಂದರೆ ದಿನಕ್ಕೆ ಸರಾಸರಿ 350 ಜನ. ಇವರಲ್ಲಿ ಸುಮಾರು 200 ಜನರು ಕುಡಿಯದೇ ಅರ್ಧ ಅಥವಾ ಒಂದು ಲೋಟ ನೀರು ಬಿಟ್ಟು ಹೋದರು ಅದು ಸರಿಸುಮಾರು ಪ್ರತಿ ಹೋಟೆಲಿನಲ್ಲಿ 30 ಲೀಟರ್ ನೀರು ಪ್ರತಿದಿನ ಗಟಾರನ ಪಾಲಾಗಿ “ವ್ಯರ್ಥ”ವಾಗುತ್ತದೆ.ಅಂದರೆ 6000ಲೀಟರ ಎಲ್ಲಾ ಹೋಟೆಲ್ ಸೇರಿಸಿದರೆ ,ಅಂದರೆ ಹೋಟೆಲ್ ಪ್ರತಿದಿನ ಕನಿಷ್ಠ 6000 ಲೀಟರ್ಗಳಷ್ಟು “ಕುಡಿಯುವ ನೀರನ್ನು” ಗಟಾರಗೆ ಸುರಿಯುತ್ತದೆ. ಈ ನೀರು ಒಳಚರಂಡಿಯ ಮೂಲಕ ಹೋಗುತ್ತದೆ ಮತ್ತು ಅಂತಿಮವಾಗಿ ನದಿಯ ಇತರ ‘ಕೊಳಕು’ ನೀರಿನೊಂದಿಗೆ ಬೆರೆಯುತ್ತದೆ.
ಒಂದು ಮಾಹಿತಿ ಪ್ರಕಾರ, ‘ಶುದ್ಧ ನೀರಿನ ಕೊರತೆ’ಯಿಂದ ಉಂಟಾಗುವ ಅತಿಸಾರದಂತಹ ಕಾಯಿಲೆಯಿಂದ ಪ್ರತಿ 4 ಗಂಟೆಗಳಿಗೊಮ್ಮೆ ಒಬ್ಬರು ಸಾಯುತ್ತಾರೆ. ಅಂದರೆ ಒಂದೆಡೆ ಜನ ಕುಡಿಯುವ ನೀರಿಗೆ ನರಳುತ್ತಾ ಸಾಯುತ್ತಿದ್ದರೆ ಮತ್ತೊಂದೆಡೆ ಇಂತಹ ಶುದ್ಧೀಕರಿಸಿದ ನೀರು ಗಟಾರ ಸೇರುತ್ತಿದೆ.ಈ ಸಂಗತಿಗಳು ಸಾಧ್ಯವಾಗಬಹುದು ಯಾವಾಗ ಎಷ್ಟು ಬೇಕೋ ಅಷ್ಟೇ ನೀರನ್ನು ಪಡೆದುಕೊಂಡಾಗ. ಆದರೂ ನೀರು ಹೆಚ್ಚಾಗಿದ್ದರೆ ಅದನ್ನು ಪೂರ್ತಿ ನೀರು ಕುಡಿಯಿರಿ. ಇದರೊಂದಿಗೆ ನಿಮಗೆ ಬೇಕಾದಷ್ಟು ನೀರನ್ನು ಮಾತ್ರ ತೆಗೆದುಕೊಂಡು ಉಳಿದ ನೀರು ಉಳಿತಾಯವಾಗುತ್ತದೆ,
ಬಹಳ ಸಣ್ಣ ವಿಷಯ, ಹೇಳಲು ಕೇವಲ ಎರಡು ಪದಗಳು ಆದರೆ ನಿಮ್ಮ ಎರಡು ಪದಗಳು 21ಲಕ್ಷಲೀಟರ್ ನೀರನ್ನು ಉಳಿಸಬಹುದು.ಇದು ಹೊಟೆಲ್ ನ ಲೆಕ್ಕಾಚಾರ, ಮನೆ ಮನೆಯಲ್ಲೂ ಕುಡಿಯುವ ನೀರಿನ ಉಳಿತಾಯ ಅವಶ್ಯ. ಪ್ರತಿ ಸಭೆ ಸಮಾರಂಭಗಳಲ್ಲಿ, ಕಲ್ಯಾಣ ಮಂಟಪದಲ್ಲಿ ಈಬಗ್ಗೆ ವಿಶೇಷ ಮನವಿಯ ಅಗತ್ಯ.ಹೊಟೆಲಗಳ ಮೇಲೆ ಆಪಾದನೆ ಅಲ್ಲ ಉದಾಹರಣೆಯ ಅಂಕಿಅಂಶಗಳಿಗಾಗಿ. ರಾಮನಿಗೆ ಅಳಿಲು ಹೇಗೆ ಸೇವೆ ಸಲ್ಲಿಸಿದಂತೆ ಈ ನೀರಿನ ಉಳಿತಾಯಕ್ಕೆ ಸ್ವಯಂಪ್ರೇರಿತರಾಗಿ, ಕರಸೇವಕರ ರೀತಿಯಲ್ಲಿ ಯೋಚನೆ ಯೋಜನೆ ಅಗತ್ಯ.ನೀರು ಜೀವಜಲ.
ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ