- Kannada News Photo gallery After divorce with Naga Chaitanya Samantha Akkineni Off Social Media comments
ಡಿವೋರ್ಸ್ ಬಗ್ಗೆ ಸ್ಯಾಮ್ ಫ್ಯಾನ್ಸ್ ಮಾತನಾಡುವಂತಿಲ್ಲ; ಇದು ಸಮಂತಾ ಸೂಚನೆ
ಇಷ್ಟು ದಿನ ಸುಳ್ಳಾಗಲಿ ಎಂದು ಅಭಿಮಾನಿಗಳು ಕೋರುತ್ತಾ ಬಂದಿದ್ದ ಸುದ್ದಿ ನಿಜವಾಗಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಅಲ್ಲದೆ, ನೀವು ಈ ರೀತಿ ಮಾಡಬಾರದಿತ್ತು ಎಂದು ಫ್ಯಾನ್ಸ್ ಬೇಸರ ಹೊರ ಹಾಕಿದ್ದಾರೆ.
Updated on: Oct 02, 2021 | 5:37 PM

ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯ ದಾಂಪತ್ಯ ಜೀವನದಲ್ಲಿ ಬಿರುಕಾಗಿದೆ ಎಂಬ ವದಂತಿ ನಿಜವಾಗಿದೆ. ಇಬ್ಬರೂ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಡಿವೋರ್ಸ್ ವಿಚಾರ ಅಧಿಕೃತ ಮಾಡಿದ್ದಾರೆ.

ಇಷ್ಟು ದಿನ ಸುಳ್ಳಾಗಲಿ ಎಂದು ಅಭಿಮಾನಿಗಳು ಕೋರುತ್ತಾ ಬಂದಿದ್ದ ಸುದ್ದಿ ನಿಜವಾಗಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಅಲ್ಲದೆ, ನೀವು ಈ ರೀತಿ ಮಾಡಬಾರದಿತ್ತು ಎಂದು ಫ್ಯಾನ್ಸ್ ಬೇಸರ ಹೊರ ಹಾಕಿದ್ದಾರೆ.

ಈ ಸ್ಟಾರ್ ಜೋಡಿಯ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಜನರು ಹಲವು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಈ ವಿಚಾರದಲ್ಲಿ ಸಮಂತಾ ಅವರದ್ದೇ ತಪ್ಪು ಎಂಬುದು ಕೆಲವರ ಅಭಿಪ್ರಾಯ. ಹಾಗಾಗಿ ಅವರ ವಿರುದ್ಧ ಟೀಕೆ ವ್ಯಕ್ತವಾಗುವುದು ಸಹಜ. ಅದನ್ನು ಮೊದಲೇ ಅರಿತಿರುವ ಸಮಂತಾ ಅವರು ತಮ್ಮ ಪೋಸ್ಟ್ಗೆ ಕಮೆಂಟ್ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.

2017ರ ಅ.6ರಂದು ಹಿಂದೂ ಸಂಪ್ರದಾಯದ ಪ್ರಕಾರ ಇವರಿಬ್ಬರ ಮದುವೆ ನಡೆದಿತ್ತು. ಅ.7ರಂದು ಕ್ರೈಸ್ತ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳನ್ನು ನೆರವೇರಿತ್ತು.

ಸಾಕಷ್ಟು ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು ಎಂದು ಸಮಂತಾ ಬರೆದುಕೊಂಡಿದ್ದಾರೆ.




