Kannada News Photo gallery AI technology entered agriculture: Many farmers in Koppal benefits from weather watch
ಕೃಷಿಗೂ ಕಾಲಿಟ್ಟ ಎಐ ಟೆಕ್ನಾಲಜಿ: ವೆದರ್ ವಾಚ್ನಿಂದ ರೈತರಿಗೆ ಹತ್ತಾರು ಪ್ರಯೋಜನ
ಕೊಪ್ಪಳ, ಜನವರಿ 23: ಇದೀಗ ಎಲ್ಲಡೆ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಜೋರಾಗಿ ಸದ್ದು ಮಾಡುತ್ತಿದೆ. ಸುದ್ದಿ ನಿರೂಪಣೆಯಿಂದ ಹಿಡಿದು ಜನರ ಅನೇಕ ಕೆಲಸಗಳಿಗೆ ಎಐ ಟೆಕ್ನಾಲಜಿ ಬಳಕೆಯಾಗುತ್ತಿದೆ. ಇದೀಗ ಕೃಷಿಗೂ ಕೂಡಾ ಎಐ ಟೆಕ್ನಾಲಜಿ ಬಂದಿದೆ. ರೈತರು ತಮ್ಮ ಜಮೀನಿನಲ್ಲಿ ಪುಟ್ಟ ಮಷಿನ್ ಅಳವಡಿಸಿದ್ರೆ ಸಾಕು, ತಮ್ಮ ಬೆಳೆಗಳಿಗೆ ಎಷ್ಟು ನೀರು ಕೊಡಬೇಕು, ಗೊಬ್ಬರದ ಅವಶ್ಯಕತೆ ಇದೆಯಾ? ರೋಗರುಜಿನಗಳು ಬರುವ ಸಾಧ್ಯತೆ ಏನು, ಹವಾಮಾನ ಹೇಗಿದೆ ಎಂಬುದೂ ಸೇರಿದಂತೆ ಅನೇಕ ಮಾಹಿತಿ ರೈತರ ಮೊಬೈಲ್ಗೆ ಬರುತ್ತದೆ. ಹದಿನೈದು ದಿನದ ಹವಾಮಾನ ಮಾಹಿತಿ ರೈತರಿಗೆ ಮೊದಲೇ ಗೊತ್ತಾಗುತ್ತದೆ!