AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Australian Open: 21ನೇ ಗ್ರ್ಯಾಂಡ್ ಸ್ಲ್ಯಾಮ್​ ಗೆದ್ದ ನಡಾಲ್! ಆಸ್ಟ್ರೇಲಿಯನ್ ಓಪನ್ 2022 ರ ಎಲ್ಲಾ ವಿಜೇತರ ಪಟ್ಟಿ ಇಲ್ಲಿದೆ

TV9 Web
| Updated By: ಪೃಥ್ವಿಶಂಕರ|

Updated on: Jan 30, 2022 | 9:39 PM

Share
ಶನಿವಾರ ನಡೆದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಡೇನಿಯಲ್ ಕಾಲಿನ್ಸ್ ಅವರನ್ನು 6-3, 7-6 ಸೆಟ್‌ಗಳಿಂದ ಸೋಲಿಸುವ ಮೂಲಕ ಆಶ್ಲೀ ಬಾರ್ಟಿ ಮಹಿಳಾ ಸಿಂಗಲ್ಸ್ ಪ್ರಶಸ್ತಿಗಾಗಿ ಆತಿಥೇಯ ರಾಷ್ಟ್ರದ 44 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದರು. ಇದು ಈ ಆಟಗಾರ್ತಿಯ ಮೂರನೇ ಪ್ರಮುಖ ಪ್ರಶಸ್ತಿಯಾಗಿದೆ. ಅವರು ಮೂರು ವಿಭಿನ್ನ ಮೇಲ್ಮೈಗಳಲ್ಲಿ ಈ ಮೂರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕಳೆದ ವರ್ಷ ವಿಂಬಲ್ಡನ್‌ನಲ್ಲಿ ಗ್ರಾಸ್ ಕೋರ್ಟ್‌ನಲ್ಲಿ ಮತ್ತು 2019 ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಗೆದ್ದ ಮೊದಲು ಚಾಂಪಿಯನ್ ಆದರು.

1 / 7
ರಾಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಡೇನಿಯಲ್ ಮೆಡ್ವೆಡೆವ್ ಅವರನ್ನು ಸೋಲಿಸಿ ದಾಖಲೆಯ 21 ನೇ ಪುರುಷರ ಸಿಂಗಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು. ರೋಚಕ ಫೈನಲ್ ಪಂದ್ಯದಲ್ಲಿ ನಡಾಲ್ 6-2, 7-6, 6-4,6-4,7-5 ಸೆಟ್‌ಗಳಿಂದ ಗೆದ್ದರು.

2 / 7
ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜ್‌ಸಿಕೋವಾ ಮತ್ತು ಕಟೆರಿನಾ ಸಿನ್ಯಾಕೋವಾ ಅವರು ಭಾನುವಾರ ನಡೆದ ಆಸ್ಟ್ರೇಲಿಯನ್ ಓಪನ್‌ನ ಫೈನಲ್‌ನಲ್ಲಿ ಕಜಕಿಸ್ತಾನ್‌ನ ಅನ್ನಾ ಡ್ಯಾನಿಲಿನಾ ಮತ್ತು ಬ್ರೆಜಿಲ್‌ನ ಬೀಟ್ರಿಜ್ ಹಡ್ಡಾದ್ ಮಾಯಾ ಅವರನ್ನು ಸೋಲಿಸುವ ಮೂಲಕ ತಮ್ಮ ನಾಲ್ಕನೇ ಗ್ರ್ಯಾಂಡ್‌ಸ್ಲಾಮ್ ಮಹಿಳಾ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು. ಜೆಕ್ ಜೋಡಿಯು ಶ್ರೇಯಾಂಕ ರಹಿತ ಜೋಡಿಯಾದ ಡೇನಿಯೆಲಿನಾ ಮತ್ತು ಹದದ್ ಮೈಯಾರನ್ನು 6-7(3), 6-4, 6-4 ಸೆಟ್‌ಗಳಿಂದ ಸೋಲಿಸಿದರು. ಇದು ನಂ.1 ಶ್ರೇಯಾಂಕದ ಮೊದಲ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿಯಾಗಿದೆ.

3 / 7
ನಿಕ್ ಕಿರಿಯೊಸ್ ಮತ್ತು ಥಾನಾಸಿ ಕೊಕಿನಾಕಿಸ್ ಅವರು ತಮ್ಮದೇ ದೇಶದ ಇತರ ಜೋಡಿಯಾದ ಥುಯ್ ಎಬ್ಡಾನ್ ಮತ್ತು ಮ್ಯಾಕ್ಸ್ ಪರ್ಸೆಲ್ ಅವರನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು.

4 / 7
ಜೂನಿಯರ್ ವಿಭಾಗದಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಕ್ರೊವೇಷಿಯಾದ ಪೆಟ್ರಾ ಮಾರ್ಕಿಂಕೊ ಪಾಲಾಯಿತು. ಅಗ್ರ ಶ್ರೇಯಾಂಕದ ಆಟಗಾರ್ತಿ ಬೆಲ್ಜಿಯಂನ ಸೋಫಿಯಾ ಕೊಸ್ಟೂಲ್ಸ್ ಅವರನ್ನು ಫೈನಲ್‌ನಲ್ಲಿ 7-5, 6-1 ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದರು.

5 / 7
ಅಮೆರಿಕದ ಬ್ರುನು ಕುಜುಹರಾ ಅವರು ಜಕುಬ್ ಮೆನ್ಸಿಕ್ ಅವರನ್ನು 7-6(4) 6-7(8) 7-5 ಸೆಟ್‌ಗಳಿಂದ ಸೋಲಿಸಿ ಜೂನಿಯರ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

6 / 7
ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡೆನೊವಿಕ್ ಮತ್ತು ಕ್ರೊಯೇಷಿಯಾದ ಇವಾನ್ ಡೊಡಿಚ್ ಅವರು ಆಸ್ಟ್ರೇಲಿಯಾದ ಜೇಮಿ ಫೋರ್ಲಿಸ್ ಮತ್ತು ಜೇಸನ್ ಕುಬ್ಲರ್ ಅವರನ್ನು 6-3, 6-4 ಸೆಟ್‌ಗಳಿಂದ ಸೋಲಿಸಿ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು. 2014 ರಲ್ಲಿ ಡೇನಿಯಲ್ ನೆಸ್ಟರ್ ಅವರೊಂದಿಗೆ ಮ್ಲಾಡೆನೋವಿಕ್ ಈ ಪ್ರಶಸ್ತಿಯನ್ನು ಗೆದ್ದರು. ಇದಲ್ಲದೆ, ಅವರು 2018 ಮತ್ತು 2020 ರಲ್ಲಿ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಡೋಡಿಚ್ ಈ ಹಿಂದೆ ಎರಡು ಪುರುಷರ ಡಬಲ್ಸ್ ಮತ್ತು ಮೂರು ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

7 / 7
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು

ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ

ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ

ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ

ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್

ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ

ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ

ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ

ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ

ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..