AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Special Invitee ಇಂದು ಅಭಿ ರಿಸೆಪ್ಷನ್: ಅಭಿಮಾನಿ ದೇವರು, ಧಾರವಾಡದ ಸೌಭಾಗ್ಯ ಸುಮಲತಾಗೆ ಸೀರೆ -ಧಾರವಾಡ ಫೇಡಾ ತರುತ್ತಿದ್ದಾಳೆ! ಏನಿದರ ‘ವಿಶೇಷ’

ಸಿನಿಮಾ ನಟ-ನಟಿಯರಿಗೆ ಅಭಿಮಾನಿಗಳಿರೋದು ಸಾಮಾನ್ಯ. ಅದರಲ್ಲಿಯೂ ಕೆಲ ನಟ-ನಟಿಯರಿಗಂತೂ ಜೀವಕ್ಕೆ ಜೀವ ಕೊಡುವಷ್ಟರ ಮಟ್ಟಿಗೆ ಅಭಿಮಾನಿಗಳು ಹುಟ್ಟುಕೊಂಡು ಬಿಡುತ್ತಾರೆ. ಅದೇ ರೀತಿ ಧಾರವಾಡದಲ್ಲೊಬ್ಬ ಬಾಲಕಿ ಇದ್ದಾಳೆ. ಆಕೆಗೆ ಹಿರಿಯ ನಟಿ, ಸಂಸದೆ ಅಂದರೆ ಪಂಚಪ್ರಾಣ (Dharwad Fan). ಆಕೆ ಉಳಿದ ಮಕ್ಕಳಂತಲ್ಲ. ಏಕೆಂದರೆ ಆಕೆ ವಿಶೇಷ ಚೇತನಳು. ಆದರೂ ಆಕೆಯ ಮನಸ್ಸಿನಲ್ಲಿ ಅಂಬರೀಷ್-ಸುಮಲತಾ (Sumalatha Ambareesh) ಬೇರೂರಿರೋದನ್ನು ನೋಡಿದರೆ ಎಂಥವರೂ ಅಚ್ಚರಿ ಪಡುತ್ತಾರೆ. ಇದೇ ಕಾರಣಕ್ಕೆ ಆಕೆ, ಆಕೆಯ ಕುಟುಂಬಕ್ಕೆ ಇದೀಗ ಅಂಬಿ ಮಗ ಅಭಿಷೇಕನ ಮದುವೆ ರಿಸೆಪ್ಷನ್ (Abhishek Ambareesh Reception) ಗೆ ಇನ್ವಿಟೇಶನ್ ಬಂದಿದೆ. ಇದೀಗ ಅವರು ರಿಸೆಪ್ಷನ್ ಗೆ ಹೋಗುತ್ತಿದ್ದಾರೆ. ಯಾರು ಆಕೆ? ಬನ್ನಿ ನೋಡಿ ಬರೋಣ...

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: ಸಾಧು ಶ್ರೀನಾಥ್​|

Updated on: Jun 07, 2023 | 5:37 AM

Share
ನಾನು ಸಮಲತಾ ಅಭಿಮಾನಿ... ಸುಮಲತಾ ಅಂದ್ರೆ ನನಗೆ ತುಂಬಾ ಇಷ್ಟ... ನನಗೆ ಅಂಬರೀಶ್ ಅಂದರೆ ತುಂಬಾ ಇಷ್ಟ... ಹೀಗೆ ಪದೇ ಪದೇ ಹೇಳುತ್ತಿರೋ ಈಕೆಯ ಹೆಸರು ಸೌಭಾಗ್ಯ ಯಮನೂರ. ಧಾರವಾಡ ನಗರದ ಮದಿಹಾಳ ಬಡಾವಣೆಯ ನಿಂಗಾಜಿ ಯಮನೂರ-ಸುಜಾತಾ ದಂಪತಿಯ ಪುತ್ರಿಯಾಗಿರೋ ಈಕೆಯ ವಯಸ್ಸು 19 ವರ್ಷ.

1 / 11
ಆದರೆ ಈಕೆಯ ಬುದ್ಧಿಮತ್ತೆ ಇರೋದು ಮಾತ್ರ ಚಿಕ್ಕಮಕ್ಕಳಂತೆ. ಹೌದು; ಈಕೆ ವಿಶೇಷ ಚೇತನಳು. ಸಾಮಾನ್ಯವಾಗಿ ವಿಶೇಷ ಚೇತನ ಮಕ್ಕಳನ್ನು ತುಂಬಾ ಜಾಗರೂಕತೆಯಿಂದಲೇ ಬೆಳೆಸಬೇಕು. ನಿಂಗಾಜಿ ಮತ್ತು ಸುಜಾತಾ ದಂಪತಿ ಸೌಭಾಗ್ಯಳನ್ನು ವಿಶೇಷ ಮಕ್ಕಳ ಶಾಲೆಗೆ ಸೇರಿಸಿ ಚೆನ್ನಾಗಿಯೇ ಬೆಳೆಸುತ್ತಿದ್ದಾರೆ. ಆದರೆ ಕಳೆದ ನಾಲ್ಕು ವರ್ಷದಿಂದ ಈಕೆಗೆ ಸುಮಲತಾ ಅಂಬರೀಶ್ ಅವರು ಅಂದ್ರೆ ಪಂಚಪ್ರಾಣವಾಗಿ ಬಿಟ್ಟಿದ್ದಾರೆ.

2 / 11
ಸುಮಲತಾ ಅಂಬರೀಶ್​ ಫೋಟೋ, ಸುದ್ದಿ ಬಂದ್ರೆ ಸಾಕು ಅದನ್ನು ಕತ್ತರಿಸಿ ಬುಕ್ ನಲ್ಲಿ ಅಂಟಿಸಿ ಬಿಡುತ್ತಾಳೆ. ಅದರ ಪಕ್ಕದಲ್ಲಿಯೇ ಸುಮಲತಾ ಅಂದ್ರೆ ನನಗೆ ಇಷ್ಟ. ಯಾಕೆ ಇಷ್ಟ ಅಂತೆಲ್ಲಾ ನಿತ್ಯವೂ ಅರ್ಧ ಪುಟ ಬರೆಯುತ್ತಾಳೆ. ಹೀಗೆ ಅನೇಕ ಪುಸ್ತಕಗಳಲ್ಲಿ ಬರೆದಿಟ್ಟಿದ್ದಾಳೆ.

3 / 11
ಅಂಬರೀಶ್​ ಅವರು ಮೃತಪಟ್ಟಾಗ ಟಿವಿಯಲ್ಲಿ ಅದನ್ನು ನೋಡಿದ ಸೌಭಾಗ್ಯ ಅವತ್ತಿನಿಂದ ಅಂಬರೀಷ್, ಸುಮಲತಾರ ಧ್ಯಾನ ಶುರು ಮಾಡಿದ್ದಾಳೆ. ಇಂಥ ಸೌಭಾಗ್ಯ ಬಗ್ಗೆ ಟಿವಿ 9 ಕಳೆದ ವರ್ಷ ಏಪ್ರಿಲ್ ನಲ್ಲಿ ವರದಿ ಪ್ರಸಾರ ಮಾಡಿತ್ತು.

4 / 11
ಈ ಹಿನ್ನೆಲೆಯಲ್ಲಿ ಅಭಿಮಾನಿ ಬಗ್ಗೆ ಎಲ್ಲ ಮಾಹಿತಿಯನ್ನು ಸುಮಲತಾ ತರಿಸಿಕೊಂಡಿದ್ದರು. ಇದೀಗ ಸೌಭಾಗ್ಯ ಹಾಗೂ ಆಕೆಯ ಕುಟುಂಬದವರಿಗೆ ಅಭಿಷೇಕ್​ ಆರತಕ್ಷತೆಯ ಇನ್ವಿಟೇಶನ್ ಬಂದಿದೆ.

5 / 11
ಅಷ್ಟೇ ಅಲ್ಲ ಸ್ವತಃ ಸುಮಲತಾ ಅವರೇ ಫೋನ್ ಮಾಡಿ, ಆರತಕ್ಷತೆಗೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಜೂನ್ 7, ಬುಧವಾರ ನಡೆಯಲಿರೋ ರಿಸೆಪ್ಷನ್ ನಲ್ಲಿ ಸೌಭಾಗ್ಯ ತನ್ನ ತಂದೆ-ತಾಯಿಯೊಂದಿಗೆ ಪಾಲ್ಗೊಳ್ಳಲಿದ್ದಾಳೆ.

6 / 11
ನಟ ಅಂಬರೀಶ್​ ಅವರು ನಿಧನರಾಗಿದ್ದಾಗ ಸೌಭಾಗ್ಯ ಟಿವಿ ನೋಡುತ್ತಾ ಕೂತಿದ್ದಳು. ಆಗ ಸುಮಲತಾ ಅಳುವುದನ್ನು, ಅವರ ಮುಖದ ಮೇಲಿನ ದುಃಖದ ಛಾಯೆಯನ್ನೇ ನೋಡುತ್ತ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಆಗಿನಿಂದಲೇ ಸುಮಲತಾ ಅವರ ಅಭಿಮಾನಿಯಾಗಿ ಬಿಟ್ಟಿದ್ದಾಳೆ.

7 / 11
Special Invitee ಇಂದು ಅಭಿ ರಿಸೆಪ್ಷನ್: ಅಭಿಮಾನಿ ದೇವರು, ಧಾರವಾಡದ ಸೌಭಾಗ್ಯ ಸುಮಲತಾಗೆ ಸೀರೆ -ಧಾರವಾಡ ಫೇಡಾ ತರುತ್ತಿದ್ದಾಳೆ! ಏನಿದರ ‘ವಿಶೇಷ’

8 / 11
ಮೊದಲೆಲ್ಲಾ ಸುಮಲತಾ ನನಗೆ ಇಷ್ಟ ಅಂತೆಲ್ಲಾ ಗೋಡೆ ಮೇಲೆ ಬರೆಯುತ್ತಿದ್ದಳಂತೆ. ಆದರೆ ಅದನ್ನು ಬುಕ್ ನಲ್ಲಿ ದಿನಾಂಕ ಸಮೇತ ಬರೀ ಅಂತಾ ಮನೆಯವರು ಹೇಳಿದ ಬಳಿಕ ಅದನ್ನು ನಿಲ್ಲಿಸಿದ್ದಾಳೆ. ಇಂಥ ಸೌಭಾಗ್ಯ ಇದೀಗ ಸುಮಲತಾರನ್ನು ಭೇಟಿಯಾಗಲು ಹೋಗುತ್ತಿರೋದಕ್ಕೆ ಸಾಕಷ್ಟು ಖುಷಿಯಾಗಿದ್ದಾಳೆ.

9 / 11
ಸುಮಲತಾರಿಗೆ ಒಂದು ಸೀರೆ ಮತ್ತು ಧಾರವಾಡ ಫೇಡಾ ತೆಗೆದುಕೊಂಡಿದ್ದಾಳಂತೆ. ಇನ್ನು ಅಭಿಷೇಕ ಅಂಬರೀಶ್ ಗೆ ಬೊಕ್ಕೆ ನೀಡಲಿದ್ದಾಳಂತೆ - ಸೌಭಾಗ್ಯ, ಸುಮಲತಾ ಅಭಿಮಾನಿ.

10 / 11
ಕಳೆದ ಹಲವಾರು ದಿನಗಳಿಂದ ಸುಮಲತಾರ ಹೆಸರನ್ನೇ ಕನವರಿಸುತ್ತಿದ್ದ ಸೌಭಾಗ್ಯಗಳಿಗೆ ಇದೀಗ ಅವರನ್ನು ನೋಡೋ ಭಾಗ್ಯ ಸಿಗುತ್ತಿದೆ. ಹೀಗೆ ತನ್ನ ನೆಚ್ಚಿನ ಸುಮಲತಾರನ್ನು ನೋಡಿದ ಬಳಿಕ ಸೌಭಾಗ್ಯಳಿಗೆ ಖುಷಿ ಆಗೋದಲ್ಲದೇ ಆಕೆಯ ಮಾನಸಿಕ ಆರೋಗ್ಯದಲ್ಲಿಯೂ ಬದಲಾವಣೆ ಆಗೋ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

11 / 11
Narasimha Murti Pyati
Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ

ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ

ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್

ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ

ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ

ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್

ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ

40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?

ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ

ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ