
‘ಶೀಘ್ರಮೇವ ಕಲ್ಯಾಣಮಸ್ತು’ ಎಂದು ಹಿಂದಿನ ಕಾಲದಲ್ಲಿ ಹಿರಿಯರು ಮನಃಪೂರ್ವಕವಾಗಿ ಕಿರಿಯರನ್ನು ಹರಸುತ್ತಿದ್ದರು. ಅದಕ್ಕೆ ತಕ್ಕಂತೆ ಮದುವೆಗಳೂ ಜರುಗುತ್ತಿದ್ದವು. ಆದರೆ ಈಗ ಕಾಲ ಹಾಗಿಲ್ಲ. ಲೇಟ್ ಆಗಿ ಮದುವೆ ಆಗುವುದು ಲೇಟೆಸ್ಟ್ ಟ್ರೆಂಡ್ ಆಗಿಬಿಟ್ಟಿದೆ. ಮುಂದೆ ದೇಶದ ಅರ್ಥವ್ಯವಸ್ಥೆಗೆ ತೊಡಕಾಗಿ, ಸಾಮಾಜಿಕ ಪಿಡುಗಾಗುವ ಆತಂಕವೂ ಇದೆ. ಹಾಗಾದರೆ ತಡವಾಗಿ ಮದುವೆ ಆಗುವುದರ ಲಾಭವೇನು? ಕಷ್ಟ-ನಷ್ಟಗಳೇನು ಎಂದು ಈ ಪ್ರೀಮಿಯಂ ಲೇಖನದಲ್ಲಿ ಚರ್ಚಿಸಲಾಗಿದೆ. ರಮೇಶ್-ಶ್ರೀದೇವಿ ಎಂಬ ದಂಪತಿ ನಾಲ್ಕೈದು ವರ್ಷಗಳಿಂದ ತಮ್ಮ ಕಿರಿಯ ಮಗಳಿಗೆ ಮದುವೆ ಮಾಡಿಸುವ ಬಗ್ಗೆ ಚಿಂತನೆ ನಡೆಸಿದ್ದರು. ರಮೇಶ್ ನಿವೃತ್ತರಾಗಿ ಅದಾಗಲೇ ಆರು ವರ್ಷಗಳು ಕಳೆದಿವೆ. ಈ ಹಿಂದೆ ತಮ್ಮ ಹಿರಿಯ ಮಗಳ ಮದುವೆಯ ಸಂದರ್ಭದಲ್ಲೂ ಸೂಕ್ತ ವರ ಸಿಗದೇ ತಡವಾಗಿ ಮಡುವೆ ಮಾಡಿಕೊಟ್ಟಿದ್ದರು. ಈಗ ಚಿಕ್ಕ ಮಗುವಿನ ವಿಷಯದಲ್ಲೂ ಅದೇ ಪರಿಸ್ಥಿತಿ. ಕಿರಿ ಮಗಳಿಗೆ ಆಗಲೇ 36 ವರ್ಷಗಳು ಕಳೆದಿವೆ. ಇನ್ನೂ ಮದುವೆ ಯಾವಾಗ ಮಾಡ್ತೀರಿ ಎಂದು ಸಂಬಂಧಿಕರು, ಸ್ನೇಹಿತರು ಒಂದೇ ಸಮನೆ ಸಿಕ್ಕಿದ ಕಡೆಯೆಲ್ಲಾ ಕೇಳುತ್ತಿದ್ದರೆ ಏನು ಉತ್ತರ ನೀಡಬೇಕೆಂದು ತೋಚದೆ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ ಆ ಹಿರಿಯ ಪೋಷಕರು. ಹೋಗಲೀ ಅದೇ ಬಂಧು ಬಾಂಧವರಾದರೂ ಆಕೆಯ ಮದುವೆ ಬಗ್ಗೆ ಪ್ರಯತ್ನಗಳನ್ನು ನಡೆಸುತ್ತಿದ್ದಾರಾ ಅಂದರೆ ಅವರೂ ಕೈಚೆಲ್ಲಿದ್ದಾರೆ. ಇನ್ನು ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ಸಾವಿರಾರು ರೂಪಾಯಿ ಕೊಟ್ಟು ಚಂದಾದಾರರಾಗಿದ್ದೇ ಬಂತೂ ಮದುವೆ ಪ್ರಸ್ತಾಪಗಳು...
Published On - 5:15 pm, Thu, 27 June 24