AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Kannada Digital Survey : ರಮ್ಯ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಿದಕ್ಕೆ ಜನ ಹೇಳಿದ್ದೇನು ಗೊತ್ತಾ??

TV9 Kannada Digital Survey : ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಸಮೀಕ್ಷೆಯಲ್ಲಿ ರಮ್ಯ ಮಾಡಿರುವ ಟ್ವಿಟ್ ಗೆ ಒಂದಿಷ್ಟು ಜನರಿಗೆ ಅವರ ವಾದ ಸರಿಯಾಗಿದೆ ಎಂದರೆ ಇನ್ನೂ ಕೆಲವರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಅವರಿಗೆ ಟಾಂಗ್ ನೀಡಿದ್ದಾರೆ.

TV9 Kannada Digital Survey : ರಮ್ಯ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಿದಕ್ಕೆ ಜನ ಹೇಳಿದ್ದೇನು ಗೊತ್ತಾ??
ರಮ್ಯ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಿದ್ದು ಸರಿಯೇ ? ಎಂಬ ಸಮೀಕ್ಷೆ
TV9 Web
| Edited By: |

Updated on:Jun 29, 2022 | 6:39 PM

Share

ಕಾಂಗ್ರೆಸ್​ನ ಮಾಜಿ ಸಂಸದೆಯೂ ಆಗಿದ್ದ ನಟಿ ರಮ್ಯಾ ಕೊನೆಗೆ ರಾಜಕೀಯದಿಂದಲೂ ದೂರವೇ ಉಳಿದಿದ್ದರು. ಆದರೆ, ಕೆಲವು ದಿನಗಳಿಂದ ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ರಮ್ಯಾ ಅವರ ಹೆಸರು ಹರಿದಾಡುತ್ತಿದೆ. ರಮ್ಯಾ ಕಾಂಗ್ರೆಸ್​ನಿಂದ 8 ಕೋಟಿ ರೂ. ದೋಚಿಕೊಂಡು ಪರಾರಿಯಾಗಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿವೆ. ಇದಕ್ಕೆ ಕೋಪಗೊಂಡಿರುವ ಸ್ಯಾಂಡಲ್​ವುಡ್ ಪದ್ಮಾವತಿ ರಮ್ಯಾ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬಹಿರಂಗವಾಗಿಯೇ ಕಿಡಿ ಕಾರಿದ್ದಾರೆ. ಅಲ್ಲದೆ, ಈ ವಿಚಾರವಾಗಿ ಸ್ಪಷ್ಟನೆ ನೀಡಿ ನನಗೆ ಸಹಾಯ ಮಾಡಿ ಎಂದು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ (KC Venugopal) ಅವರಲ್ಲಿ ರಮ್ಯಾ ಮನವಿ ಮಾಡಿದ್ದಾರೆ.ಡಿಕೆ ಶಿವಕುಮಾರ್ ಅವರ ಬೆಂಬಲಿಗರು ನಟಿ ರಮ್ಯಾ ವಿರುದ್ಧ ವದಂತಿಗಳನ್ನು ಹರಡುತ್ತಿದ್ದಾರೆ, ಅವರನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಕೆಲವು ದಿನಗಳಿಂದ ಓಡಾಡುತ್ತಿವೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ರಮ್ಯ ಅವರನ್ನು ಕೂಡ ಟಾರ್ಗೆಟ್ ಮಾಡಿದ್ದರು. ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಒಂದು ಸಮೀಕ್ಷೆಯನ್ನು ನಡೆಸಿತ್ತು, ಸಾಮಾಜಿಕ ಜಾಲತಾಣದಲ್ಲಿ  ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಸಮೀಕ್ಷೆಯಲ್ಲಿ ಬಳಕೆದಾರರೂ ಉತ್ತಮವಾಗಿ ಭಾಗವಹಿಸಿದರು ಮತ್ತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಸಮೀಕ್ಷೆಯಲ್ಲಿ ರಮ್ಯ ಮಾಡಿರುವ ಟ್ವಿಟ್ ಗೆ ಒಂದಿಷ್ಟು ಜನರಿಗೆ ಅವರ ವಾದ ಸರಿಯಾಗಿದೆ ಎಂದರೆ ಇನ್ನೂ ಕೆಲವರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಅವರಿಗೆ ಟಾಂಗ್ ನೀಡಿದ್ದಾರೆ. ಜೊತೆಗೆ 8 ಕೋಟಿಯಷ್ಟು ವಂಚನೆ ಮಾಡಿದ್ದಾರೆ ಎಂಬ ಚರ್ಚೆಗಳು ಟಿವಿ9 ಕನ್ನಡ ಡಿಜಿಟಲ್ ಸಮೀಕ್ಷೆಯಲ್ಲಿ  ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳು ಬೇಕು ಬೇಡ

ಫೇಸ್ಬುಕ್ 

ಪುರುಷರು – 95 ಶೇಕಾಡ

ಮಹಿಳೆಯರು -2ಶೇಕಾಡ

ಪುರುಷರು– 2ಶೇಕಾಡ

ಮಹಿಳೆಯರು -1ಶೇಕಾಡ

ಇನ್ಸ್ಟಾಗ್ರಾಮ್

ಪುರುಷರು – 80ಶೇಕಾಡ

ಮಹಿಳೆಯರು -10ಶೇಕಾಡ

ಪುರುಷರು– 7ಶೇಕಾಡ

ಮಹಿಳೆಯರು -3ಶೇಕಾಡ

ಟ್ವಿಟರ್ 

ಪುರುಷರು– 70ಶೇಕಾಡ

ಮಹಿಳೆಯರು -30ಶೇಕಾಡ

ಪುರುಷರು–

ಮಹಿಳೆಯರು –

ಯೂಟ್ಯೂಬ್ 

ಪುರುಷರು– 73ಶೇಕಾಡ

ಮಹಿಳೆಯರು -10ಶೇಕಾಡ

ಪುರುಷರು– 10ಶೇಕಾಡ

ಮಹಿಳೆಯರು -7ಶೇಕಾಡ

ಇನ್ಸ್ಟಾಗ್ರಾಮ್

ಪುರುಷರು– 73ಶೇಕಾಡ

ಮಹಿಳೆಯರು -10ಶೇಕಾಡ

ಪುರುಷರು– 10ಶೇಕಾಡ

ಮಹಿಳೆಯರು -7ಶೇಕಾಡ

ಸಾರ್ವಜನಿಕರ ಅಭಿಪ್ರಾಯ 

ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಹಲವು ಅಭಿಪ್ರಾಯಗಳು ವ್ಯಕ್ತವಾಗಿದೆ.  ರಮ್ಯ ಅವರ ಬಗ್ಗೆ ಒಂದಿಷ್ಟು ಜನರು ಅವರು ಹೇಳಿರುವ ಮಾತು ಸತ್ಯ ಎಂದರೆ ಇನ್ನೂ ಕೆಲವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ ರಾಜಕೀಯವಾಗಿ ಹಲವು ಸಂಚಲನಗಳು ನಡೆಯುತ್ತಿದೆ. ಇದರ ಜೊತೆಗೆ ರಮ್ಯ ರಾಜಕೀಯಕ್ಕೆ ಮತ್ತೆ ಬರುತ್ತಾರೆ ಎಂಬ ಮಾತುಗಳು ಕೇಳಿರುತ್ತಿದೆ.

  • ಇದೇ ಕಾಂಗ್ರೆಸ್ ನವರು ಗುಂಪುಕಟ್ಚಿಕೊಂಡು ಕೋಲಾರ ಕಳೆದ ಲೋಕಸಭಾ ಚುಣಾವಣೆಯಲ್ಲಿ ಬಿ ಜೆ ಪಿ ಬಾಗಿಲಿಗೆ ಹೋಗಿ ಟಿಕೆಟ್ ಕೊಡಿಸಿ,ಸಾರ್ವಜನಿಕವಾಗಿ ಬೆಂಬಲಿಸಿ, ಗೆಲ್ಲಿಸಿದವರ ಮೇಲೆ ಮುಗಿಬೀಳಲಾಗದವರ ಕಥೆ ಇದು. ಹೆಣ್ಣುಮಗಳ ಮೇಲೆ ಮುಗಿಬೀಳೋದಾ, ನಾಚಿಕೆಯಾಗಬೇಕು –ಡಾ. ರಮೇಶ್ ಬಾಬು ವಿಎಂ
  • ತಮ್ಮ ಪಕ್ಷದಲ್ಲಿದ್ದವರನ್ನ ತಾವೇ ಮೂಲೆಗುಂಪು ಮಾಡೊದರಲ್ಲಿ ಕಾಂಗ್ರೆಸ್ ಎತ್ತಿದ ಕೈ. ಇದು ಸಂವಿಧಾನ ಶಿಲ್ಪಿ ಡಾ॥ಅಂಬೆಡ್ಕರವರನ್ನೂ ಈ ಪಕ್ಷ ಬಿಟ್ಟಿರಲಿಲ್ಲ. – ನಿಂಗರಾಜ ಹೊಸಮನಿ
  • ಸರಿ ಇದೆ, ಕಾರಣ ಕಾಂಗ್ರೆಸ್ ಪಕ್ಷದ ರಾಷ್ಟೀಯ ಜವಬ್ದಾರಿ ಸ್ಥಾನ ನಿರ್ವಹಿಸಿದವರು, ಹಾಗೂ ಮಾಜಿಸಂಸದರು, ಒಬ್ಬ ಸೆಲಬ್ರೆಟಿ ತಾರೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಕೊಂಡು ಏನೇ ಚರ್ಚಿಸಿದರು ಪಕ್ಷದ ಅಂತರಿಕ‌ಸಮಸ್ಯೆ ಚರ್ಚಿಸುವ ವೇದಿಕೆ ಇದೆ ಅಲ್ಲಿ ಚರ್ಚಿಸಲಿ ನೇರವಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನು ದೂಷುಸಿದ್ರೆ ಅದು ಪಕ್ಷವನ್ನು ದೂಷಿಶಿದಷ್ಟೇ ಸಮ ಹಾಗಾಗಿ ಈ ರೀತಿ ಮುಂದೆ ಆಗಬಾರದು ಪಕ್ಷದಲ್ಲಿ ಶಿಸ್ತು ಹಿರಿಯತನಕ್ಕೆ ಗೌರವ ಬಹಳ ಮುಖ್ಯ ಅದನ್ನು ಗಮನದಲ್ಲಿರಿಸಿ ಕಾಂಗ್ರೆಸ್ ಪಕ್ಷವನ್ನು ಮುಂದೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕು. – ಜಿ ಹರೀಶ್ ಕುಮಾರ್
  • ರಾಜಕೀಯ ಮುಖಂಡರನ್ನು ಬಿಟ್ಟು ಮಂಡ್ಯ ಭಾಗದ ಜನರನ್ನು ಪಬ್ಲಿಕ್ ಇವರ ಬಗ್ಗೆ ಏನು ಮಾತನಾಡುತ್ತಾರೆ ಎಂದು ಪರಿಶೀಲನೆ ಮಾಡಿ ನೋಡೋಣ ಇವರ ವಿರುದ್ಧ ತುಂಬಾ ಜನ ಮಾತನಾಡುತ್ತಾರೆ ಇವರಿಂದ ಏನು ಕೆಲಸ ಹಾಗಿದೆ ಮಂಡ್ಯ ಜಿಲ್ಲೆಯಲ್ಲಿ- ಸಿ ಕೆ ಪುಟ್ಟಪ್ಪ

Published On - 6:51 pm, Tue, 17 May 22

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್