- Kannada News Photo gallery Ambassador of Rwanda to Belgaum Suvarna Soudha, Fida, Jacqueline Mukangira has seen it all, Kannada News
ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ರುವಾಂಡಾ ದೇಶದ ರಾಯಭಾರಿ ಫಿದಾ: ಸುತ್ತಾಡಿ ಎಲ್ಲಾ ಕಣ್ತುಂಬಿಕೊಂಡ ಜಾಕ್ವೆಲಿನ್
ಬೆಳಗಾವಿಗೆ ಇಂದು(ಭಾನುವಾರ) ಪೂರ್ವ ಆಫ್ರಿಕಾದ ರುವಾಂಡಾ ದೇಶದ ರಾಯಭಾರಿ ಶ್ರೀಮತಿ ಜಾಕ್ವೆಲಿನ್ ಮುಕಂಜಿರಾ ಅವರು ಆಗಮಿಸಿದ್ದು, ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿದರು. ಈ ವೇಳೆ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಬೆಳಗಾವಿ ಸುವರ್ಣ ವಿಧಾನಸೌಧವನ್ನು ಪರಿಚಯಿಸಿದರು.
Updated on: Sep 08, 2024 | 4:02 PM
Share

ಬೆಳಗಾವಿಗೆ ಆಗಮಿಸಿದ ಪೂರ್ವ ಆಫ್ರಿಕಾದ ರುವಾಂಡಾ ದೇಶದ ರಾಯಭಾರಿ ಶ್ರೀಮತಿ ಜಾಕ್ವೆಲಿನ್ ಮುಕಂಜಿರಾ ಅವರು ಇಂದು ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿದರು.

ಈ ವೇಳೆ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಬೆಳಗಾವಿ ಸುವರ್ಣ ವಿಧಾನಸೌಧವನ್ನು ಪರಿಚಯಿಸಿದರು.

ಸುವರ್ಣ ಸೌಧದ ವಿಧಾನಸಭೆ, ವಿಧಾನ ಪರಿಷತ್ ಸಭಾಂಗಣ, ಸೆಂಟ್ರಲ್, ಸಮಿತಿ ಸಭಾಂಗಣ, ಸಚಿವ ಸಂಪುಟ ಸಭಾಂಗಣವನ್ನು ವೀಕ್ಷಣೆ ಮಾಡಿಸಿದರು.

ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಾರ್ಯಚಟುವಟಿಕೆಗಳ ಮತ್ತು ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಳದ ಚಳಿಗಾಲ ಅಧಿವೇಶನ ಕುರಿತು ವಿವರಿಸಲಾಯಿತು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಉತ್ತರ ವಲಯದ ಮುಖ್ಯ ಎಂಜಿನಿಯರ್ ಎಚ್.ಸುರೇಶ್, ಅಪರಜಿಲ್ಲಾಧಿಕಾರಿ ವಿಜಕುಮಾರ್ ಹೊನಕೇರಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಸೊಬರದ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ ಹುಲಜಿ ಅವರು ಉಪಸ್ಥಿತರಿದ್ದರು.
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 16ರ ದಿನಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 16ರ ದಿನಭವಿಷ್ಯ
Horoscope Today: ಇಂದು ಈ ರಾಶಿಯವರು ಯಾರ ಹಸ್ತಕ್ಷೇಪವನ್ನೂ ಸಹಿಸಲಾರರು
ಕನ್ನಡಿಗ ರಾಹುಲ್ ದ್ರಾವಿಡ್ಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರಧಾನ
ಕನ್ನಡಿಗ ರಾಹುಲ್ ದ್ರಾವಿಡ್ಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರಧಾನ
ತಾವು ‘ಹೀರೋ’ ಆದ ಕತೆ ಹೇಳಿದ ಟಿಎನ್ ಸೀತಾರಾಮ್: ವಿಡಿಯೋ ನೋಡಿ
ಹಾರ್ದಿಕ್ ಪಾಂಡ್ಯ ಖರೀದಿಸಿರುವ ದುಬಾರಿ ಕಾರು ಹೇಗಿದೆ ನೋಡಿ
ಭೀಕರ ಅಪಘಾತದಲ್ಲಿ ಮೂವರು SIಗಳು ಸಾವು: ದುರಂತದ ಬಗ್ಗೆ SP ಹೇಳಿದ್ದಿಷ್ಟು
ಮೊದಲ ಮಗುವ ನಿರೀಕ್ಷೆಯಲ್ಲಿ ಸೂರ್ಯಕುಮಾರ್ ದಂಪತಿ
ಊಟದ ವಿಚಾರಕ್ಕೆ ಗಲಾಟೆ: ಯುವಕನ ಬಡಿದು ಕೊಂದ ಕಿರಾತಕರು
75 ಪಂದ್ಯಗಳ ನಂತರ ಸಿಡಿದ ಚೊಚ್ಚಲ ಶತಕ
ರಾಧಿಕಾ ಪಂಡಿತ್ ಬರ್ತಡೇ ಪಾರ್ಟಿ: ಇಲ್ಲಿದೆ ನೋಡಿ ವಿಡಿಯೋ
ಗವಿಮಠ ದಾಸೋಹಕ್ಕೆ ತಟ್ಟದ ಗ್ಯಾಸ್ ಸಿಲಿಂಡರ್ ಎಫೆಕ್ಟ್: ಏಕೆ ಗೊತ್ತಾ?
ಶಾಸಕ ಯತ್ನಾಳ್ ಪುತ್ರನ ಆರತಕ್ಷತೆಯಲ್ಲಿ ಜನವೋ ಜನ!
