Skin Care: ಬಾದಾಮಿಯಿಂದ ಹೊಳೆಯುವ ಚರ್ಮ ಪಡೆಯುವುದು ಹೇಗೆ?
ಬಾದಾಮಿಯ ಪುಡಿಯನ್ನು ಮುಖಕ್ಕೆ ಹಚ್ಚುವುದರಿಂದ ಅದು ತ್ವಚೆಯನ್ನು ಮೃದುವಾಗಿರಿಸುತ್ತದೆ. ಬಾದಾಮಿಯಲ್ಲಿರುವ ವಿಟಮಿನ್ ಇ ಚರ್ಮಕ್ಕೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ. ಇದು ಸ್ಕಿನ್ ಟೋನ್ ಅನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ.
Updated on: Jan 18, 2024 | 4:01 PM

ಬಾದಾಮಿ ಸೇವಿಸುವುದರಿಂದ ಜೀರ್ಣಕ್ರಿಯೆ, ಹೃದಯದ ಆರೋಗ್ಯ ಸೇರಿದಂತೆ ಅನೇಕ ರೀತಿಯಲ್ಲಿ ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಆದರೆ, ಬಾದಾಮಿ ನಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡಲು ಕೂಡ ಸಹಾಯಕವಾಗಿದೆ. ಬಾದಾಮಿಯ ಪುಡಿಯನ್ನು ಮುಖಕ್ಕೆ ಹಚ್ಚುವುದರಿಂದ ಅದು ತ್ವಚೆಯನ್ನು ಮೃದುವಾಗಿರಿಸುತ್ತದೆ.

ಬಾದಾಮಿಯಲ್ಲಿರುವ ವಿಟಮಿನ್ ಇ ಚರ್ಮಕ್ಕೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ.

ಬಾದಾಮಿಯ ಫೇಸ್ಪ್ಯಾಕ್ ಮಾಡಿಕೊಳ್ಳಲು 2 ಚಮಚ ಶ್ರೀಗಂಧದ ಪುಡಿ, 1 ಚಮಚ ಬಾದಾಮಿ ಪುಡಿ, ಟೀ ಚಮಚ ಜೇನುತುಪ್ಪ, 1 ಚಮಚ ಹಾಲು ತೆಗೆದುಕೊಳ್ಳಿ.

1 ಚಮಚ ಬಾದಾಮಿ ಪುಡಿಯನ್ನು 1 ಚಮಚ ಬಾದಾಮಿ ಪುಡಿಯೊಂದಿಗೆ ಸೇರಿಸಿ. ಬಳಿಕ ಅದಕ್ಕೆ 1 ಚಮಚ ಜೇನುತುಪ್ಪವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ 1 ಚಮಚ ಹಾಲು ಸೇರಿಸಿ. ಇದೆಲ್ಲವನ್ನೂ ಸರಿಯಾಗಿ ಮಿಕ್ಸ್ ಮಾಡಿ.

ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿದ ಬಳಿಕ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿರಿ. ಬಳಿಕ ಬೆರಳಿನಿಂದ ನಿಮ್ಮ ಮುಖವನ್ನು ಮೃದುವಾಗಿ ಮಸಾಜ್ ಮಾಡಿ ಮತ್ತು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

ನಂತರ ಮುಖದ ಚರ್ಮವನ್ನು ಒಣಗಿಸಿಕೊಂಡು, ಮಾಯಿಶ್ಚರೈಸರ್ ಹಚ್ಚಿ ಚರ್ಮವನ್ನು ತೇವವಾಗಿರಿಸಿಕೊಳ್ಳಿ.

ಈ ರೀತಿ ಮಾಡುವುದರಿಂದ ಬಾದಾಮಿ ಪೌಡರ್ ತ್ವಚೆಯಿಂದ ಸತ್ತ ಜೀವಕೋಶಗಳನ್ನು ಹೊರಹಾಕುತ್ತದೆ. ಬಾದಾಮಿಯಲ್ಲಿರುವ ವಿಟಮಿನ್ ಇ ಚರ್ಮಕ್ಕೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ. ಇದು ಸ್ಕಿನ್ ಟೋನ್ ಅನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ.

ಬಾದಾಮಿ ಫೇಸ್ಪ್ಯಾಕ್ ಚರ್ಮದ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡುತ್ತದೆ.

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.
Read More



