AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kannada Rajyotsava 2022: ಟ್ವಿಟರ್ ಪ್ರೊಫೈಲ್​ನಲ್ಲಿ ಕನ್ನಡದಲ್ಲಿ ಹೆಸರು ಹಾಕಲು ಹಿಂಜರಿಕೆ ಏಕೆ?

ಈಗ ಕೆಲವರು ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಹೆಸರುಗಳನ್ನು ಕನ್ನಡದಲ್ಲಿ ಬರೆದಿದ್ದು ಉಂಟು. ಆದರೆ ಟ್ವಿಟರ್​ನಲ್ಲಿ ಕಡಿಮೆ. ಪ್ರತಿಯೊಬ್ಬ ಕನ್ನಡಿಗನು ತನ್ನ ಪ್ರೊಫೈಲ್​ನಲ್ಲಿ ಇಂಗ್ಲಿಷ್​ನಲ್ಲಿ ಹೆಸರು ಬರೆದುಕೊಂಡರೆ, ಮುಂದಿನ ದಿನಗಳಲ್ಲಿ ಟ್ವಿಟರ್​ನಲ್ಲಿ ಕನ್ನಡ ಮಾಯವಾಗುವುದು ಖಂಡಿತ.

Kannada Rajyotsava 2022: ಟ್ವಿಟರ್ ಪ್ರೊಫೈಲ್​ನಲ್ಲಿ ಕನ್ನಡದಲ್ಲಿ ಹೆಸರು ಹಾಕಲು ಹಿಂಜರಿಕೆ ಏಕೆ?
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Nov 01, 2022 | 12:29 PM

Share

ಇಂದಿನ ದಿನಗಳಲ್ಲಿ ಎಲ್ಲಿ ನೋಡಿದರೂ ಸೋಷಿಯಲ್ ಮೀಡಿಯಾದ್ದೇ ಹವಾ. ಅದರಲ್ಲೂ ಟ್ವಿಟರ್ ಹೆಚ್ಚಿನ ಜನ ಕನ್ನಡಿಗರು ಕೂಡ ಇದನ್ನು ಉಪಯೋಗ ಮಾಡುತ್ತಾರೆ. ಈ ಟ್ವಿಟರ್​ನಲ್ಲಿ ನಮ್ಮ ಖಾತೆಗಳಂತೂ ಇದ್ದೇ ಇರುತ್ತೆ. ಆ ಖಾತೆಗಳಲ್ಲಿ ನಮ್ಮಲ್ಲಿ ಹೆಚ್ಚಿನವರ ಹೆಸರುಗಳು ಇಂಗ್ಲೀಷ್ ಭಾಷೆಯಲ್ಲೇ ಇದೆ. ಹೀಗಿರುವಾಗ ಕನ್ನಡ ಕನ್ನಡ ಎಂದು ಬಿಗುಮಾನ ಪಡುವ ನಾವು ಈ ಟ್ವಿಟರ್​ನಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಯಾಕೆ ಹೆಸರನ್ನು ಬರೆಯಬೇಕು. ಸ್ವಚ್ಛವಾಗಿ ಕನ್ನಡದ ಪದಗಳಲ್ಲಿ ಹೆಸರನ್ನು ಬರೆಯಬಹುದಲ್ವಾ? ಕನ್ನಡವನ್ನು ಉಳಿಸುವ ಬೆಳೆಸುವ ಕಾರ್ಯ ನಮ್ಮಿಂದಾನೆ ಆರಂಭವಾಗಬಹುದಲ್ವಾ? ನಾವು ಬೇರೆಯವರಿಗೆ ಹೇಳುವ ಬದಲು ಸ್ವತಃ ನಾವೇ ನಮ್ಮ ಟ್ವಿಟರ್ ಖಾತೆಗಳಲ್ಲಿ ಕನ್ನಡ ಭಾಷೆಯಲ್ಲಿ ಹೆಸರನ್ನು ಬರೆದಹುದು ಅಲ್ವಾ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳತ್ತದೆ.

ಈಗ ಕೆಲವರು ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಹೆಸರುಗಳನ್ನು ಕನ್ನಡದಲ್ಲಿ ಬರೆದಿದ್ದು ಉಂಟು. ಆದರೆ ಟ್ವಿಟರ್​ನಲ್ಲಿ ಕಡಿಮೆ. ಪ್ರತಿಯೊಬ್ಬ ಕನ್ನಡಿಗನು ತನ್ನ ಪ್ರೊಫೈಲ್​ನಲ್ಲಿ ಇಂಗ್ಲಿಷ್​ನಲ್ಲಿ ಹೆಸರು ಬರೆದುಕೊಂಡರೆ, ಮುಂದಿನ ದಿನಗಳಲ್ಲಿ ಟ್ವಿಟರ್​ನಲ್ಲಿ ಕನ್ನಡ ಮಾಯವಾಗುವುದು ಖಂಡಿತ. ಕನ್ನಡವನ್ನು ಬೆಳೆಸುವುದು ಉಳಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಜನಗಳು ಹೇಗಪ್ಪಾ ಅಂದ್ರೆ ಒಬ್ಬ ಸಾಮಾನ್ಯ ಮನುಷ್ಯ ಏನಾದರೂ ಒಳ್ಳೆಯದನ್ನು ಮಾಡಿದರೆ ಅದನ್ನು ಅನುಕರಣೆ ಮಾಡುವವರ ಸಂಖ್ಯೆ ತುಂಬಾ ಕಮ್ಮಿ ಇರುತ್ತದೆ. ಆದರೆ ಒಬ್ಬ ಸೆಲೆಬ್ರಿಟಿ ಏನೇ ಮಾಡಿದರೂ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ ಹಾಗೂ ಜನರು ಅದನ್ನು ಅನುಕರಣೆ ಮಾಡುತ್ತಾರೆ. ಕನ್ನಡ ಭಾಷೆಯ ಬಗ್ಗೆ ಅಭಿಮಾನ ತೋರುವ ಅನೇಕ ಸೆಲೆಬ್ರಿಟಿಗಳಿದ್ದಾರೆ. ಅವರನ್ನು ಟ್ವಿಟರ್​ಗಳಲ್ಲಿ ಅನುಸರಿಸುವ ಅಭಿಮಾನಿಗಳ ಸಂಖ್ಯೆ ತುಂಬಾನೇ ಇರುತ್ತದೆ. ಅಂತಹ ಸೆಲೆಬ್ರಿಟಿಗಳು ಟ್ವಿಟರ್​ಗಳಲ್ಲಿ ತಮ್ಮ ಹೆಸರನ್ನು ಕನ್ನಡದಲ್ಲಿ ಬರೆದರೆ ಎಷ್ಟು ಚೆನ್ನಾಗಿ ಇರುತ್ತೆ ಅಲ್ವಾ.

ಇದನ್ನು ಓದಿ: ವಿಕಿಪಿಡಿಯಾದಲ್ಲಿ ಕನ್ನಡ ನಿರ್ಲಕ್ಷ್ಯ?: ಕನ್ನಡದ ಅಸ್ಮಿತೆಯ ಕೂಗು ಎಲ್ಲೆಡೆ ಕೇಳಲಿ

ಖಂಡಿತವಾಗಿಯೂ ಅವರ ಅಭಿಮಾನಿಗಳು ಕೂಡಾ ಅದನ್ನೇ ಪಾಲಿಸುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಖಾತೆಯ ಹೆಸರುಗಳನ್ನು ಕನ್ನಡದಲ್ಲೇ ಬರೆಯುತ್ತಾರೆ. ಅದನ್ನು ನೋಡಿದಾಗ ಸಾಮಾಜಿಕ ಜಾಲತಾಣದಲ್ಲೂ ನಮ್ಮ ಕನ್ನಡದ್ದೇ ಕಾರುಬಾರು ಎಂದು ನಾವು ಖಂಡಿತವಾಗಿಯೂ ಖುಷಿ ಪಡುತ್ತೇವೆ. ಭಾಷೆಯ ಅಭಿಮಾನ ಕೇವಲ ಒಂದು ದಿನ ಅಂದ್ರೆ ನವೆಂಬರ್ 1ರಂದು ಮಾತ್ರ ಸೀಮಿತವಾಗಬಾರದು. ನಾವಿರುವ ಪ್ರತಿದಿನವೂ ಕನ್ನಡ ರಾಜ್ಯೋತ್ಸವವಾಗಬೇಕು. ನಾವು ಮಾಡುವ ಸಹಿಯಿಂದ ಹಿಡಿದು ನಾವು ಪ್ರತಿನಿತ್ಯ ಬಳಸುವ ಸೋಷಿಯಲ್ ಮೀಡಿಯಾದಲ್ಲೂ ಕನ್ನಡದ ಪದ ಬಳಕೆಯನ್ನು ಮಾಡಬೇಕು.

ಮಧುಶ್ರೀ ಅಂಚನ್

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..