- Kannada News Photo gallery Ajay Devgn Daughter Nysa Devgn Angry over paparazzi's after they called her name wrong
‘ನನ್ನ ಹೆಸರು ಸರಿಯಾಗಿ ಹೇಳಿ’; ಕಿವಿಮಾತು ಹೇಳಿದ ಅಜಯ್ ದೇವಗನ್ ಮಗಳು ನಿಸಾ
ಅಜಯ್ ದೇವಗನ್ ಮಗಳು ಹೋದಲ್ಲಿ ಬಂದಲ್ಲಿ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಅವತ್ರಮಣಿ ಜೊತೆ ಕಾಣಿಸಿಕೊಂಡಿದ್ದಾರೆ.
Updated on: Apr 15, 2023 | 6:30 AM

ಅಜಯ್ ದೇವಗನ್ ಮಗಳು ನಿಸಾ ದೇವಗನ್ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಬೋಲ್ಡ್ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಹೆಚ್ಚು ಸುದ್ದಿಯಲ್ಲಿದ್ದಾರೆ.

ಅಜಯ್ ದೇವಗನ್ ಮಗಳು ಹೋದಲ್ಲಿ ಬಂದಲ್ಲಿ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಅವತ್ರಮಣಿ ಜೊತೆ ಕಾಣಿಸಿಕೊಂಡಿದ್ದಾರೆ.

ನಿಸಾ ಕಾಣಿಸಿಕೊಳ್ಳುತ್ತಿದ್ದಂತೆ ಕೆಲ ಪಾಪರಾಜಿಗಳು ‘ನೈಸಾ ನೈಸಾ..’ ಎಂದು ಕರೆದರು. ಇದರಿಂದ ಸಿಟ್ಟಾದರು ನಿಸಾ. ‘ನನ್ನ ಹೆಸರನ್ನು ಸರಿಯಾಗಿ ಹೇಳಿ. ಅದು ನೈಸಾ ಅಲ್ಲ ನಿಸಾ’ ಎಂದು ಪಾಪರಾಜಿಗಳ ಬಳಿ ಹೇಳಿದರು ಅವರು.

ಅಜಯ್ ದೇವಗನ್ ಅವರು ಬಾಲಿವುಡ್ನ ಬೇಡಿಕೆಯ ಹೀರೋ. ಅಷ್ಟೇ ಅಲ್ಲ, ನಿರ್ದೇಶನ, ನಿರ್ಮಾಣ ಕೂಡ ಮಾಡಿದ್ದಾರೆ. ಮಗಳನ್ನು ಚಿತ್ರರಂಗಕ್ಕೆ ಅವರೇ ಲಾಂಚ್ ಮಾಡಲಿ ಎಂದು ಅನೇಕರು ಕೋರಿದ್ದಾರೆ.

ಅಜಯ್ ದೇವಗನ್ ಅವರ ಅಭಿಮಾನಿ ಬಳಗ ಹಿರಿದಾಗಿದೆ. ಈ ಕಾರಣಕ್ಕೆ ನಿಸಾನ ಫಾಲೋ ಮಾಡುವವರ ಸಂಖ್ಯೆ ಹೆಚ್ಚಿದೆ. ಅವರು ಆದಷ್ಟು ಬೇಗ ಚಿತ್ರರಂಗಕ್ಕೆ ಬರಲಿ ಅನ್ನೋದು ಅಭಿಮಾನಿಗಳ ಕೋರಿಕೆ.














